ಶಿವಣ್ಣನ 'ಆಯುಷ್ಮಾನ್ ಭವ' ಜೊತೆ 'ರಂಗನಾಯಕಿ' ಪ್ರವೇಶ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಸಿನಿಮಾ ನವೆಂಬರ್ 1ಕ್ಕೆ ತೆರೆಗೆ ಬರುತ್ತಿದೆ. ಪಿ ವಾಸು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಶಿವಣ್ಣ, ರಚಿತಾ ರಾಮ್, ಅನಂತ್ ನಾಗ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.
ಆಯುಷ್ಮಾನ್ ಭವ ಸಿನಿಮಾ ಜೊತೆ ಬೇರೆ ಯಾವುದಾದರೂ ಸಿನಿಮಾ ಬರುತ್ತಾ ಎಂದು ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸರ್ಪ್ರೈಸ್ ಇಲ್ಲಿದೆ.
ಹೌದು, ಆಯುಷ್ಮಾನ್ ಭವ ಸಿನಿಮಾ ಜೊತೆ ರಂಗನಾಯಕಿ ಪ್ರವೇಶವಾಗುತ್ತಿದೆ. ಅಧಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್ ನಟಿಸಿರುವ ಈ ಚಿತ್ರವನ್ನ ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.

ರಂಗನಾಯಕಿ ಮಹಿಳೆ ಪ್ರಧಾನ ಕಥೆಯಾಗಿದ್ದು, ಅದ್ಭುತವಾಗಿ ಮೂಡಿಬಂದಿರಬಹುದು ಎಂಬ ಭರವಸೆ ಮೂಡಿಸಿದೆ ಟ್ರೈಲರ್. ಎಸ್ ವಿ ನಾರಾಯಣ್ ಅವರು ಈ ಚಿತ್ರ ನಿರ್ಮಿಸಿದ್ದು, ನವೀನ್ ಕೃಷ್ಣ ಸಂಭಾಷಣೆ ರಚಿಸಿದ್ದಾರೆ.
ನವೆಂಬರ್ 1 ರಂದು ಸರ್ಕಾರಿ ರಜೆ ಇದೆ, ಯಾವುದಾದರೂ ಸಿನಿಮಾಗೆ ಹೋಗೋಣ ಎಂದು ಪ್ಲಾನ್ ಮಾಡಿದ್ರೆ, ಈ ಎರಡು ಕನ್ನಡ ಸಿನಿಮಾಗಳು ನಿಮ್ಮನ್ನು ರಂಜಿಸಲು ಸಿದ್ಧವಾಗಿದೆ. ಬಹುಶಃ ಮುಂದಿನ ದಿನದಲ್ಲಿ ಮತ್ಯಾವುದಾದರು ಸಿನಿಮಾ ಈ ಎರಡು ಚಿತ್ರಗಳ ಜೊತೆ ಸೇರಬಹುದು.


Click it and Unblock the Notifications