ಕನ್ನಡಕ್ಕೆ ಡಬ್ ಆಗಿದೆ 'ರಂಗಸ್ಥಳಂ', ಯಾವಾಗ ಬಿಡುಗಡೆ ?

ಡಬ್ಬಿಂಗ್ ಸಿನಿಮಾಗಳು ಬಂದರ ನಂತರ ಒಂದರಂತೆ ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ. ಕಾಲಿವುಡ್ ನಟ ಅಜಿತ್ ಅಭಿನಯದ ಎರಡ್ಮೂರು ತಮಿಳು ಸಿನಿಮಾಗಳು ಕನ್ನಡಕ್ಕೆ ಬಂದಿವೆ. ಜೊತೆಗೆ 'ವಿಶ್ವಾಸಂ' ಸಿನಿಮಾ ಸಹ ಬಿಡುಗಡೆಗೆ ಸಿದ್ಧವಾಗಿದೆ.

ಇತ್ತೀಚಿಗೆ ಮಲೆಯಾಳಂನ 'ಓರು ಆಡಾರ್ ಲವ್' ಕನ್ನಡಲ್ಲಿಯೂ ರಿಲೀಸ್ ಆಗಿತ್ತು. ಅದರ ನಂತರ ಟಾಲಿವುಡ್ ನ ಸೂಪರ್ ಹಿಟ್ ಚಿತ್ರ 'ರಂಗಸ್ಥಳಂ' ಕನ್ನಡಕ್ಕೆ ಡಬ್ ಆಗಿದೆ. ತೆಲುಗಿನ ನಿರ್ಮಾಪಕರೇ ಈ ಸಿನಿಮಾವನ್ನು ಮೂರು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಡಬ್ಬಿಂಗ್ ವಿರುದ್ಧದ ಹೋರಾಟಗಳು ನಡೆದಿತ್ತಾದರೂ ಡಬ್ಬಿಂಗ್ ಗೆ ಕಾನೂನು ಮನ್ನಣೆ ಸಿಕ್ಕ ಮೇಲೆ ಹೋರಾಟಗಳು ಕಡಿಮೆಯಾದವು. ಇನ್ನೊಂದು ಕಡೆ ಡಬ್ಬಿಂಗ್ ಸಿನಿಮಾಗಳ ಬಿಡುಗಡೆ ಸಹ ಹೆಚ್ಚಾಯ್ತು.

ಹಾಗಾದರೆ, ಕನ್ನಡದಲ್ಲಿ 'ರಂಗಸ್ಥಳಂ' ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ವಿವರ ಮುಂದಿದೆ ಓದಿ...

ಕನ್ನಡದ ಪೋಸ್ಟರ್ ಬಿಡುಗಡೆ

ಕನ್ನಡದ ಪೋಸ್ಟರ್ ಬಿಡುಗಡೆ

ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದ 'ರಂಗಸ್ಥಳಂ' ಸಿನಿಮಾ ಇದೀಗ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿಯೂ ಡಬ್ ಆಗಿದೆ. ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗಿ ದೊಡ್ಡ ಗಳಿಕೆ ಮಾಡಿದ್ದ ಈ ಚಿತ್ರ ಉಳಿದ ಭಾಷೆಯಲ್ಲಿಯೂ ಬರುತ್ತಿದೆ. ಕನ್ನಡದ ಪೋಸ್ಟರ್ ಸಹ ಈಗಾಗಲೇ ಹೊರ ಬಂದಿದೆ.

ಕೆಲವೇ ವಾರಗಳಲ್ಲಿ ಬಿಡುಗಡೆ

ಕೆಲವೇ ವಾರಗಳಲ್ಲಿ ಬಿಡುಗಡೆ

ಕನ್ನಡದಲ್ಲಿ ಚಿತ್ರದ ಹೆಸರು 'ರಂಗಸ್ಥಳ' ಆಗಿದೆ. ಜಿ ಮೂವಿಸ್ ಬೆಂಗಳೂರು ಸಹಭಾಗಿತ್ವದಲ್ಲಿ ಚಿತ್ರ ಡಬ್ ಆಗಿದೆ. ಸಿನಿಮಾ ಮಾರ್ಚ್ ಕೊನೆ ವಾರದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿನ 'ಮಯಾಬಜಾರ್' ನಂತರ ಈ ಸಿನಿಮಾ ಕನ್ನಡಕ್ಕೆ ಬರುತ್ತಿದೆ. ಅಶ್ವಿನಿ ಆರ್ಟ್ಸ್ ಕರ್ನಾಟಕದಲ್ಲಿ ಚಿತ್ರವನ್ನು ಹಂಚಿಕೆ ಮಾಡುತ್ತಿದೆ.

ತೆಲುಗಿನ ಗಾಯಕಿಯಿಂದ ಹಾಡು

ತೆಲುಗಿನ ಗಾಯಕಿಯಿಂದ ಹಾಡು

'ರಂಗಸ್ಥಳಂ' ಸಿನಿಮಾದಲ್ಲಿ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿ ಒಂದಾದ 'ರಂಗಮ್ಮ.. ಮಂಗಮ್ಮ..' ಹಾಡು ದೊಡ್ಡ ಜನಪ್ರಿಯತೆ ಪಡೆದಿತ್ತು. ಈ ಹಾಡನ್ನು ಎಮ್ ಎಮ್ ಮಾನಸಿ ಹಾಡಿದ್ದರು. ವಿಶೇಷ ಅಂದರೆ, ಇದೇ ಹಾಡನ್ನು ಕನ್ನಡಲ್ಲಿ ಕೂಡ ಅವರೇ ಹಾಡಲಿದ್ದಾರೆ.

210 ಕೋಟಿ ಗಳಿಕೆ ಮಾಡಿದ್ದ ಸಿನಿಮಾ

210 ಕೋಟಿ ಗಳಿಕೆ ಮಾಡಿದ್ದ ಸಿನಿಮಾ

'ರಂಗಸ್ಥಳಂ' ಕಳೆದ ವರ್ಷ ಬಿಡುಗಡೆಯಾಗಿತ್ತು. 60 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ ಬರೋಬ್ಬರಿ 210 ಕೋಟಿಯನ್ನು ಸಿನಿಮಾ ಗಳಿಕೆ ಮಾಡಿತ್ತು. ಟಾಲಿವುಡ್ ಖ್ಯಾತ ನಿರ್ದೇಶಕ ಸುಕುಮಾರ್ ಸಿನಿಮಾದ ನಿರ್ದೇಶನ ಮಾಡಿದ್ದರು. ರಾಮ್ ಚರಣ್ ಹಾಗೂ ಸಮಂತಾ ಸಿನಿಮಾದಲ್ಲಿ ನಟಿಸಿದ್ದರು. ಇಬ್ಬರ ಅತ್ಯುತ್ತಮ ನಟನೆ ಚಿತ್ರದ ಹೈಲೈಟ್ ಆಗಿತ್ತು.

ಸದ್ಯದಲ್ಲಿಯೇ ಟ್ರೇಲರ್

ಸದ್ಯದಲ್ಲಿಯೇ ಟ್ರೇಲರ್

ನಟ ರಾಮ್ ಚರಣ್ ಹಾಗೂ ಸಮಂತಾ ಇಬ್ಬರ ಯಾವ ಸಿನಿಮಾವೂ ಇದುವರೆಗೆ ಕನ್ನಡದಲ್ಲಿ ಡಬ್ ಆಗಿರಲಿಲ್ಲ. 'ರಂಗಸ್ಥಳಂ' ಮೂಲಕ ಇವರ ಚಿತ್ರಗಳು ಮೊದಲ ಬಾರಿಗೆ ಕನ್ನಡಕ್ಕೆ ಬಂದಿವೆ. ಅಂದಹಾಗೆ, ಸದ್ಯ 'ರಂಗಸ್ಥಳ' ಚಿತ್ರದ ಈಗಾಗಲೇ ಡಬ್ಬಿಂಗ್ ಕೆಲಸಗಳು ಮುಗಿದಿದ್ದು, ಚಿಕ್ಕ ಪುಟ್ಟ ಗ್ರಾಫಿಕ್ ಕೆಲಸಗಳು ನಡೆಯುತ್ತಿದೆಯಂತೆ. ಚಿತ್ರದ ಟ್ರೇಲರ್ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆಯಂತೆ.

More from Filmibeat

English summary
Actor Ram Charan and Samantha's super hit telugu movie 'Rangasthalam' dubbed in kannada and it will releasing soon. After 'Mayabazar', 'Rangasthalam' is a telugu movie which is dubbed in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X