ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಕನ್ನಡದ ಮೊದಲ ಸಿನಿಮಾವಿದು

ಕೊರೊನಾ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳು ಮತ್ತೆ ಓಪನ್ ಆಗುತ್ತಿವೆ. ಸುಮಾರು 7 ತಿಂಗಳುಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳು ಇದೀಗ ಸಿನಿಮಾ ಪ್ರದರ್ಶನಕ್ಕೆ ಸಿದ್ಧವಾಗುತ್ತಿವೆ. ಸ್ಯಾಂಡಲ್ ವುಡ್ ನಲ್ಲಿಯೂ ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ತಯಾರಿ ಮಾಡಿಕೊಳ್ಳುತ್ತಿವೆ.

ಕೊರೊನಾ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ 'ರಣಂ'. ಚಿರಂಜೀವಿ ಸರ್ಜಾ ಮತ್ತು ಚೇತನ್ ಕುಮಾರ್ ಅಭಿನಯದ ಈ ಸಿನಿಮಾ ಲಾಕ್ ಡೌನ್ ಬಳಿಕ ಮೊದಲ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಗಾಂಧಿನಗರದ ನರ್ತಕಿ ಚಿತ್ರಮಂದಿರ ಪ್ರಮುಖ ಚಿತ್ರಮಂದಿರವಾಗಿ 'ರಣಂ' ಸಿನಿಮಾ ಸ್ವಾಗತಕ್ಕೆ ಸಜ್ಜಾಗಿದೆ.

'ರಣಂ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಚಿರು ಮತ್ತೆ ಅಭಿಮಾನಿಗಳನ್ನು ರಂಜಿಸಲು ಬರ್ತಿದ್ದಾರೆ.

Ranam First Kannada Movie To Release In Theatres Post Lockdown

ಇನ್ನೂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಚೇತನ್ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ 'ರಣಂ' ಸಿನಿಮಾ ನಟ ಚೇತನ್ ಬದುಕಿಗೆ ತುಂಬ ಹತ್ತಿರವಾದ ಸಿನಿಮಾವಂತೆ. ಚೇತನ್ ನೈಜ ಬದುಕಿನ ಹಾಗೆ ಸಿನಿಮಾದಲ್ಲೂ ಸಾಮಾಜಿಕ ಹೋರಾಟ, ರೈತಪರ ಕಾಳಜಿ ಇರುವಂತಹ ನಾಯಕನ ಪಾತ್ರ ಇದಾಗಿದೆಯಂತೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುವ ಚೇತನ್ ಈ ಬಾರಿ ಕೂಡ ಒಂದು ತೂಕದ ಪಾತ್ರದ ಮೂಲಕ ಬರ್ತಿದ್ದಾರೆ.

ಚಿತ್ರದಲ್ಲಿ ಚೇತನ್ ಗೆ ನಾಯಕಿಯಾಗಿ ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ವರಲಕ್ಷ್ಮಿ ಕೂಡ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಜೊತೆ 'ಮಾಣಿಕ್ಯ' ಚಿತ್ರದಲ್ಲಿ ಅಭಿನಯಿಸಿದ್ದ ವರಲಕ್ಷ್ಮಿ ನಂತರ ಅರ್ಜುನ್ ಸರ್ಜಾ ಅಭಿನಯದ 'ವಿಸ್ಮಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ 'ರಣಂ' ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

More from Filmibeat

English summary
Chiranjeevi Sarja and Chetan Kumar starrer Ranam First Kannada Movie To Release In Theatres Post Lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X