»   » ರಷ್ಯಾ ಕಲಾವಿದರೊಂದಿಗೆ ತೆರೆಹಂಚಿಕೊಂಡ 'ರಂಗಿತರಂಗ' ರಾಧಿಕ ಚೇತನ್

ರಷ್ಯಾ ಕಲಾವಿದರೊಂದಿಗೆ ತೆರೆಹಂಚಿಕೊಂಡ 'ರಂಗಿತರಂಗ' ರಾಧಿಕ ಚೇತನ್

Posted By:
Subscribe to Filmibeat Kannada

'ರಂಗಿತರಂಗ' ಖ್ಯಾತಿಯ ನಟಿ ರಾಧಿಕ ಚೇತನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಜನಾರ್ಧನ್ ಎನ್ ನಿರ್ದೇಶನದ 'ಬಿಬಿ5' ಎಂಬ ಹಾರರ್ ಮತ್ತು ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಿದ್ದರು.

ರಾಧಿಕ ಚೇತನ್ ಈಗ ಕನ್ನಡ ಚಿತ್ರ 'ಚೇಸ್'(Chase) ಮತ್ತು 'ಅಸತೋಮ ಸದ್ಗಮಯ' ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ವಿಶೇಷ ಅಂದ್ರೆ 'ಅಸತೋಮ ಸದ್ಗಮಯ' ಚಿತ್ರದಲ್ಲಿ ರಾಧಿಕ ಚೇತನ್ ರವರು ರಷ್ಯಾ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

 RangiTaranga actress Radhika Chetan excited to work with Russian actors

ರಷ್ಯಾ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿರುವ ಸಂತೋಷವನ್ನು ರಾಧಿಕ ಚೇತನ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ ಅವರೊಂದಿಗೆ ಅಭಿನಯಿಸುವುದು ಉತ್ತಮ ಅನುಭವ ನೀಡಿದೆ ಎಂದು ಬರೆದಿದ್ದಾರೆ. ಅಂದಹಾಗೆ 'ಅಸತೋಮ ಸದ್ಗಮಯ' ಚಿತ್ರದಲ್ಲಿ ಕಿರಣ್ ರಾಜ್ ಎಂಬುವರು ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದು, ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ.

English summary
'RangiTaranga' fame kannada actress Radhika Chetan has taken her facebook account to express her excitement to work with Russian actors.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada