»   » ಕಲರ್ಸ್ ಕನ್ನಡದಲ್ಲಿ 'ರಂಗಿತರಂಗ' 225 ದಿನದ ಸಂಭ್ರಮಾಚರಣೆ

ಕಲರ್ಸ್ ಕನ್ನಡದಲ್ಲಿ 'ರಂಗಿತರಂಗ' 225 ದಿನದ ಸಂಭ್ರಮಾಚರಣೆ

Posted By:
Subscribe to Filmibeat Kannada

ಚಂದನವನದ ಕೋಲ್ಮಿಂಚು ಅಂತಾನೇ ಕರೆಯಲಡ್ಡಿಯಿಲ್ಲದ ಹೊಸಬರ 'ರಂಗಿತರಂಗ' ಸಿನಿಮಾ 100 ದಿನ ಆಯ್ತು 200 ದಿನ ಆಯ್ತು ಇದೀಗ 225ನೇ ದಿನಕ್ಕೆ ಕಾಲಿಟ್ಟಿದ್ದು, ಡಬಲ್ ಸೆಂಚುರಿ ಬಾರಿಸಿದೆ.

ನಿರ್ದೇಶಕ ಅನುಪ್ ಭಂಡಾರಿ ಆಕ್ಷನ್-ಕಟ್ ಹೇಳಿದ್ದ 'ರಂಗಿತರಂಗ' ಸಿನಿಮಾ ಇಡೀ ವಿಶ್ವದಾದ್ಯಂತ ತೆರೆಕಂಡು ಅತ್ಯುತ್ತಮ ಪ್ರದರ್ಶನ ಕಂಡು ಯಶಸ್ವಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿದೆ.['ರಂಗಿ' ಅನುಪ್ ಜೊತೆ ಕೆಲಸ ಮಾಡುವ ಆಸಕ್ತರಿಗೆ ಗುಡ್ ನ್ಯೂಸ್]


RangiTaranga Celebrates Grand 225 Days On Colors Kannada

ಇದೀಗ ಚಿತ್ರ ಡಬಲ್ ಸೆಂಚುರಿ ಭಾರಿಸಿದ ಸಂಭ್ರಮವನ್ನು ಚಿತ್ರತಂಡ ಭರ್ಜರಿಯಾಗಿ ಆಚರಿಸಿಕೊಳ್ಳಲಿದ್ದು, ಈ ಕಾರ್ಯಕ್ರಮ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯ ರಂಗು ರಂಗಿನ ವೇದಿಕೆಯಲ್ಲಿ ಇದೇ ಆದಿತ್ಯವಾರ (ಫೆಬ್ರವರಿ 7) ಸಂಜೆ 5 ಘಂಟೆಗೆ ಪ್ರಸಾರವಾಗಲಿದೆ.


ಅಂದಹಾಗೆ ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ಅಜಯ್ ರಾವ್, ನಟಿ ಯಜ್ಞಾ ಶೆಟ್ಟಿ, ಮುಂತಾದವರು ಆಗಮಿಸಿದ್ದು, ಚಿತ್ರತಂಡದ 225ನೇ ದಿನವನ್ನು ಸಖತ್ತಾಗಿ ಆಚರಿಸಿಕೊಂಡಿದ್ದಾರೆ.[29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!]


RangiTaranga Celebrates Grand 225 Days On Colors Kannada

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಈ ವೇದಿಕೆಯಲ್ಲಿ ಡೈಲಾಗ್ ಸಹೋದರರಾದ ರವಿಶಂಕರ್ ಮತ್ತು ಕಿಂಗ್ ಸಾಯಿ ಕುಮಾರ್ ಅವರು ಮುಖಾಮುಖಿಯಾಗಿದ್ದು, ತಮ್ಮ ಡೈಲಾಗ್ ಗಳಿಂದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.


ಜೊತೆಗೆ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ನಟಿಯರಾದ ರಾಧಿಕಾ ಚೇತನ್ ಮತ್ತು ನಟಿ ಅವಂತಿಕಾ ಶೆಟ್ಟಿ ಅವರು ಕೊಂಚ ಬಾವುಕರಾದರು. ಇದೆಲ್ಲವನ್ನೂ ನೀವು ನೋಡಬೇಕೆಂದರೆ ಈ ಭಾನುವಾರ ಕಲರ್ಸ್ ಕನ್ನಡವನ್ನು ತಪ್ಪದೇ ನೋಡಿ.[ವಿಡಿಯೋ: 'ರಂಗಿತರಂಗ' ಅಂದ್ರೆ 'ರಣರಂಗ', ಎಂದ ಶಿವಣ್ಣ]


ರಂಗು ರಂಗಿನ ವೇದಿಕೆಯಲ್ಲಿ 'ರಂಗಿತರಂಗ' ಚಿತ್ರತಂಡ ಆಚರಿಸಿಕೊಂಡು ಭರ್ಜರಿ ಸಂಭ್ರಮದ ಝಲಕ್ ನ ಪ್ರೋಮೋ ಇಲ್ಲಿದೆ ನೋಡಿ...


RangiTaranga 200 Days on Colors Kannada

RangiTaranga Double century special on Colors Kannada on Feb 7 @ 5 PM. I would like to thank Parameshwar Gundkal, Jaydev Kappanna and the entire Colors Kannada team for wanting to host the 200 days event and making it such a grand affair. A special thanks to all the celebrities who were part of the event and also to the ones who couldn't make it because of their conflicting schedules. Once again my heartfelt thanks to the audience, press, print and electronic media and the entire team of RangiTaranga. ನಿಮ್ಮ ರಂಗಿತರಂಗದ ೨೦೦ರ ಸಂಭ್ರಮವನ್ನು ಕಲರ್ಸ್ ಕನ್ನಡದಲ್ಲಿ ಪೆಬ್ರವರಿ ೭ರ ಸಂಜೆ ೫ಕ್ಕೆ ವೀಕ್ಷಿಸಿ!


Posted by Anup Bhandari on Friday, February 5, 2016

English summary
RangiTaranga and team celebrates grand 225 days on Colors Kannada. The colorfull programme will be telecasted on Feb 7. The movie is directed by Anup Bhandari.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more