ಮದುವೆಯೊಂದರಲ್ಲಿ ತನ್ನಿಂದ ಆದ ನಷ್ಟಕ್ಕೆ ಅಂಬಿ ತೆಗೆದುಕೊಂಡ ನಿರ್ಧಾರವೇನು.?

Recommended Video

ಮದುವೆಯೊಂದರಲ್ಲಿ ತನ್ನಿಂದ ಆದ ನಷ್ಟಕ್ಕೆ ಅಂಬಿ ತೆಗೆದುಕೊಂಡ ನಿರ್ಧಾರವೇನು.? | FILMIBEAT KANNADA

ರೆಬೆಲ್ ಸ್ಟಾರ್ ಅಂಬರೀಶ್ ಈಗ ನಮ್ಮೊಂದಿಗೆ ಇಲ್ಲ. ಆದ್ರೆ, ಅವರ ವ್ಯಕ್ತಿತ್ವ, ಅವರು ಮಾಡಿದ ಕೆಲಸಗಳು, ಅವರ ಸಿನಿಮಾಗಳು, ಅವರು ನಡೆದ ಬಂದ ಹಾದಿ ಎಲ್ಲವೂ ಕಾಡುತ್ತಿದೆ. ಅಂಬರೀಶ್ ಅವರ ಬಗ್ಗೆ ನಾವು-ನೀವು ನೋಡಿರದ ಹಲವು ರೋಚಕ ವಿಷ್ಯಗಳು ಇವೆ. ಇಂತಹ ಸಂಗತಿಗಳು ಅವರ ಆಪ್ತರು ಹೇಳುವ ಮೂಲಕ ಒಂದೊಂದೆ ಗೊತ್ತಾಗುತ್ತಿದೆ.

ಅಂಬರೀಶ್ ಅವರನ್ನ ಕಲಿಯುಗ ಕರ್ಣ ಎನ್ನುತ್ತಿದ್ದರು. ಕಷ್ಟ ಅಂತ ಬಂದವರಿಗೆ ಸಹಾಯ ಮಾಡುವ ಗುಣ ಅವರದ್ದು. ಬಲಗೈನಲ್ಲಿ ಮಾಡಿದ್ದ ಸಹಾಯ ಎಡಗೈಗೆ ಗೊತ್ತಾಗದಂತೆ ನೋಡಿಕೊಳ್ಳುವ ವ್ಯಕ್ತಿತ್ವ.

ಬಹುಶಃ ಅಂಬರೀಶ್ ಯಾರಿಗೂ ನೋವು ಮಾಡಿಲ್ಲ. ಒಂದು ವೇಳೆ ಅವರಿಂದ ಯಾರಿಗಾದರೂ ನೋವು, ನಷ್ಟ ಆಗಿದ್ದರೇ ಅಲ್ಲಿಂದು ಇನ್ನೊಂದು ನಿರ್ಧಾರವನ್ನ ತೆಗೆದುಕೊಳ್ಳುವಂತಹ ವ್ಯಕ್ತಿ ರೆಬೆಲ್ ಸ್ಟಾರ್. ಇದಕ್ಕೆ ಒಂದು ಉದಾಹರಣೆ ಸಿಕ್ಕಿದೆ. ಮದುವೆ ಸಮಾರಂಭದಲ್ಲಿ ತನ್ನಿಂದ ಆಗಿದ್ದ ನಷ್ಟವನ್ನ ನೋಡಿ, ಬೇಸರ ಮಾಡಿಕೊಂಡಿದ್ದ ಅಂಬಿ, ಅಲ್ಲಿಂದ ಹೊಸ ನಿರ್ಧಾರವನ್ನ ತೆಗೆದುಕೊಂಡರಂತೆ. ಏನದು ಕಥೆ.? ಮುಂದೆ ಓದಿ.....

ಬಡವರ ಮನೆ ಮದುವೆಗೆ ಹೋಗಿದ್ದಾಗ...

ಬಡವರ ಮನೆ ಮದುವೆಗೆ ಹೋಗಿದ್ದಾಗ...

ಅಂಬರೀಶ್ ಅವರು ಆಗ ಅನೇಕ ಮದುವೆ ಸಮಾರಂಭಗಳಿಗೆ ಹೋಗುತ್ತಿದ್ದರು. ಆ ವೇಳೆ ಅಂಬಿಯನ್ನ ನೋಡಲು ನೆರೆದಿದ್ದ ಜನರು ಮುಗಿಬೀಳುತ್ತಿದ್ದರು. ಹೀಗೆ, ಒಮ್ಮೆ ಬಡವರ ಮನೆಯ ಮದುವೆಗೆ ಹೋಗಿದ್ದರಂತೆ. ಆಗ ಊಟ ಮಾಡುತ್ತಿದ್ದ ಇನ್ನೂರು ಮುನ್ನೂರು ಜನ ಅಂಬರೀಶ್ ಅವರನ್ನ ನೋಡುವ ಆಸೆಯಿಂದ ಮಾಡುತ್ತಿದ್ದ ಊಟವನ್ನ ಬಿಟ್ಟು ಬಂದರಂತೆ.

ತನ್ನಿಂದ ಊಟ ವೇಸ್ಟ್ ಆಯಿತು

ತನ್ನಿಂದ ಊಟ ವೇಸ್ಟ್ ಆಯಿತು

ಅಂಬರೀಶ್ ಅವರನ್ನ ನೋಡುವ ಆಸೆಯಿಂದ ತಿನ್ನುತ್ತಿದ್ದ ಊಟವನ್ನ ಬಿಟ್ಟು ಜನರು ಬಂದುಬಿಟ್ಟರು. ಆ ವೇಳೆ ಎಷ್ಟೊಂದು ಊಟ ವೇಸ್ಟ್ ಆಯಿತು. ಇದು ಅಂಬರೀಶ್ ಅವರ ಗಮನಕ್ಕೆ ಬಂದು ತುಂಬಾ ಬೇಸರ ಮಾಡಿಕೊಂಡರಂತೆ. ಹಾಗಾಗಿ, ಇನ್ಮುಂದೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಒಂದು ದೃಢ ನಿರ್ಧಾರವನ್ನ ತೆಗೆದುಕೊಂಡರಂತೆ.

ಏನದು ಆ ನಿರ್ಧಾರ.?

ಏನದು ಆ ನಿರ್ಧಾರ.?

ಮದುವೆ ಸಮಾರಂಭ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಹೋದಾಗ, ಊಟದ ಸಮಯದಲ್ಲಿ ಹೋಗಬಾರದು, ಊಟ ಆದ ಬಳಿಕ ಅಥವಾ ಊಟ ಆರಂಭವಾಗುವುದಕ್ಕೂ ಮುಂಚೆಯೇ ಹೋಗಿ ಬರಬೇಕು ಎಂಬ ನಿರ್ಧಾರ ಮಾಡಿಕೊಂಡರಂತೆ ಅಂಬಿ.

ಮನೆಗೆ ಬಂದವರಿಗೆ ಊಟ

ಮನೆಗೆ ಬಂದವರಿಗೆ ಊಟ

ಅನ್ನಕ್ಕೆ ಅಂಬರೀಶ್ ಅವರು ಹೆಚ್ಚು ಗೌರವ ನೀಡುತ್ತಿದ್ದರು ಎನ್ನುವುದಕ್ಕೆ ಆ ಮದುವೆ ಘಟನೆಯೇ ಸಾಕ್ಷಿ. ಇನ್ನು ತಮ್ಮ ಮನೆಗೆ ಹೆಚ್ಚು ಜನ ಬರ್ತಿದ್ದರಂತೆ. ಬಂದವರು ಹಸಿವಿನಿಂದ ವಾಪಸ್ ಹೋಗಬಾರದು ಎಂಬ ಕಾರಣಕ್ಕೆ ಮೂರು ಜನರನ್ನ ಅಡುಗೆ ಮಾಡಲು ನೇಮಿಸಿಕೊಂಡಿದ್ದರಂತೆ. ಬಿಡುವು ಇದ್ದ ಸಮಯದಲ್ಲಿ ಅಂಬರೀಶ್ ಅವರು ಕೂಡ ಅಡುಗೆ ಮಾಡುತ್ತಿದ್ದರಂತೆ' ಎಂದು ಅಂಬರೀಶ್ ಅವರ ಆಪ್ತ ಶ್ರೀನಿವಾಸ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಉಮಾಶ್ರೀ ಹೇಳಿದ ಬಿರಿಯಾನಿ ಕಥೆ

ಉಮಾಶ್ರೀ ಹೇಳಿದ ಬಿರಿಯಾನಿ ಕಥೆ

ಇನ್ನು ನಟಿ ಉಮಾಶ್ರೀ ಕೂಡ ಅಂಬರೀಶ್ ಅವರ ಬಿರಿಯಾನಿ ಕಥೆ ಹೇಳಿದ್ದರು. ಶೂಟಿಂಗ್ ಮುಗಿಸಿಕೊಂಡು ಮನೆಗೆ ಹೋಗಬೇಕಾದರೆ, ಒಮ್ಮೆ ಉಮಾಶ್ರೀ ಅವರ ಮನೆಗೆ ಹೋಗಿದ್ದರಂತೆ. ಅಲ್ಲಿ ಉಮಾಶ್ರೀ ಅವರ ಕೈಯಿಂದ ಬಿರಿಯಾನಿ ಮಾಡಿಸಿಕೊಂಡು ತಿಂದಿದ್ದರಂತೆ. ನಂತರ ಬಿರಿಯಾನಿ ರುಚಿಯನ್ನ ಎಲ್ಲರ ಬಳಿಯೂ ಹೇಳಿಕೊಂಡು ಖುಷಿ ಪಡುತ್ತಿದ್ದರಂತೆ.

More from Filmibeat

English summary
Kannada actor ambareesh personal assistant srinivas has revealed a rare incident about rebel star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X