For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಂಗಾಯಣ ರಘು

  By Naveen
  |

  ಕನ್ನಡದ ಬಹು ಬೇಡಿಕೆಯ ಹಾಸ್ಯ ನಟ ರಂಗಾಯಣ ರಘು ಈಗ ಮತ್ತೊಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತುಳು ಚಿತ್ರರಂಗದಲ್ಲಿ ರಂಗಾಯಣ ರಘು ಖಾತೆ ತೆರೆದಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾವನ್ನು ನೀಡಿರುವ ಈ ಕಲಾವಿದನಿಗೆ ಕೋಸ್ಟಲ್ ವುಡ್ ಕೈ ಬೀಸಿ ಕರೆದಿದೆ.

  'ಮೈ ನೇಮ್ ಇಸ್ ಅನ್ನಪ್ಪ' ಎನ್ನುವ ಹೊಸ ತುಳು ಸಿನಿಮಾದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದ್ದು, ಸಂಗೀತ ಶಿಕ್ಷಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪಾತ್ರ ರಂಗಾಯಣ ರಘು ಅವರಿಗೆ ತುಂಬ ಚೆನ್ನಾಗಿ ಸೂಟ್ ಆಗಲಿದೆಯಂತೆ.

  ರಾಜಕೀಯಕ್ಕೆ ಎಂಟ್ರಿಕೊಡುತ್ತಿರುವ 'ರಂಗಾಯಣ ರಘು' ಎಕ್ಸ್‌ಕ್ಲೂಸಿವ್ ಸಂದರ್ಶನ ರಾಜಕೀಯಕ್ಕೆ ಎಂಟ್ರಿಕೊಡುತ್ತಿರುವ 'ರಂಗಾಯಣ ರಘು' ಎಕ್ಸ್‌ಕ್ಲೂಸಿವ್ ಸಂದರ್ಶನ

  ಮಯೂರ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಪರಮಾತ್ಮ' ಸಿನಿಮಾದಲ್ಲಿ ರಂಗಾಯಣ ರಘು ನಟನೆ ನೋಡಿ ಇಷ್ಟ ಪಟ್ಟಿದ್ದ ಮಯೂರ್ ತಮ್ಮ ಈ ಚಿತ್ರಕ್ಕಾಗಿ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  ಅಂದಹಾಗೆ, ಸಂಗೀತ ಶಿಕ್ಷಕನ ಪಾತ್ರ ತುಂಬ ಘನತೆ ಹೊಂದಿದ್ದು, ಖುಷಿಯಿಂದ ರಂಗಾಯಣ ರಘು ಆ ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ. ಈಗಾಗಲೇ ರಂಗಾಯಣ ರಘು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಕನ್ನಡದಲ್ಲಿ 'ಅಯೋಗ್ಯ' ಹಾಗೂ 'ಆದಿ ಪುರಾಣ' ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

  English summary
  Kannada comedy actor Rangayana Raghu played important role in 'My Name Is Annappa' tulu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X