ಮೂರು ವರ್ಷಗಳ ನಂತರ ಇದ್ದಕ್ಕಿದ್ದ ಹಾಗೆ ಟ್ರೆಂಡ್ ಆದ 'ರನ್ನ'
Recommended Video

ನಟ ಕಿಚ್ಚ ಸುದೀಪ್ ನಟನೆಯ 'ರನ್ನ' ಸಿನಿಮಾ ರಿಲೀಸ್ ಆಗಿದ್ದು 2015ರ ಜೂನ್ ನಲ್ಲಿ. ಆದರೆ ಈ ಸಿನಿಮಾ ಈಗ ಟ್ರೆಂಡ್ ಆಗಿದೆ. ಆಶ್ಚರ್ಯ ಎನಿಸಿದರೂ ಇದು ನಿಜ. ಮೂರು ವರ್ಷಗಳ ಬಳಿಕವೂ ಇದೀಗ ಸಾಮಾಜಿಕ ಜಾಲತಾಣದಲ್ಲಿ 'ರನ್ನ' ಸಿನಿಮಾ ಹವಾ ಎಬ್ಬಿಸಿದೆ.
'ರನ್ನ' ಸಿನಿಮಾ ಯೂ ಟ್ಯೂಬ್ ನಲ್ಲಿ ಈಗ ಟ್ರೆಂಡಿಂಗ್ 5 ನಲ್ಲಿ ಇದೆ. ವಿಶೇಷ ಅಂದರೆ, 'ರನ್ನ' ಹೊರತು ಪಡಿಸಿ ಸದ್ಯ ಯೂ ಟ್ಯೂಬ್ ನಲ್ಲಿ ಟಾಪ್ 10 ಟ್ರೆಂಡಿಂಗ್ ನಲ್ಲಿ ಯಾವ ಕನ್ನಡ ಸಿನಿಮಾದ ಹಾಡು, ಟ್ರೇಲರ್, ಟೀಸರ್ ಇಲ್ಲ. ಕೌಟುಂಬಿಕ ಕಥೆ ಹಿನ್ನಲೆಯ ಕಮರ್ಷಿಯಲ್ ಸಿನಿಮಾ ಆಗಿದ್ದ 'ರನ್ನ' ಚಿತ್ರವನ್ನು ಇಂದಿಗೂ ಸುದೀಪ್ ಅಭಿಮಾನಿಗಳು ಇಷ್ಟ ಪಡುತ್ತಿದ್ದಾರೆ. ಅದೇ ಕಾರಣದಿಂದ ಮೂರು ವರ್ಷದ ಹಿಂದಿನ ಸಿನಿಮಾ ಈಗಲೂ ಟ್ರೆಂಡ್ ಆಗಿದೆ.

ಅಂದಹಾಗೆ, 'ರನ್ನ' ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಿದ್ದರು. ಈ ಚಿತ್ರ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಸಿನಿಮಾದ ರಿಮೇಕ್ ಆಗಿತ್ತು. ಎರಡು ಭಾಷೆಗಳಲ್ಲಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸುದೀಪ್ ಜೊಡಿಯಾಗಿ ರಚಿತಾ ರಾಮ್ ಹಾಗೂ ಹರಿಪ್ರಿಯಾ ನಟಿಸಿದ್ದರು. ಮಧು, ದೇವರಾಜ್, ಸಾಧು ಕೋಕಿಲ ಸೇರಿದಂತೆ ಅನೇಕರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











