ಅಪರೂಪದ ಫೋಟೋ: ಮಗಳನ್ನಾಡಿಸಿದ ತೋಳಲ್ಲಿ, ಮೊಮ್ಮಗಳ ತೂಗುವ ಸಂಭ್ರಮ.!
ಮಗಳು ರಾಧಿಕಾ ಪಂಡಿತ್.. ಸ್ಯಾಂಡಲ್ ವುಡ್ ನಲ್ಲಿ ಹೀರೋಯಿನ್ ಆಗಿದ್ದರೆ,ಅಳಿಯ ರಾಕಿಂಗ್ ಸ್ಟಾರ್ ಯಶ್.. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ.
ಇನ್ನೂ ಮಗ ಗೌರಂಗ್ ಪಂಡಿತ್.. ಉತ್ತಮ ಕೆಲಸದೊಂದಿಗೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಇಬ್ಬರೂ ಮಕ್ಕಳಿಂದಲೂ ಕೃಷ್ಣ ಪಂಡಿತ್ ಮತ್ತು ಮಂಗಳ ಪಂಡಿತ್ ದಂಪತಿಗೆ ಮೊಮ್ಮಕ್ಕಳು ಹುಟ್ಟಿದ್ದಾರೆ.
ಇಬ್ಬರು ಮಕ್ಕಳನ್ನ ಸಾಕಿ ಸಲಹಿರುವ ಕೃಷ್ಣ ಪಂಡಿತ್ ದಂಪತಿ ಇದೀಗ ಮೊಮ್ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿದ್ದಾರೆ. ಮಗ-ಮಗಳನ್ನು ಆಡಿಸಿದ ತೋಳಲ್ಲಿ ಈಗ ಮೊಮ್ಮಕ್ಕಳನ್ನು ತೂಗುವ ಸಂಭ್ರಮದಲ್ಲಿದ್ದಾರೆ ಕೃಷ್ಣ ಪಂಡಿತ್ ದಂಪತಿ.
ವಯಸ್ಸಾದ ಮೇಲೆ ಮಕ್ಕಳು-ಮೊಮ್ಮಕ್ಕಳ ಜೊತೆಗೆ ಖುಷಿಯಿಂದ ಇರಬೇಕು ಅನ್ನೋದು ಎಲ್ಲರ ಆಸೆ. ಈ ವಿಚಾರದಲ್ಲಿ ಕೃಷ್ಣ ಪಂಡಿತ್ ಮತ್ತು ಮಂಗಳ ಪಂಡಿತ್ ದಂಪತಿ ತುಂಬಾನೇ ಲಕ್ಕಿ. ಒಂದು ಕಡೆ ಒಂದು ವರ್ಷದ ಮುದ್ದು ಕೂಸು ಆಯ್ರಾ. ಇನ್ನೊಂದು ಕಡೆ ಒಂದು ತಿಂಗಳ ಕಂದಮ್ಮ. ಮತ್ತೊಂದು ಕಡೆ ಗೌರಂಗ್ ಪುತ್ರಿ ರಿಯಾ. ಎಲ್ಲರ ಜೊತೆಗೆ ಕೃಷ್ಣ ಪಂಡಿತ್ ದಂಪತಿ ಆನಂದ ಸಾಗರದಲ್ಲಿ ಮುಳುಗಿದ್ದಾರೆ .

ಇತ್ತೀಚೆಗಷ್ಟೇ ನಡೆದ ಆಯ್ರಾ ಮೊದಲ ವರ್ಷದ ಬರ್ತಡೇ ಪಾರ್ಟಿಯಲ್ಲಿ ಕೃಷ್ಣ ಪಂಡಿತ್ ಮತ್ತು ಮಂಗಳ ರವರ ಮುಖದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು. ಮೊಮ್ಮಗಳನ್ನು ಎತ್ತಿಕೊಂಡು ಇಬ್ಬರೂ ಮುದ್ದು ಮಾಡುತ್ತಿದ್ದರು. ಆ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಹೀಗಿರುವಾಗಲೇ, ಪುಟಾಣಿ ರಾಧಿಕಾ ಪಂಡಿತ್ ರನ್ನ ತಂದೆ ಕೃಷ್ಣ ಪಂಡಿತ್, ತಾಯಿ ಮಂಗಳ ಪಂಡಿತ್ ಎತ್ತಿಕೊಂಡಿರುವ ಫೋಟೋಗಳು ಕೂಡ ವೈರಲ್ ಆಗಿವೆ.
ಅಂದು ಮಗಳನ್ನ ಕೃಷ್ಣ ಪಂಡಿತ್ ಮತ್ತು ಮಂಗಳ ಪಂಡಿತ್ ದಂಪತಿ ಹೇಗೆ ಆಡಿಸಿದ್ದರೋ, ಇಂದು ಅದೇ ರೀತಿ ಮೊಮ್ಮಗಳನ್ನೂ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ. ಆ ಅಪರೂಪದ ಫೋಟೋಗಳನ್ನು ನೋಡುವುದೇ ಚೆಂದ.


Click it and Unblock the Notifications