For Quick Alerts
  ALLOW NOTIFICATIONS  
  For Daily Alerts

  ಸ್ವಾಮಿ ನಿತ್ಯಾನಂದ ಮೇಲೆ ತಾರೆ ರಂಜಿತಾ ಸಿನಿಮಾ

  By Rajendra
  |

  ತಮಿಳು ಚಿತ್ರರಂಗದ ವಿವಾದಿತ ತಾರೆ ರಂಜಿತಾ ಎರಡನೇ ಇನ್ನಿಂಗ್ಸ್‌ಗೆ ಅಣಿಯಾಗಿದ್ದಾರೆ. ಈ ಬಾರಿ ಅವರು ನಿರ್ಮಾಪಕಿಯಾಗಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಸ್ವಾಮಿ ನಿತ್ಯಾನಂದ ಅವರ ಮೇಲೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲು ರಂಜಿತಾ ಮುಂದಾಗಿದ್ದಾರೆ.

  ಈ ಬಗ್ಗೆ ತಮಿಳು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, "ಸದ್ಯಕ್ಕೆ ಈ ಆಲೋಚನೆಯನ್ನು ಪಕ್ಕಕ್ಕಿಟ್ಟಿದ್ದೇನೆ. ಆದರಿದು ತಾತ್ಕಾಲಿಕ ನಿರ್ಧಾರವಷ್ಟೇ. ಸ್ವಲ್ಪ ಸಮಯದ ಬಳಿಕ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇನೆ" ಎಂದಿದ್ದಾರೆ ರಂಜಿತಾ.

  ಈ ಸಾಕ್ಷ್ಯಚಿತ್ರದಲ್ಲಿ ಸ್ವಾಮಿ ನಿತ್ಯಾನಂದರ ಹಾಗೂ ಅವರ ಭಕ್ತ ಸಮೂಹದ ಹಲವಾರು ಉತ್ತಮ ಕೆಲಸ ಕಾರ್ಯಗಳನ್ನು ತೋರಿಸಲಾಗುತ್ತದೆ. ಹಿಂದೂ ಧರ್ಮವನ್ನು ಮುನ್ನಡೆಸಲು ಸ್ವಾಮಿ ನಿತ್ಯಾನಂದ ಅವರೇ ಸೂಕ್ತ ವ್ಯಕ್ತಿ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಕೋಟ್ಯಂತರ ಅನುಯಾಯಿಗಳನ್ನು ಸಂಪಾದಿಸಿದರು ಎಂದು ರಂಜಿತಾ ವರ್ಣರಂಜಿತವಾಗಿ ಬಣ್ಣಿಸಿದ್ದಾರೆ.

  ಸ್ವಾಮಿ ನಿತ್ಯಾನಂದ ಅವರ ಕೋಟ್ಯಂತರ ಅನುಯಾಯಿಗಳಲ್ಲಿ ನಾನೂ ಒಬ್ಬಳು. ಸ್ವಯಂಸೇವಕಿಯಾಗಿ ಅವರ ಆಶ್ರಮಕ್ಕೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ಅವರ ಅನುಯಾಯಿಯಾಗಿಯೇ ಉಳಿಯುತ್ತೇನೆ. ಅವರ ಆಶ್ರಮದಲ್ಲಿ ನನಗೆ ಯಾವುದೇ ವಿಶೇಷ ಸ್ಥಾನಮಾನವಿಲ್ಲ ಎಂದು ರಂಜಿತಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

  English summary
  Actress Ranjitha to make a documentary film on Swamy Nithyananda. The documentary would have details about various noble works being done by Nithyananda and his devotees' experience with him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X