Ranganayaka Twitter Review: ಜಗ್ಗೇಶ್ ಯಾಕೋ ಎಡವಿದ್ದಾರೆ, ನಾನು ನೋಡಿದ ಕೆಟ್ಟ ಸಿನಿಮಾ!

ಜಗ್ಗೇಶ್ ನಟನೆಯ 'ರಂಗನಾಯಕ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗುರುಪ್ರಸಾದ್ ನಿರ್ದೇಶನದ ಜೊತೆಗೆ ತಾವೇ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾ ಬಳಿಕ ಅದೇ ಕಾಂಬಿನೇಷನ್‌ 3ನೇ ಸಿನಿಮಾ ಇದು.

'ತೋತಾಪುರಿ' ಸರಣಿ ಸಿನಿಮಾಗಳನ್ನು ಮಾಡಿ ಸೋತಿದ್ದ ಜಗ್ಗಣ್ಣ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಮಾಡಿ ಗೆದ್ದಿದ್ದರು. ಆದರೆ 'ರಂಗನಾಯಕ' ಸಿನಿಮಾ ಯಾಕೋ ಪ್ರೇಕ್ಷಕರಿಗೆ ಬೇಸರ ತರಿಸಿದೆ. ಇನ್ನು ಹಬ್ಬದ ಸಂದರ್ಭದಲ್ಲಿ ಯಾಕೋ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸಿನಿಮಾ ಪ್ರೇಕ್ಷಕರ ಬರ ಎದುರಿಸುತ್ತಿದೆ.

Ranganayaka Twitter Review How Audiences Reacts to Jaggesh s Latest Film on Social Media

ವೀಕೆಂಡ್‌ನಲ್ಲಿ 'ರಂಗನಾಯಕ' ಪ್ರೇಕ್ಷಕರ ಮನಗೆಲ್ಲುತ್ತಾನಾ? ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರದಲ್ಲಿರು ಅಡಲ್ಟ್ ಕಾಮಿಡಿ, ಪೋಲಿ ಡೈಲಾಗ್‌ಗಳ ಬಗ್ಗೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿ ಕೆಲವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದೆ ಓದಿ.

ಜಗ್ಗೇಶ್ ಯಾಕೋ ಎಡವಿದ್ದಾರೆ ಅನಿಸುತ್ತೆ

ನರಸಿಂಹ ಆಚಾರ್ ಎಂಬುವವರು ಟ್ವೀಟ್ ಮಾಡಿ 'ರಂಗನಾಯಕ' ಕನ್ನಡದ ಹ್ಯಾಟ್ರಿಕ್ ಹೊಡಿಬೇಕಾದ ಕಾಂಬಿನೇಷನ್ ಸಿನಿಮಾ. ಆದ್ರೆ ಪ್ರೇಕ್ಷಕನ ನಗಿಸೋ ಪ್ರಯತ್ನದಲ್ಲಿ ದ್ವಂದಾರ್ಥ ಮತ್ತು ಅಡಲ್ಟ್ ಕಾಮಿಡಿ ಇರೋ ಕಂಟೆಂಟ್ ಬರೆದರೆ ಹೇಗೆ ಹೇಳಿ. ಜಗ್ಗೇಶ್ ಯಾಕೋ ಎಡವಿದ್ದಾರೆ ಅಂತ ಅನಿಸುತ್ತೆ. ಅವರು ಈ ಸಿನಿಮಾ ನಾಯಕ ಅಂತೂ ಅಲ್ಲ.. ಹೋಗ್ಲಿ ಗುರುಪ್ರಸಾದ್ ಕೂಡ ಅಲ್ಲ..ಪೋಲಿ ಜೋಕ್‌ಗಳು ಇವೆ ಅಷ್ಟೇ" ಎಂದಿದ್ದಾರೆ.

Ranganayaka Twitter Review How Audiences Reacts to Jaggesh s Latest Film on Social Media

ಮುಂದುವರೆಸಿ ಬರೆದಿರುವ ಅವರು "ಹತಾಶ ಪ್ರೇಕ್ಷಕ ಅಂತ ಹೇಳಿ ತುಂಬಾ ಬಿಲ್ಡಪ್ ತಗೊಂಡು ಮತ್ತೊಂದು ಡಿಸಾಸ್ಟರ್‌ನ ಕೊಟ್ಟ ಕೀರ್ತಿ ಚಿತ್ರದ ನಿರ್ಮಾಪಕ ವಿಖ್ಯಾತ್‌ಗೆ ಸಲ್ಲಬೇಕು. ott ಇಂದ ದುಡ್ಡು ಬಂದು ಹಾಕಿದ ಹಣ ವಾಪಸ್ ಬರಲಿ ಅಷ್ಟೇ..ಗುರುಪ್ರಸಾದ್ ದಯವಿಟ್ಟು ಒಳ್ಳೆ ಸಿನಿಮಾ ನೀವು ನೋಡೇ ಇಲ್ಲ ಹಾಗೂ ಅದರಿಂದ ಕಲಿತಿಲ್ಲ ಅನ್ನೋದು ಪಕ್ಕಾ ಆಯ್ತು ಅಪ್‌ಡೇಟ್ ಆಗಿ ಪ್ಲೀಸ್" ಎಂದಿದ್ದಾರೆ.

ನಗುವಿನ ದರ್ಬಾರ್

"ರಂಗನಾಯಕ ನಗುವಿನ ಹಬ್ಬ. ಮಿಸ್ ಮಾಡಿಕೊಳ್ಳಬೇಡಿ. ದ್ವಂದ್ವಾರ್ಥದ ಡೈಲಾಗ್‌ಗಳು ವಯಸ್ಕರಿಗೆ ಮಾತ್ರ ಎನ್ನುವ ಎಚ್ಚರ ಇರಲಿ" ಎಂದು ಪ್ರಸನ್ನ ಎಂಬುವವರು ಟ್ವೀಟ್ ಮಾಡಿದ್ದಾರೆ.

ನಾನು ನೋಡಿದ ಕೆಟ್ಟ ಸಿನಿಮಾ

ಮಿಥುನ್ ಎಂಬುವವರು ಟ್ವೀಟ್ ಮಾಡಿ "ನಾನು ಚಿತ್ರಮಂದಿರದಲ್ಲಿ ನೋಡಿದ ಕೆಟ್ಟ ಸಿನಿಮಾ ರಂಗನಾಯಕ, ಇನ್ನು ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ.

ಇನ್ನಾದ್ರೂ ಒಳ್ಳೆ ಕಥೆ ಆಯ್ಕೆ ಮಾಡಿ

"ಜಗ್ಗೇಶ್ ನೀವು ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ ನೀವು ಸಂಸದರು ಮತ್ತು ಹಿರಿಯ ನಟ. ಈ ಎರಡೂ ಮಾನದಂಡಗಳು ನಿಮ್ಮ ಅಭಿನಯ ಹಾಗೂ ಪಾತ್ರಗಳಿಂದ ಕರ್ನಾಟಕದ ಜನರಿಗೆ ಮಾದರಿ ಆಗಬೇಕು. 'ರಂಗನಾಯಕ', 'ತೋತಾಪುರಿ' ರೀತಿಯ ಅಗ್ಗದ ವಯಸ್ಕ ಕಾಮಿಡಿ ಬಿಟ್ಟು ಉತ್ತಮ ಸ್ಕ್ರಿಪ್ಟ್‌ಗಳನ್ನು ಆಯ್ಕೆಮಾಡಿ ಎಂದು ರಾಘವೇಂದ್ರ ಅಡಿಗ ಎಂಬುವವರು ಬರೆದಿದ್ದಾರೆ.

ರಂಗನಾಯಕ ತರ ಚಿತ್ರ ಮಾಡಬೇಡಿ

"ನಿಜವಾಗಲೂ ಬೇಕಿದ್ದರೆ 'ಮಠ', 'ಎದ್ದೇಳು ಮಂಜುನಾಥ' ಇನ್ನೊಂದು ಬಾರಿ ರಿಲೀಸ್ ಮಾಡಿ, ನೋಡ್ತಿವಿ ಆದರೆ ರಂಗನಾಯಕ ತರ ಚಿತ್ರ ಮಾಡಬೇಡಿ, ಗುರು-ಜಗ್ಗೇಶ್ ಮತ್ತೆ ಒಂದಾಗಿ ಚಿತ್ರ ಮಾಡ್ತಾರೆ ಅಂತ ಕಾದು ಕುಳಿತವರಿಗೆ ದೊಡ್ಡ ಮೋಸ. ಆ ಕನಸೇ ಚೆನ್ನಾಗಿತ್ತು. ಮನೆಗೆ ಬಂದು ಅದೇ ನೋಡಿದ್ದಾಯಿತು" ಎಂದು ಪ್ರವೀಣ್ ಶಂಕರ್ ಟ್ವೀಟ್ ಮಾಡಿದ್ದಾರೆ.

ಪ್ರತಿಯೊಬ್ಬ ಕನ್ನಡಿಗ ಚಿತ್ರ ನೋಡಬೇಕು

ಜಗ್ಗೇಶ್ ನಿಮ್ಮ ನಟನೆ ಬಗ್ಗೆ ಏನು ಹೇಳಿದರು ಕಡಿಮೆ ನೇ. ಗುರುಪ್ರಸಾದ್ ಅವರ ನಟನೆ ಮತ್ತು ನಿರ್ದೇಶನ ಸೂಪರ್. ಈ ಸಿನಿಮಾ ನಾ ದೊಡ್ಡ ಸ್ಟಾರ್ ನಟರು ನೋಡಬೇಕು. ಕನ್ನಡಕ್ಕೆ ಹೇಗೆ ಅನ್ಯಾಯ ಆಗುತ್ತಿದೆ ಎಂದು ತಿಳಿಯುತ್ತದೆ. ಪ್ರತಿಯೊಬ್ಬ ಕನ್ನಡಿಗ ಈ ಸಿನಿಮಾ ನೋಡಬೇಕು.
ರಂಗನಾಯಕ ಸಿನಿಮಾ 1911ರಲ್ಲಿ ಯಾಕೆ ಬಿಡುಗಡೆ ಆಗಲಿಲ್ಲ?" ಎಂದು ಮತ್ತೊಬ್ಬರು ಬರೆದಿದ್ದಾರೆ.

More from Filmibeat

English summary
Explore What is Audience Responses To Ranganayaka Kannada Movie On Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X