For Quick Alerts
  ALLOW NOTIFICATIONS  
  For Daily Alerts

  ವಾವ್! 20 ವರ್ಷಗಳ ನಂತರ ಮತ್ತೆ ಪ್ರತ್ಯಕ್ಷ ಆದ 'ರಂಗೋಲಿ' ಸುಮಂತ್.!

  By Suneetha
  |

  1996 ರಲ್ಲಿ ತೆರೆ ಕಂಡ ಕನ್ನಡ ಚಿತ್ರ 'ರಂಗೋಲಿ' ನಿಮಗೆ ನೆನಪಿದ್ಯಾ, ಅದರಲ್ಲಿ ಸಖತ್ ಕ್ಯೂಟ್ ಆಗಿರೋ ಚಾಕಲೇಟು ಹೀರೋ ಸುಮಂತ್ ಅವರನ್ನು ಒಮ್ಮೆ ನೆನಪಿಸಿಕೊಳ್ಳಿ.

  ನೆನಪಾಯ್ತ?, ಅಂದಹಾಗೆ ಸುಮಂತ್ ಅವರ 'ರಂಗೋಲಿ' ಚಿತ್ರ ಬಿಡುಗಡೆಯಾಗಿ ಮುಂದಿನ ವರ್ಷಕ್ಕೆ ಬರೋಬ್ಬರಿ 20 ವರ್ಷಗಳಾಗುತ್ತವೆ. ಆದರೆ ನಟ ಸುಮಂತ್ ಅವರು ಆವಾಗ ಹೇಗಿದ್ದರೋ ಈಗಲೂ ಹಾಗೆ ಇದ್ದಾರೆ. ಕೇವಲ ಹೆಸರು ಬದಲಾಯಿಸಿಕೊಂಡು ಇದೀಗ ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸ್ ಬಂದಿದ್ದಾರೆ.

  'ರಂಗೋಲಿ', 'ನಿಶ್ಯಬ್ಧ' 'ದಾಯಾದಿ', 'ಜೇನಿನ ಹೊಳೆ', ಮುಂತಾದ ಚಿತ್ರಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಈ ನಟ ಚಿತ್ರರಂಗದಿಂದ ಬಿಗ್ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಇದೀಗ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ 'ಈ ಕ್ಷಣ' ಎಂಬ ಹೊಚ್ಚ ಹೊಸ ಪ್ರಾಜೆಕ್ಟ್ ಜೊತೆಗೆ ಮತ್ತೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ವಾಪಸ್ ಬಂದಿದ್ದಾರೆ.

  ಇತ್ತೀಚೆಗಷ್ಟೆ 'ಈ ಕ್ಷಣ' ಎಂಬ ಸಿನಿಮಾ ಸೆಟ್ಟೇರಿದ್ದು, ಸದಾ ಲವರ್ ಬಾಯ್ ಆಗಿದ್ದ ಸುಮಂತ್ ಈ ಬಾರಿ ಮಾತ್ರ ಕೈಯಲ್ಲಿ ಗನ್ ಹಿಡಿದು ಆಕ್ಷನ್ ಗೂ ಸೈ ಎಂದಿದ್ದಾರೆ.


  'ನಾನು ಖಂಡಿತವಾಗಿಯೂ ನಟನಾ ಕ್ಷೇತ್ರಕ್ಕೆ ಬ್ರೇಕ್ ನೀಡಬೇಕೆಂಬ ಇರಾದೆ ನನ್ನಲಿಲ್ಲ, ನಾನು ಇಲ್ಲಿಯವರೆಗೆ ಕೆಲವಾರು ತಮಿಳು ಚಿತ್ರಗಳಲ್ಲಿ ಹಾಗೂ ಕೆಲವು ಮಲಯಾಳಂ ದಾರಾವಾಹಿಗಳಲ್ಲಿ, ಬ್ಯುಸಿಯಾಗಿದ್ದರಿಂದ ಕನ್ನಡ ಚಿತ್ರಗಳ ಕಡೆ ಗಮನ ಹರಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನಾನು ಕನ್ನಡ ಸಿನಿಮಾಗಳಿಂದ ಕೊಂಚ ದೂರ ಉಳಿಯಬೇಕಾಯಿತು'.

  'ಜೊತೆಗೆ ನಾನು ಉತ್ತಮ ವಿಷಯಕ್ಕೆ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಅದು ಕನ್ನಡ ಭಾಷೆಯಲ್ಲಿ 'ಈ ಕ್ಷಣ' ಎಂಬ ವಿಷಯದ ಮೂಲಕ ದಕ್ಕಿದೆ. ಆದ್ದರಿಂದ ಮತ್ತೆ ಲವರ್ ಬಾಯ್ ಶೇಡ್ ನಿಂದ ಆಕ್ಷನ್ ಹೀರೋ ಆಗಿ ಮತ್ತೆ ಬಂದಿದ್ದೇನೆ' ಎನ್ನುತ್ತಾರೆ 'ರಂಗೋಲಿ' ಸುಮಂತ್

  ಇದೇ ಮೊದಲ ಬಾರಿಗೆ ಆಕ್ಷನ್ ಹೀರೋ ಆಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಮತ್ತೆ ಬಂದಿರುವ ನಟ ಸುಮಂತ್ ಅವರಿಗೆ ನಾವು ಆಲ್ ದ ಬೆಸ್ಟ್ ಹೇಳೋಣ ನೀವೇನಂತೀರಾ?.(ಚಿತ್ರಕೃಪೆ: ಚಿತ್ರಲೋಕ)

  English summary
  Kannada Actor Sumanth who was seen in the hit movies like 'Rangoli', was not seen in the Kannada cinema industry. After a long gap, he enters the Sandalwood through the movie 'Ee Kshana".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X