For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ನಿತೀನ್ ಜೊತೆ ರಶ್ಮಿಕಾ ನಟನೆ: ಭೀಷ್ಮ ಆರಂಭ

  |
  ತೆಲುಗು, ತಮಿಳಿನಲ್ಲಿ ರಶ್ಮಿಕಾ ಮಂದಣ್ಣದ್ದೇ ಹವಾ | FILMIBEAT KANNADA

  ಟಾಲಿವುಡ್ ಸ್ಟಾರ್ ನಿತೀನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಭೀಷ್ಮ ಸಿನಿಮಾದ ಮುಹೂರ್ತ ಇಂದು ಜರುಗಿದೆ. 20ನೇ ತಾರೀಖಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಪಕ್ಕಾ ಮನರಂಜನೆ ನೀಡಲಿದೆ ಎಂಬ ಮಾತು ನೀಡಿದ್ದಾರೆ ಹೀರೋ ನಿತೀನ್.

  ಚಲೋ ಸಿನಿಮಾದ ನಂತರ ವೆಂಕಿ ಕುಡುಮುಲಾ ಅವರ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಮೊದಲ ಸಲ ನಿತೀನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಸಿತಾರ ಎಂಟರ್ ಪ್ರೈಸಸ್ ಅಡಿಯಲ್ಲಿ ವಂಶಿ ನಿರ್ಮಿಸುತ್ತಿದ್ದಾರೆ.

  ಜೂನ್ 12ಕ್ಕೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಆರಂಭ ಜೂನ್ 12ಕ್ಕೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಆರಂಭ

  ಈ ಚಿತ್ರದಲ್ಲಿ ರಶ್ಮಿಕಾ ಅವರ ಪಾತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ, ದೈಹಿಕವಾಗಿ ಮತ್ತಷ್ಟು ಫಿಟ್ ಆಗುವ ಕಾರಣದಿಂದ ವರ್ಕೌಟ್ ಮಾಡ್ತಿದ್ದಾರೆ. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಯಾವ ಸಿನಿಮಾಗಾಗಿ ಎಂಬುದು ಖಚಿತವಾಗಿಲ್ಲ.

  ರಶ್ಮಿಕಾ ಮಂದಣ್ಣ 'ಬ್ಯಾಕ್ ಡೈವ್' ವಿಡಿಯೋ ವೈರಲ್ರಶ್ಮಿಕಾ ಮಂದಣ್ಣ 'ಬ್ಯಾಕ್ ಡೈವ್' ವಿಡಿಯೋ ವೈರಲ್

  ಇನ್ನುಳಿದಂತೆ ಭೀಷ್ಮ ಸಿನಿಮಾ ಬಿಟ್ಟು ಮಹೇಶ್ ಬಾಬು ಅವರ ಸರಿಲೇರು ನೀಕೆವರು, ಅಲ್ಲು ಅರ್ಜುನ್ ಅವರ 20ನೇ ಚಿತ್ರ ಹಾಗೂ ತಮಿಳಿನಲ್ಲಿ ಕಾರ್ತಿ ಜೊತೆ ಒಂದು ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡದಲ್ಲಿ ಪೊಗರು ಸಿನಿಮಾ ಮಾಡ್ತಿದ್ದಾರೆ.

  English summary
  Bheeshma Launch Today, directed by Venky Kudumula Featuring nithiin, Rashmika in the film. Vamshi is the producer. This Film is Expected to be Released on this Dec 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X