»   » ಅಂಧ ಮಕ್ಕಳಿಗೆ ಸುದೀಪ್ 'ರನ್ನ' ಸ್ಪೆಷಲ್ ಶೋ

ಅಂಧ ಮಕ್ಕಳಿಗೆ ಸುದೀಪ್ 'ರನ್ನ' ಸ್ಪೆಷಲ್ ಶೋ

Posted By:
Subscribe to Filmibeat Kannada

ಅಂಧ ಮಕ್ಕಳಿಗೆ ಮತ್ತು ವಿಕಲಚೇತನರಿಗಾಗಿ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಹೌದು, ವಿಶ್ವ ಹೆಲನ್ ಕೆಲ್ಲರ್ ದಿನಾಚರಣೆಯ ಅಂಗವಾಗಿ ಐಡಿಎಲ್ ಫೌಂಡೇಷನ್ ವತಿಯಿಂದ ಅಂಧ ಮಕ್ಕಳಿಗೆ ಜೂನ್ 28 ರಂದು ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಉಚಿತ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.


'Ranna' special screening for Blind and disabled children

ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಲು 1000 ಮಕ್ಕಳಿಗೆ ಅವಕಾಶವಿದೆ. ಅಂಗವಿಕಲರು ಹಾಗೂ ಅಂಧ ಮಕ್ಕಳೊಂದಿಗೆ ಪೋಷಕರು ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಬಹುದು. [ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]


ಮಕ್ಕಳೊಂದಿಗೆ ಕೂತು ಕಿಚ್ಚ ಸುದೀಪ್ ಕೂಡ 'ರನ್ನ' ಚಿತ್ರವನ್ನ ವೀಕ್ಷಿಸಲಿದ್ದಾರೆ. ನಂದಕಿಶೋರ್ ನಿರ್ದೇಶನದ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಈ 'ರನ್ನ'. ರಚಿತಾ ರಾಮ್, ಹರಿಪ್ರಿಯ, ಮಧೂ ಮುಂತಾದವರು 'ರನ್ನ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Special screening of Kannada Movie 'Ranna' is arranged for Blind and Disabled Children with Kiccha Sudeep on June 28th in Narthaki theater.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada