twitter
    For Quick Alerts
    ALLOW NOTIFICATIONS  
    For Daily Alerts

    'ರಂಗನಾಯಕಿ' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

    |

    ಚಿತ್ರದ ಟೈಟಲ್ ಮೂಲಕ ಸುದ್ದಿ ಮಾಡುತ್ತಿರುವ 'ರಂಗನಾಯಕಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

    ಸಿನಿಮಾದ ಪೋಸ್ಟರ್ ಚಿತ್ರದ ಕಥೆ ಬಗ್ಗೆ ಕುತೂಹಲ ಹುಟ್ಟಿಸಿದೆ. ಅದಿತಿ ಪ್ರಭುದೇವ ಸಿನಿಮಾದ ನಾಯಕಿಯಾಗಿದ್ದಾರೆ. ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ನೋಡುತ್ತಿದ್ದರೆ, ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇರುವುದು ತಿಳಿಯುತ್ತದೆ.

    ಅಂದು ಆರತಿ ಇಂದು ಅಧಿತಿ: 'ರಂಗನಾಯಕಿ' ಆರಂಭಕ್ಕೆ ವಿವಾದ.! ಅಂದು ಆರತಿ ಇಂದು ಅಧಿತಿ: 'ರಂಗನಾಯಕಿ' ಆರಂಭಕ್ಕೆ ವಿವಾದ.!

    'ಹಗ್ಗದ ಕೊನೆ', 'ಆಕ್ಟರ್', 'ಆ ಕರಾಳ ರಾತ್ರಿ', 'ಪುಟ 109'' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡುತ್ತಿರುವ ದಯಾಳ್ ಈಗ ರಂಗನಾಯಕಿ ಕಥೆ ಹೇಳುತ್ತಿದ್ದಾರೆ. ಏಪ್ರಿಲ್ 26 ರಂದು ರಂಗನಾಯಕಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ.

    ranganayaki kannada movie first look poster released

    ಮತ್ತೊಂದು ಕಡೆ ಸಿನಿಮಾದ ಸಬ್ ಟೈಟಲ್ 'ವಾಲ್ಯೂಮ್ 1-ವರ್ಜಿನಿಟಿ' ಎಂದು ಇರುವುದು ಚರ್ಚೆಗೆ ಕಾರಣವಾಗಿದೆ. ಎಸ್ ವಿ ನಾರಾಯಣ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಬಿ ರಾಕೇಶ್ ಸಿನಿಮಾಟೋಗ್ರಾಫಿ, ಮಣಿಕಾಂತ್ ಕದ್ರಿ ಮ್ಯೂಸಿಕ್ ಸಿನಿಮಾದಲ್ಲಿ ಇರಲಿದೆ.

    'ರಂಗನಾಯಕಿ'ಯಾದ ನಟಿ ಅದಿತಿ ಪ್ರಭುದೇವ 'ರಂಗನಾಯಕಿ'ಯಾದ ನಟಿ ಅದಿತಿ ಪ್ರಭುದೇವ

    'ರಂಗನಾಯಕಿ' ಸಿನಿಮಾದಲ್ಲಿ ಅದಿತಿ ಪ್ರಭುದೇವ, ಶ್ರೀನಿ ಹಾಗೂ ತ್ರಿವಿಕ್ರಮ್ ನಟಿಸಿದ್ದಾರೆ. ಈ ಚಿತ್ರದ ಹೆಸರು ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ರಂಗನಾಯಕಿ ಸಿನಿಮಾವನ್ನು ನೆನಪು ಮಾಡುತ್ತಿದೆ.

    English summary
    Actress Aditi Prabhudeva's 'Ranganayaki' kannada movie first look poster released. The movie is directing by Dayal Padmanabhan.
    Friday, April 26, 2019, 10:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X