»   » 'ರನ್ನ' ಮತ್ತು 'ರಣವಿಕ್ರಮ'ರ ಕಾದಾಟಕ್ಕೆ ವೇದಿಕೆ ಸಜ್ಜು

'ರನ್ನ' ಮತ್ತು 'ರಣವಿಕ್ರಮ'ರ ಕಾದಾಟಕ್ಕೆ ವೇದಿಕೆ ಸಜ್ಜು

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಒಂದಲ್ಲ ಒಂದು ಸ್ಟಾರ್ ಗಳ ಸಿನಿಮಾಗಳು ಆಗಾಗ ಕಾದಾಟಕ್ಕಿಳೀತಾನೇ ಇರುತ್ತವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಅಭಿನಯದ 'ರನ್ನ' ಮತ್ತು ಪುನೀತ್ ರಾಜ್ ಕುಮಾರ್ ಅವರ 'ರಣವಿಕ್ರಮ' ಚಿತ್ರಗಳ ನಡುವೆ ಕಾದಾಟಕ್ಕೆ ವೇದಿಕೆ ಸಜ್ಜಾದ ಹಾಗಿದೆ.

ಏಪ್ರಿಲ್ 2ಕ್ಕೆ ತೆರೆಗೆ ಬರ್ತೀವಿ ಅಂತ ತಯಾರಾಗಿದ್ದ ಕಿಚ್ಚ ಅಂಡ್ ಟೀಂನ 'ರನ್ನ' ಏಪ್ರಿಲ್ 3ಕ್ಕಾದ್ರೂ ಲಗ್ಗೆ ಇಡಬೇಕು ಅನ್ನೋ ಯೋಚನೆಯಲ್ಲಿದೆ. ಬೇಸಿಗೆ ರಜೆಯಲ್ಲಿ ಪ್ರೇಕ್ಷಕರನ್ನ ಬಾಚಿಕೊಳ್ಳಬೇಕು ಅಂತ ನಿರ್ಧಾರ ಮಾಡಿದೆ.


Ranna Vs Rana Vikrama ready for box office fight

ಮತ್ತೊಂದು ಕಡೆ ಪವರ್ ಸ್ಟಾರ್ ಅಭಿನಯದ 'ರಣವಿಕ್ರಮ' ರಣರಂಗಕ್ಕಿಳಿಯಲು ಸಜ್ಜಾಗ್ತಿರೋದೂ ಇದೇ ಸಮಯಕ್ಕೆ, ಎರಡನೇ ವಾರದಲ್ಲೇ ಅಂದ್ರೆ ರಾಜ್ ಪುಣ್ಯ ತಿಥಿಗೆ ತೆರೆಗೆ ಬರೋಕೆ ಸೆನ್ಸಾರ್ ಗೆ ಹೊರಡ್ತಿದೆ ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ'.


ಒಂದು ವೇಳೆ ಸೆನ್ಸಾರ್ ತಡವಾಗಿ ಅಂದುಕೊಂಡಂತೆ ಆಗದಿದ್ರೆ ಏಪ್ರಿಲ್ 24ಕ್ಕೆ ಅಂದ್ರೆ ಡಾ. ರಾಜ್ ಹುಟ್ಟುಹಬ್ಬಕ್ಕೆ ಬಿಗ್ಸ್ಕ್ರೀನ್ ಗೆ ಲಗ್ಗೆ ಇಡೋಕೆ ರಣವಿಕ್ರಮ ಬರಲಿದೆ. ರನ್ನ ಕೂಡ ಅಷ್ಟು ಬೇಗ ರಿಲೀಸಾಗೋದು ಡೌಟು ಅನ್ನೋದು ಸಿನಿಪಂಡಿತರ ಲೆಕ್ಕಾಚಾರ.


'ರನ್ನ' ಚಿತ್ರ ಪಕ್ಕಾ ಕೌಟುಂಬಿಕ ಚಿತ್ರವಾದರೆ 'ರಣವಿಕ್ರಮ' ಚಿತ್ರ ಮಾಸ್ ಧಮಾಕಾ. ರನ್ನ ರೀಮೇಕ್ ಆದರೆ ರಣವಿಕ್ರಮ ಸ್ವಮೇಕ್. ಈ ಎಲ್ಲಾ ಕಾರಣಗಳಿಂದ ಈ ಬಾರಿ ಬಾಕ್ಸಾಫೀಸ್ ಕಾ ಸುಲ್ತಾನ್ ಗಾಗಿ ಕಿಚ್ಚ ಮತ್ತು ಅಪ್ಪು ನಡುವೆ ಫೈಟ್ ಪಕ್ಕಾ ಅಂತಿದೆ ಗಾಂಧಿನಗರದ ಪಂಡಿತರ ಪಡಸಾಲೆ.

English summary
Sudeep's Ranna and Puneeth's Rana Vikrama, the two big budget and most expected Kannada movies are set for release April. Sandalwood may witness mega box office fight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada