For Quick Alerts
  ALLOW NOTIFICATIONS  
  For Daily Alerts

  ಸಾರಾ ಗೋವಿಂದು ಮುಂದೆ ಕೈಮುಗಿದು ನಿಂತು ಕನ್ನಡಿಗರಿಗೆ ಕ್ಷಮೆ ಕೇಳಿದ Rapid ರಶ್ಮಿ

  By Harshitha
  |
  ಸಾರಾ ಗೋವಿಂದು ಮುಂದೆ ಕೈಮುಗಿದು ನಿಂತು ಕನ್ನಡಿಗರಿಗೆ ಕ್ಷಮೆ ಕೇಳಿದ Rapid ರಶ್ಮಿ | FIlmibeat Kannada

  ಯಾರೂ ಕೇಳದ ಪ್ರಶ್ನೆ ಕೇಳ್ತೀನಿ... ಡ್ಯಾಶಿಂಗ್ ಪ್ರಶ್ನೆಗೆ ಡ್ಯಾಶಿಂಗ್ ಆಗಿ ಉತ್ತರ ಕೊಡಿ... ಫಿಲ್ಟರ್ ಇಲ್ಲದೆ ಮಾತನಾಡಿ ಎನ್ನುತ್ತ Rapid ರಶ್ಮಿ ಕೇಳಿದ ಒಂದು ಪ್ರಶ್ನೆ, ಅದಕ್ಕೆ ಭಂಡಾರಿ ಸಹೋದರರು ನೀಡಿದ ಉತ್ತರದಿಂದ ಕನ್ನಡಿಗರ ಹೃದಯ ಸಮುದ್ರ ಕಲಕಿದೆ.

  ''ರಾಜರಥ ಸಿನಿಮಾ ನೋಡದವರು .....'' ಎಂದು Rapid ರಶ್ಮಿ ಕೇಳಿದ ಪ್ರಶ್ನೆಗೆ ''ಕಚಡ, ಲೋಫರ್ ನನ್ ಮಕ್ಳು'' ಎಂದು ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ಉತ್ತರಿಸಿದ್ದರು. ಇದು ಕನ್ನಡಿಗರನ್ನ ಕೆರಳಿಸಿತ್ತು.

  ಭಂಡಾರಿ ಬ್ರದರ್ಸ್ ಬಾಯಿಂದ ಇಂತಹ ಮಾತು ಬಂದಿದ್ದು ತಪ್ಪು ನಿಜ. ಹಾಗೇ, ಇಂತಹ ವಿವಾದಾತ್ಮಕ ಪ್ರಶ್ನೆ ಕೇಳಿ ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡುವಲ್ಲಿ ರಶ್ಮಿ ಪಾತ್ರವೂ ಇದೆ ಎಂದು ಹಲವರು ರಶ್ಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು.

  ವಿವಾದದ ತೀವ್ರತೆ ಅರಿತ Rapid ರಶ್ಮಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ, ಸಾರಾ ಗೋವಿಂದು ಮುಂದೆ ನಿಂತು, ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ. ಮುಂದೆ ಓದಿರಿ...

  ಕ್ಷಮೆ ಕೇಳಿದ Rapid ರಶ್ಮಿ

  ಕ್ಷಮೆ ಕೇಳಿದ Rapid ರಶ್ಮಿ

  ''ರಾಜರಥ' ಚಿತ್ರತಂಡ ನಮ್ಮ Rapid ರಶ್ಮಿ ಶೋಗೆ ಬಂದಾಗ, ಅವರು ಮಾತನಾಡಿದ ಕೆಲವು ಪದಗಳು ಹಾಗೂ ಅದರಿಂದಾದ ವಿವಾದ ಕನ್ನಡಿಗರಿಗೆ ಬೇಸರ ಆಗಿದೆ. ಇವತ್ತು ನಾನೇ ಖುದ್ದಾಗಿ ಸಾರಾ ಗೋವಿಂದು ರವರನ್ನ ಹುಡುಕಿಕೊಂಡು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದೇನೆ. ನಮ್ಮ ಶೋನಲ್ಲಿ ನಡೆದ ಘಟನೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ. ನಮ್ಮ ಕಡೆಯಿಂದ ಕ್ಷಮೆ ಇರಲಿ'' ಎಂದು ಕೈಮುಗಿದು ಕೇಳಿಕೊಂಡರು Rapid ರಶ್ಮಿ.

  RJ Rapid ರಶ್ಮಿ ಶೋಗೆ ಯಾರೂ ಹೋಗಬೇಡಿ, ಎಲ್ಲರೂ ಬಹಿಷ್ಕಾರ ಹಾಕಿ.!RJ Rapid ರಶ್ಮಿ ಶೋಗೆ ಯಾರೂ ಹೋಗಬೇಡಿ, ಎಲ್ಲರೂ ಬಹಿಷ್ಕಾರ ಹಾಕಿ.!

  ಇನ್ಮುಂದೆ ಹೀಗೆ ಆಗಲ್ಲ

  ಇನ್ಮುಂದೆ ಹೀಗೆ ಆಗಲ್ಲ

  ''ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಈ ತರಹದ ಘಟನೆಗಳಿಗೆ ಯಾವುದೇ ಅವಕಾಶ ಮಾಡಿಕೊಡುವುದಿಲ್ಲ. ಆ ಕ್ಷಣದಲ್ಲಿ ನನಗೆ ಏನೂ ಹೊಳೆಯಲಿಲ್ಲ. ಕ್ಷಮಿಸಿ, ಮುಂದಿನ ದಿನಗಳಲ್ಲಿ ಏನೇ ಉತ್ತರ ಬಂದರೂ ಅದಕ್ಕೆ ಕೌಂಟರ್ ಕೊಡಲು ರೆಡಿ ಆಗಿರುತ್ತೇನೆ. ಅದರಲ್ಲೂ ಕನ್ನಡಿಗರ ಮನಸ್ಸಿಗೆ ನೋವಾಗದಂತೆ ಖಂಡಿತ ಎಚ್ಚರದಿಂದ ಇರುತ್ತೇನೆ'' - Rapid ರಶ್ಮಿ

  'ರಾಜರಥ' ವಿವಾದದ ಬಗ್ಗೆ ಬಾಯ್ಬಿಟ್ಟ RJ ರಶ್ಮಿ: ಫೇಸ್ ಬುಕ್ ನಲ್ಲಿ ಕೊಟ್ರು ಟ್ವಿಸ್ಟ್.!'ರಾಜರಥ' ವಿವಾದದ ಬಗ್ಗೆ ಬಾಯ್ಬಿಟ್ಟ RJ ರಶ್ಮಿ: ಫೇಸ್ ಬುಕ್ ನಲ್ಲಿ ಕೊಟ್ರು ಟ್ವಿಸ್ಟ್.!

  ನಿಮ್ಮ ತಿದ್ದುವಿಕೆ ನನ್ನ ಮೇಲಿರಲಿ

  ನಿಮ್ಮ ತಿದ್ದುವಿಕೆ ನನ್ನ ಮೇಲಿರಲಿ

  ''ಇಷ್ಟು ವರ್ಷಗಳ ಕಾಲ ಆರ್.ಜೆ ಆಗಿದ್ದೇನೆ. ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡಲು ಕಾರ್ಯಕ್ರಮವನ್ನ ಹುಟ್ಟು ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ಸುಮಾರು ಸಿನಿಮಾದವರು ಬಂದಿದ್ದಾರೆ. ನಿಮ್ಮ ಸಹಕಾರ, ನಿಮ್ಮ ಪ್ರೋತ್ಸಾಹ, ನಿಮ್ಮ ತಿದ್ದುವಿಕೆ ಎಲ್ಲ ನನ್ನ ಮೇಲಿರಲಿ. ಏನಾದರೂ ತಪ್ಪಾಗಿದ್ದರೆ, ದಯವಿಟ್ಟು ಕ್ಷಮಿಸಿ'' - Rapid ರಶ್ಮಿ

  ಪ್ರಶ್ನೆ ಕೇಳಿದ್ದು ತಪ್ಪಾ ಅಥವಾ ಉತ್ತರ ಕೊಟ್ಟಿದ್ದು ತಪ್ಪಾ.?ಪ್ರಶ್ನೆ ಕೇಳಿದ್ದು ತಪ್ಪಾ ಅಥವಾ ಉತ್ತರ ಕೊಟ್ಟಿದ್ದು ತಪ್ಪಾ.?

  ಸಾರಾ ಗೋವಿಂದು ಏನಂದರು.?

  ಸಾರಾ ಗೋವಿಂದು ಏನಂದರು.?

  ''ರಶ್ಮಿ ಖುದ್ದಾಗಿ ಫಿಲ್ಮ್ ಚೇಂಬರ್ ಗೆ ಬಂದು ಆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಆಗಿದ್ದು ದೊಡ್ಡ ಅಪರಾಧವೇ... ಆದ್ರೆ, ಅದನ್ನ ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಇನ್ಮುಂದೆ ತಪ್ಪಾಗಲ್ಲ ಕ್ಷಮಿಸಿ ಅಂತ ಹೇಳಿದ್ದಾರೆ. ದಯಮಾಡಿ ಇದೊಂದು ಬಾರಿ ಕ್ಷಮಿಸಿ ಔದಾರ್ಯ ತೋರಿಸಿ'' ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ಹೇಳಿದರು.

  ಭಂಡಾರಿ ಸಹೋದರರ ಜೊತೆಗೆ RJ ರಶ್ಮಿಗೂ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕನ್ನಡ ಪ್ರೇಕ್ಷಕರು!ಭಂಡಾರಿ ಸಹೋದರರ ಜೊತೆಗೆ RJ ರಶ್ಮಿಗೂ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕನ್ನಡ ಪ್ರೇಕ್ಷಕರು!

  English summary
  RJ Rapid Rashmi visited KFCC today and apologized Kannadigas for asking controversial question to Anup Bhandari and Nirup Bhandari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X