Don't Miss!
- Sports
ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಸಪ್ತ ಸಾಗರದಾಚೆಯ ಬಾಕ್ಸಾಫೀಸ್ ನಲ್ಲೂ ರಂಗಿತರಂಗ ಅಲೆ
ಗಾಂಧಿನಗರದಲ್ಲಿ 'ರಂಗಿತರಂಗ' ಎನ್ನುವ ಅಲೆಯೊಂದು ಅಪ್ಪಳಿಸಿ ಇಡೀ ಸ್ಯಾಂಡಲ್ ವುಡ್ ಕ್ಷೇತ್ರವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ವಿಚಾರ ನಿಮಗೆ ಗೊತ್ತೆ ಇದೆ. ಅಷ್ಟರಮಟ್ಟಿಗೆ ಹೊಸಬರಾದ ಭಂಡಾರಿ ಸಹೋದರರು ಎಲ್ಲೆಡೆ ಹವಾ ಹೆಚ್ಚಿಸಿದ್ದಾರೆ.
ಅಂದಹಾಗೆ ಅನುಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರ 'ರಂಗಿತರಂಗ' ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೇ ಸಪ್ತ ಸಾಗರದಾಚೆಯಲ್ಲಿ ಈಗಲೂ ಸೌಂಡ್ ಮಾಡುತ್ತಿದೆ. [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]
ಈಗಾಗಲೇ ಯುರೋಪ್, ಸಿಂಗಾಪುರ್, ಆಸ್ಟ್ರೇಲಿಯಾ, ಕೆನಡಾ, ಯುಎಸ್ಎ, ಮುಂತಾದ ದೇಶಗಳಲ್ಲಿ ಈ ಚಿತ್ರ ತೆರೆ ಕಂಡಿದ್ದು ಎಲ್ಲೆಡೆ ಭಾರಿ ಪ್ರಶಂಸೆ ಗಳಿಸುತ್ತಿದೆ.
ಅಂದಹಾಗೆ ಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಯುಎಸ್ಎ ಹಾಗೂ ಕೆನಡಾ ದೇಶಗಳಲ್ಲಿ ಪ್ರದರ್ಶನಗೊಂಡ ಈ ಚಿತ್ರದ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಸಾಲಿನಲ್ಲಿ ನಮ್ಮ ಕನ್ನಡದ 'ರಂಗಿತರಂಗ' ಚಿತ್ರ 27ನೇ ಸ್ಥಾನದಲ್ಲಿ ಇದೆ.[ರಂಗಿತರಂಗ ನೋಡಿ ಸೂಪರ್ ಎಂದ 'ಪವರ್ ಸ್ಟಾರ್]
ಇದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯವಾಗಬೇಕು ಯಾಕೆಂದರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಹೊರದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುವುದರೊಂದಿಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಕೂಡ ಗಳಿಸುತ್ತಿದೆ.

ಡೈರೆಕ್ಷನ್ ನಿಂದ ಹಿಡಿದು ನಟನೆ ಹಾಗೂ ಎಲ್ಲಾ ವರ್ಗದ ಕೆಲಸಗಳನ್ನು ಕೂಡ ಹೊಸಬರೇ ಸೇರಿ ಮಾಡಿರುವ ಹಿಟ್ ಚಿತ್ರ 'ರಂಗಿತರಂಗ' ಸಿಂಪಲ್ಲಾಗಿ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.[ರಂಗಿತರಂಗ ಸೌಂಡಿಗೆ ಥ್ರಿಲ್ ಆದ ಮುರಳಿ, ಯಶ್]
ಚಿತ್ರದಲ್ಲಿ ರಾಧಿಕಾ ಚೇತನ್, ಆವಂತಿಕಾ ಶೆಟ್ಟಿ, ನಿರುಪ್ ಭಂಡಾರಿ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, 'ಡೈಲಾಗ್ ಕಿಂಗ್' ಸಾಯಿಕುಮಾರ್ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ.
ಒಟ್ನಲ್ಲಿ 'ರಂಗಿತರಂಗ' ಚಿತ್ರ ಸ್ಯಾಂಡಲ್ ವುಡ್ ನ ಒಂದು ಕೋಲ್ಮಿಂಚು ಅಂದರೂ ತಪ್ಪಾಗ್ಲಿಕ್ಕಿಲ್ಲ. ಅಂತೂ ಇಂತೂ ವಿದೇಶದಲ್ಲೂ ನಮ್ಮ ಕನ್ನಡ ಚಿತ್ರರಂಗದ ಕಂಪನ್ನು ಬೀರುತ್ತಿರುವ ಹೊಸಬರ ರಂಗ್ ರಂಗಿಗೆ ಹ್ಯಾಟ್ಸಾಫ್ ಹೇಳೋಣ ನೀವೇನಂತೀರಾ.