twitter
    For Quick Alerts
    ALLOW NOTIFICATIONS  
    For Daily Alerts

    ಡಾ ರಾಜ್‌ ಗೆ ಕಲರ್ ಶರ್ಟ್ ಹಾಕಿಸಿದ ಅಪರೂಪದ ಕಥೆ

    By ಶಶಿಧರ ಚಿತ್ರದುರ್ಗ
    |

    ಏಪ್ರಿಲ್ 12, ವರನಟ ಡಾ.ರಾಜ್ ಕುಮಾರ್ ಅವರ ಪುಣ್ಯತಿಥಿ. ಈ ವಿಶೇಷ ದಿನದಂದು ಅಣ್ಣಾವ್ರ ಕುರಿತು ಒಂದು ಅಪರೂಪದ ಕಥೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಸದಾ ಬಿಳಿ ಶರ್ಟ್ ಮತ್ತು ಪಂಚೆಯಲ್ಲೇ ಇರುತ್ತಿದ್ದ ರಾಜ್ ಅವರ ಬಳಿ ಕಲರ್ ಶರ್ಟ್ ಹಾಕಿಸಿದ ಕಥೆ ಇದು.

    ಕನ್ನಡ ಚಿತ್ರರಂಗ ಕಂಡ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಅಶ್ವತ್ಥ ನಾರಾಯಣ ಅವರು ರಾಜ್‌ ರೊಂದಿಗೆ ಒಡನಾಡಿದ ಸಂದರ್ಭವೊಂದನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ನಾನು ಸ್ಥಿರಚಿತ್ರ ಛಾಯಾಗ್ರಹಣದ ಜೊತೆ ಆಗ ಸಿನಿಮಾ ಪತ್ರಿಕೆಗಳಿಗೂ ಕಾರ್ಯ ನಿರ್ವಹಿಸುತ್ತಿದ್ದೆ. ವಿ.ಎನ್.ಸುಬ್ಬರಾವ್ ಅವರ 'ಮೇನಕಾ' ಸಿನಿಮಾ ಪತ್ರಿಕೆಗೆ ಫೋಟೋ ತೆಗೆದುಕೊಡುತ್ತಿದ್ದೆ.

    ಈ ಪತ್ರಿಕೆ ಸುಮಾರು ಎಂಟು ವರ್ಷಗಳ ಕಾಲ ನಡೆಯಿತು. ಇದು ನಿಂತುಹೋಗಿ ದಶಕಗಳ ನಂತರ ವಿ.ಎನ್.ಸುಬ್ಬರಾವ್ ಮತ್ತೊಂದು ಸಿನಿಮಾ ಪತ್ರಿಕೆ 'ತಾರಾಲೋಕ' ಆರಂಭಿಸಿದರು. ಈ ಪತ್ರಿಕೆಗೂ ನಾನು ಕೆಲಸ ಮಾಡಿದ್ದೆ. 'ತಾರಾಲೋಕ'ದ ಸುಸಂದರ್ಭವೊಂದನ್ನು ಇಲ್ಲಿ ದಾಖಲಿಸಬಹುದು. ಏನಿದು ಅಣ್ಣಾವ್ರ ಕಲರ್ ಶರ್ಟ್ ಕಥೆ ಮುಂದೆ ಓದಿ.....

    ಅಣ್ಣಾವ್ರಿಗೆ ಆಗ 60 ವರ್ಷ

    ಅಣ್ಣಾವ್ರಿಗೆ ಆಗ 60 ವರ್ಷ

    ಡಾ.ರಾಜಕುಮಾರ್ ಅವರಿಗೆ ಅರವತ್ತು ವರ್ಷ (1988) ತುಂಬಿದ ಸಂದರ್ಭ. ಪತ್ರಿಕೆಗಾಗಿ ಸಂದರ್ಶಿಸಲೆಂದು ಸುಬ್ಬರಾವ್ ಮತ್ತು ನಾನು ಸದಾಶಿವನಗರದ ಅವರ ಮನೆಗೆ ಹೋಗಿದ್ದೆವು. 'ಈ ಬಾರಿ ರಾಜ್‌ ರ ಡಿಫರೆಂಟ್ ಫೋಟೋಗಳೇ ಬೇಕು' ಎಂದು ಸುಬ್ಬರಾಯರು ಖಡಾಖಂಡಿತವಾಗಿ ಹೇಳಿದ್ದರು. ಸದಾ ಬಿಳಿ ಷರ್ಟ್, ಪಂಚೆಯಲ್ಲೇ ಇರುವ ರಾಜ್‌ ರ ಡಿಫರೆಂಟ್ ಫೋಟೋಗಳನ್ನು ತೆಗೆಯುವುದು ಹೇಗೆಂದು ನನಗೆ ಗೊಂದಲವಾಗಿತ್ತು.

    ಸರ್, ಕಲರ್ ಶರ್ಟ್ ಹಾಕಿಕೊಳ್ಳಬಹುದಲ್ಲ

    ಸರ್, ಕಲರ್ ಶರ್ಟ್ ಹಾಕಿಕೊಳ್ಳಬಹುದಲ್ಲ

    'ಸರ್, ಕಲರ್ ಶರ್ಟ್ ಹಾಕಿಕೊಳ್ಳಬಹುದಲ್ಲ..' ಎಂದು ಸಂದರ್ಶನದ ವೇಳೆ ನಾನು ಅಳುಕಿನಿಂದಲೇ ರಾಜ್‌ ಗೆ ಮನವಿ ಮಾಡಿದೆ. 'ಶೂಟಿಂಗ್ ಹೊರತು ಬೇರೆ ವೇಳೆ ನಾನು ಯಾವತ್ತೂ ಕಲರ್ ಶರ್ಟ್ ‌ಗಳನ್ನು ಹಾಕಿಕೊಳ್ಳೋಲ್ಲ, ನಿಮಗೆ ಗೊತ್ತಲ್ಲ?' ಎಂದರು ರಾಜ್. 'ಡಿಫರೆಂಟ್ ಆಗಿ ಇರ್ಲಿ ಅಂತ...' ಎಂದು ನಾನು ರಾಗ ಎಳೆದೆ. ಅದೇನನ್ನಿಸಿತೋ ರಾಜ್ ಒಳಹೋದರು. ಕೆಲ ನಿಮಿಷಗಳಲ್ಲೇ ಅಳಿಯ ಗೋವಿಂದರಾಜು ಅವರ ಕಲರ್ ಶರ್ಟ್ ಹಾಕಿಕೊಂಡು ಬಂದರು.

    ಗೋವಿಂದು ರಾಜು ಅವರ ಶರ್ಟ್

    ಗೋವಿಂದು ರಾಜು ಅವರ ಶರ್ಟ್

    ಅವರಲ್ಲಿ ಬಿಳಿ ಶರ್ಟ್ ‌ಗಳ ಹೊರತಾಗಿ ಬೇರೆ ಕಲರ್‌ ನವು ಇರಲೇ ಇಲ್ಲ! ಪಾಪ, ಗೋವಿಂದರಾಜು ಅವರ ಶರ್ಟ್ ರಾಜ್ ದೇಹಕ್ಕೆ ಹೊಂದಿಕೆಯಾಗದೆ ಟೈಟ್ ಆಗಿತ್ತು. ಅದನ್ನು ಬದಲಿಸಿ ಬೇರೆ ಶರ್ಟ್ ಧರಿಸಬಹುದೇ ಎಂದು ಕೇಳಲು ನನಗೂ ಸರಿ ಎನಿಸಲಿಲ್ಲ. ಹಾಗೆಯೇ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದೆ.

    ಮಳೆಯಲ್ಲಿ ಫೋಟೋ ತೆಗೆದೆ

    ಮಳೆಯಲ್ಲಿ ಫೋಟೋ ತೆಗೆದೆ

    ಮನೆಯ ಹೊರಗೆ ಅಂಗಳದಲ್ಲಿ ಫೋಟೋ ತೆಗೆಯುವ ನನ್ನ ಅಪೇಕ್ಷೆಯನ್ನು ರಾಜ್‌ ಗೆ ಹೇಳಿದೆ. ಆಗ ಮಳೆ ಬರುತ್ತಿತ್ತು. 'ಮಳೆ ಬರ್ತಿದೆ, ಒದ್ದೆಯಾಗ್ತೀರಿ..' ಎಂದೆ. 'ಇದೆಂಥಾ ಮಳೆ, ಬನ್ನಿ ಹೋಗೋಣ..' ಎಂದು ರಾಜ್ ಅಂಗಳಕ್ಕೆ ಬಂದರು. ಮಳೆಯ ಜೊತೆಗೆ ಆಲಿಕಲ್ಲು ಬೀಳುತ್ತಿದ್ದವು. ಅಂಗಳದಲ್ಲಿ ಬಿದ್ದ ಆಲಿಕಲ್ಲುಗಳನ್ನು ಬಾಯಲ್ಲಿ ಹಾಕಿಕೊಂಡು ಖುಷಿಪಟ್ಟರು ರಾಜ್! ಮಗುವಿನಂತೆ ಮಳೆಯ ಖುಷಿ ಅನುಭವಿಸಿದ ಅವರ ಕೆಲವು ಬಂಗಿಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದೆ.

    English summary
    Senior Photo journalist pragati ashwath narayan narrate a beautiful story on dr rajkumar color shirt.
    Friday, April 12, 2019, 12:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X