For Quick Alerts
  ALLOW NOTIFICATIONS  
  For Daily Alerts

  ಸಕಲೇಶಪುರದಲ್ಲಿ ನಡೆದ ಅಮಾನವೀಯ ಘಟನೆ ಖಂಡಿಸಿದ ಬಾಲಿವುಡ್ ನಟ

  |

  ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದಿರುವ ಅಮಾನವೀಯ ಘಟನೆ ಬಾಲಿವುಡ್ ನಟ ರಣದೀಪ್ ಹೂಡ ಅವರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಹಾಸನದ ಸಕಲೇಶಪುರದಲ್ಲಿ ಕೋತಿಗಳಿಗೆ ವಿಷವಿಕ್ಕಿ ಕೊಂದಿರುವ ಘಟನೆ ಇತ್ತೀಚೆಗೆ ನಡೆದಿದೆ. ಸುಮಾರು 60 ಕೋತಿಗಳನ್ನು ಕೊಲ್ಲಲಾಗಿದ್ದು, ಕೋತಿಗಳ ಮೃತ ದೇಹಗಳನ್ನು ರಸ್ತೆಯಲ್ಲಿ ಬಿಸಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಇದೇ ವಿಡಿಯೋವನ್ನು ಹಂಚಿಕೊಂಡಿರುವ ನಟ ರಣದೀಪ್ ಹೂಡಾ, ''ಇದು ಅತ್ಯಂತ ಹೇಯವಾದ ಘಟನೆ. 60ಕ್ಕೂ ಹೆಚ್ಚು ಕೋತಿಗಳಿಗೆ ವಿಷವಿಕ್ಕಿ ಅವುಗಳನ್ನು ಚೀಲದಲ್ಲಿ ತುಂಬಿ ಸಕಲೇಶಪುರದ ಬೇಗೂರು ಬಳಿ ರಸ್ತೆಯಲ್ಲಿ ಬಿಸಾಡಲಾಗಿದೆ'' ಎಂದಿದ್ದಾರೆ ರಣದೀಪ್ ಹೂಡ.

  ಈ ಹೇಯ ಕೃತ್ಯ ಮಾಡಿರುವವರಿಗೆ ಸೂಕ್ತ ಶಿಕ್ಷೆ ನೀಡಿ ಎಂದು ರಣದೀಪ್ ಹೂಡ ಮನವಿ ಮಾಡಿದ್ದು, ತಮ್ಮ ಟ್ವೀಟ್ ಅನ್ನು ಕರ್ನಾಟಕ ಮುಖ್ಯಮಂತ್ರಿಗಳಿಗೆ, ರಾಜ್ಯ ಅರಣ್ಯ ಇಲಾಖೆಗೆ, ಕೇಂದ್ರ ಅರಣ್ಯ ಮಂತ್ರಿಗೆ ಟ್ಯಾಗ್ ಮಾಡಿದ್ದಾರೆ.

  ಘಟನೆಯು ಬುಧವಾರ ನಡೆದಿದ್ದು 60 ಕೋತಿಗಳಿಗೆ ಯಾರೊ ಕಿಡಿಗೇಡಿಗಳು ವಿಷವಿಕ್ಕಿ ಮೂಟೆಗಳಲ್ಲಿ ತುಂಬಿ ಬೇಗೂರು ಬಳಿಯ ರಸ್ತೆಯಲ್ಲಿ ಬಿಸಾಡಿದ್ದಾರೆ, ಸ್ಥಳೀಯರ ಸಹಾಯದೊಂದಿಗೆ ಅಧಿಕಾರಿಗಳು 14 ಕೋತಿಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಪ್ರಕರಣ ಸಹ ದಾಖಲಾಗಿದೆ.

  ಇನಟ ರಣದೀಪ್ ಹೂಡ ಪರಿಸರ ಹಾಗೂ ಪ್ರಾಣಿ ಪ್ರೇಮಿ ಆಗಿದ್ದು, ಆಗಾಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಪರಿಸರ ಉಳಿವಿನ ಕುರಿತಾಗಿ ಜಾಗೃತಿ ಸಂದೇಶಗಳನ್ನು ನೀಡುತ್ತಿರುತ್ತಾರೆ.

  ಬಾಲಿವುಡ್‌ನ ಖ್ಯಾತ ನಟರಾಗಿರುವ ರಣದೀಪ್ ಹೂಡಾ ಹಾಲಿವುಡ್ ಸಿನಿಮಾ ಒಂದರಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆ ಆದ ಸಲ್ಮಾನ್ ಖಾನ್ ಸಿನಿಮಾ 'ರಾಧೆ'ಯಲ್ಲಿ ವಿಲನ್ ಪಾತ್ರದಲ್ಲಿ ರಣದೀಪ್ ನಟಿಸಿದ್ದರು, ಅದಕ್ಕೂ ಹಿಂದೆ ಹಾಲಿವುಡ್ ಆಕ್ಷನ್ ಸಿನಿಮಾ 'ಎಕ್ಸ್ಟ್ರಾಕ್ಷನ್‌'ನಲ್ಲಿ ರಣದೀಪ್ ನಟಿಸಿದ್ದರು.

  English summary
  Actor Randeep Hooda condemns heinous act did by strangers in Hassan district Sakaleshpura. Some one killed 60 monkeys by poisoning them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X