'ರಾಜರಥ' ವಿವಾದದ ಬಗ್ಗೆ ಬಾಯ್ಬಿಟ್ಟ RJ ರಶ್ಮಿ: ಫೇಸ್ ಬುಕ್ ನಲ್ಲಿ ಕೊಟ್ರು ಟ್ವಿಸ್ಟ್.!

By Bharath Kumar

Recommended Video

'ರಾಜರಥ' ವಿವಾದದ ಬಗ್ಗೆ ಬಾಯ್ಬಿಟ್ಟ RJ ರಶ್ಮಿ | FIlmibeat Kannada

'ರಾಜರಥ' ಚಿತ್ರದ ಡೈಲಾಗ್ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕನ್ನಡ ಪ್ರೇಕ್ಷಕರನ್ನ ಹೀಯಾಳಿಸಿದ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ವಿರುದ್ಧ ತೀವ್ರ ಟೀಕೆ ಎದುರಾಗಿತ್ತು. ಕೊನೆಗೂ ಇಬ್ಬರು ಎಚ್ಚೆತ್ತುಕೊಂಡು ಕನ್ನಡಿಗರಲ್ಲಿ ಕ್ಷಮೆ ಕೇಳಿದರು.

ಆದ್ರೆ, ಈ ತಪ್ಪಿನಲ್ಲಿ ನಿರೂಪಕಿ ರಶ್ಮಿ ಅವರದ್ದು ಪಾಲಿದೆ. ಹೀಗಾಗಿ ಅವರು ಕೂಡ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಆದ್ರೆ, RJ ರಶ್ಮಿ ಯಾವುದೇ ಸ್ಪಷ್ಟನೆ ಮತ್ತು ಹೇಳಿಕೆ ನೀಡಿರಲಿಲ್ಲ. ಇದೀಗ, ತಮ್ಮ ಫೇಸ್ ಬುಕ್ ನಲ್ಲಿ ಈ ವಿವಾದ ಬಗ್ಗೆ ಮಾತನಾಡಿದ್ದಾರೆ.

'ರಾಜರಥ' ಡೈಲಾಗ್ ವಿವಾದಕ್ಕೆ ಸ್ಪಷ್ಟನೆ ನೀಡಿರುವ ರಶ್ಮಿ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ವೈರಲ್ ಆಗಿರುವ ವಿಡಿಯೋ ನೋಡಿದ್ದು ಸಾಕು ಈಗ ಎಡಿಟ್ ಮಾಡದೇ ಇರುವ ವಿಡಿಯೋ ಅಪ್ ಲೌಡ್ ಮಾಡಿದ್ದೀನಿ ನೋಡಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮುಂದೆ ಓದಿ...

ಸಂದರ್ಶನದಲ್ಲಿ ಆಗಿದ್ದೇನು.?

ಸಂದರ್ಶನದಲ್ಲಿ ಆಗಿದ್ದೇನು.?

''ರಾಜರಥ' ಸಂದರ್ಶನ ನಡೆದ ಘಟನೆ. ಎಡುವಿದ್ದಿಯ ತಿದ್ದೋ ಅಂತ ಕೆಲವು comments ಬರೆದಿದ್ದೀರಾ. ಎಲ್ಲವನ್ನು ಗೌರವಿಸಿ ತಿದ್ದುಕೊಂಡು ಮುಂದೆ ನಡೀತಾ ನಡೆದ ವಿಚಾರದ ಬಗ್ಗೆ ನನಗಿರುವ ಕೆಲವು ವಿಚಾರಗಳು ಹೀಗೆ. ಕೇಳಿದ ಪ್ರಶ್ನೆ - ರಾಜರಥ ಸಿನಿಮಾ ನೋಡದವರು -----, ಲಕ್ಷಾಂತರ ಕನ್ನಡ ಪದಗಳಿವೆ ತುಂಬಿಸಲಿಕ್ಕೆ''

ನಾನು ಯಾರಿಗೂ ಪ್ರಚೋದನೆ ಮಾಡಿಲ್ಲ

ನಾನು ಯಾರಿಗೂ ಪ್ರಚೋದನೆ ಮಾಡಿಲ್ಲ

''ನಾನು ಯಾರಿಗೂ ಹಾಗೆ ಉತ್ತರ ಕೊಡಕ್ಕೆ ಪ್ರಚೋದಿಸಿಲ್ಲ.. ಗೊತ್ತಿಲದೇ ತಗೊಂಡ ತಿರುವಿಗೆ ಕ್ಷಮೆ ಇರಲಿ..ತಿದ್ದುಕೊಂಡು ಇನ್ನು ಮುಂದಿನ ದಿನದಲ್ಲೂ ನಿಮ್ಮ ಹೆಮ್ಮೆಯ ರಶ್ಮಿ ಆಗಿರಲು ನನ್ನ ಎಲ್ಲ ಪ್ರಯತ್ನ ಇರತ್ತೆ. 2 ವಾರದ ಹಿಂದೆ ಮಾಡಿದ ರಾಜರಥ fB live, ಎಡಿಟ್ ಆಗಿರೋ ವಿಡಿಯೋ ವೈರಲ್ ಆಗಿ ಇಷ್ಟೆಲ್ಲ ಆಗಿದೆ. ಈಗ original video (unedited) upload ಮಾಡ್ತೀವಿ ನೋಡಿ''

ನನಗೂ ಬೇಸರ ಇದೆ

ನನಗೂ ಬೇಸರ ಇದೆ

''ಸಂದರ್ಶನದಲ್ಲಿ ಅವರಿಂದ ಬಾಯಿ ತಪ್ಪಿ ಬಂದ ಪದಬಳಿಕೆ ಬಗ್ಗೆ ಬೇಸರ ನನಗೂ ಇದೆ, ಕ್ಷಮೆ ಕೇಳಿದ್ದಾರೆ..ಈಗ ನಾನು ಕನ್ನಡದವಳೇ ಆಗಿ, ನಾನು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಎಲ್ಲೂ ತಪ್ಪಾಗಿ ಮಾತಾಡಿಲ್ಲ.. ಮುಂದೇನೂ ಸಾಧ್ಯವೇ ಇಲ್ಲ.. ಮತ್ತೆ ಈ ವಿಡಿಯೋ ನೋಡಿ. ನಮ್ಮ ಶೋ ಇಂದ ಏನಾದ್ರು ತಪ್ಪಾಗಿದ್ಯಾ?? ಈ ವಿಡಿಯೋ ನೋಡಿ ಡಿಸೈಡ್ ಮಾಡಿ, ಆಗಿದ್ದರೆ ಕ್ಷಮಿಸಿ''

ಉದ್ದೇಶ ಪೂರ್ವಕವಾಗಿ ಮಾಡಿರುವ ವಿಡಿಯೋ

ಉದ್ದೇಶ ಪೂರ್ವಕವಾಗಿ ಮಾಡಿರುವ ವಿಡಿಯೋ

''80 ಸಿನಿಮಾಗಳು ಜವಾಬ್ದಾರಿ ಇಂದ ಪ್ರಮೋಟ್ ಮಾಡಿದ್ದೀವಿ. ಮುಂದೆ ಇನ್ನೂ ಹೆಚ್ಚು ಜಾಗರೂಕರಾಗಿ ಇನ್ನು ನಿಭಾಯಿಸ್ತೀವಿ. ಅಲ್ಲಿದ್ದ ಸ್ಟುಡಿಯೋ ಚಪ್ಪಾಳೆ ಹೊಡಿದಿದ್ದಾರೆ. ಎಲ್ಲ ಉತ್ತರಕ್ಕೂ ಮತ್ತೆ ಕೆಲವು ಪ್ರಶ್ನೆಗೆ ನಾನು ಚಪ್ಪಾಳೆ ಹೊಡೆದಿದ್ದೀನಿ. ಮತ್ತು ನಾವು ಕೊಟ್ಟಿರೋ unedited reactions ನೀವೇ ನೋಡಿ. ಬೇಸರ ಅಂದರೆ, ಸಂಪೂರ್ಣ ಸಂದರ್ಶನ ನೋಡಿ, ತಮಗೆ ಬೇಕಾಗಿರೋ ಹಾಗೆ 40-50 ಸೆಕೆಂಡ್ ವಿವಾದಕ್ಕಾಗಿ ಕತ್ತರಿ ಹಾಕಿರೋ ಎಡಿಟ್ ವಿಡಿಯೋ ಓಡಾಡಿ, ಫೇಮಸ್ ಡೈಲಾಗ್ ಇದೆ''

ಕನ್ನಡಿಗರ ವಿಶಾಲ ಹೃದಯದವರು

''ಕನ್ನಡಿಗರು ವಿಶಾಲ ಹೃದಯದವರು ಹಾಗೆ ಪ್ರಜ್ಞಾವಂತರು, ಅವರ ಭಾವನೆಗಳ ಜೊತೆ ಆಟಾಡೋ ಹಾಗೆ ಎಡಿಟ್ ಮಾಡಿರೋರಿಗೆ ಕನ್ನಡಿಗರೇ ಉತ್ತರ ಕೊಡಲಿ. ಕೊನೆ ತೀರ್ಪು ನಿಮ್ಮದೇ ..ಆದರೂ ಫುಲ್-(full) ವಿಡಿಯೋ ಯಾಕೆ ಸ್ವಾಮಿ ಹಾಕಿಲ್ಲ ! !!?? ಈಗ ಲೈಕ್ ಮಾಡಿ, ನಿಜವಾದ ವಿಡಿಯೋ ಶೇರ್ ಮಾಡಿ, ಮತ್ತು ಇಷ್ಟೊತ್ತು ಫಾರ್ವಾಡ್ ಆಗಿರುವ ವಿಡಿಯೋ ಕ್ರಿಯೆಟ್ ಮಾಡಿದ ತಮಾಷೆಗೆ-------????? ಮುಂದಿನ ದಿನದಲ್ಲೂ ನಿಮ್ಮ ಪ್ರೀತಿ, ಅಭಿಮಾನಕ್ಕೆ ಧಕ್ಕೆ ಬಾರದ ಹಾಗೆ ನಡೆಯುವೆ. ಇಂತಿ ನಿಮ್ಮ ರಾಪಿಡ್ ರಶ್ಮಿ'' ಎಂದು ಬರೆದುಕೊಂಡಿದ್ದಾರೆ.

More from Filmibeat

English summary
RJ Rapid rashmi has taken her Facebook account to express her clarification about rajaratha dialogue controversy. Director Anup Bandari, Actor Nirup Bhandari and Actress Avantika Shetty scolds kannada movie audience in Rapid rashmi show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X