ನಟಿ ಮೇಲೆ ನಿರ್ಮಾಪಕನ ಬಲತ್ಕಾರ, ಬಂಧನ

By ರವಿಕಿಶೋರ್

Rape charges against producer
ಉದಯಯೋನ್ಮುಖ ತಾರೆಯೊಬ್ಬರ ಮೇಲೆ ನಿರ್ಮಾಪಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ಮಂಗಳವಾರ (ಜ.15) ಬೆಳಕಿಗೆ ಬಂದಿದೆ. ಈ ಸಂಬಂಧ ನಿರ್ಮಾಪಕ ರಮೇಶ್ ಸಿಂಗ್ (49) ಎಂಬುವವರನ್ನು ಮುಂಬೈನ ಓಶಿವಾರಾ ಪೊಲೀಸರು ಬಂಧಿಸಿದ್ದಾರೆ.

ತಾವು ನಿರ್ಮಿಸುತ್ತಿರುವ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ತಾರೆಗೆ ಭರವಸೆ ನೀಡಿದ್ದ ರಮೇಶ್. ಚಿತ್ರಕಥೆ ಬಗ್ಗೆ ಚರ್ಚಿಸಬೇಕೆಂದು ಆಕೆಯನ್ನು ಏಕಾಂತಕ್ಕೆ ಕರೆಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಮಾನಭಂಗಕ್ಕೆ ಒಳಗಾಗಿರುವ ತಾರೆ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಚಿತ್ರಕ್ಕೆ ನೀವು ಆಯ್ಕೆಯಾಗಿದ್ದೀರಿ. ಸಂಭಾವನೆ ಹಾಗೂ ಒಪ್ಪಂದ ಪತ್ರಗಳಿಗೆ ಸಹಿ ಹಾಕಬೇಕು ಎಂದು ಆಕೆಯನ್ನು ನಂಬಿಸಿ ತನ್ನ ಫ್ಲಾಟ್ ಗೆ ಕರೆದೊಯ್ದ ರಮೇಶ್ ಸಿಂಗ್, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ನಟಿ ಆರೋಪಿಸಿದ್ದಾರೆ.

ಈ ಘಟನೆಯ ಬಳಿಕ ಮನೆಗೆ ಬಂದ ತಾರೆ ಬಳಿಕ ರಮೇಶ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ರಮೇಶ್ ಸಿಂಗ್ ರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇದು ಅತ್ಯಾಚಾರವೋ ಅಥವಾ ಅತ್ಯಾಚಾರ ಯತ್ನವೋ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ. (ಏಜೆನ್ಸೀಸ್)

More from Filmibeat

English summary
The Oshiwara police arrested a small-time film producer, Ramesh Singh (49) for allegedly raping an aspiring actress. The accused also told the victim that he wanted to finalize her contract and give her the signing amount. On Sunday, Singh took the woman to a flat, where he allegedly raped her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X