ರಶ್ಮಿಕಾ ಮಂದಣ್ಣ ಕೊಟ್ಟಿದ್ದಾರೆ ಒಳ್ಳೆಯ ಸಿನಿಮಾ ಆಫರ್
ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಗ್ಯಾಂಗ್ ನಿಂದ ಸಿನಿಮಾ ಲೋಕಕ್ಕೆ ಪರಿಚಯವಾದ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬ್ಯುಸಿ ನಟಿಯರಲ್ಲೊಬ್ಬರು. ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಕತೆಗಾರರ ಹುಡುಕಾಟದಲ್ಲಿಯೋ ಹಾಗೆಯೇ ರಶ್ಮಿಕಾ ಮಂದಣ್ಣ ಸಹ ಕತೆಗಾರರ ಹುಡುಕಾಟದಲ್ಲಿದ್ದಾರೆ.
Recommended Video
ಹೌದು, ಸಿನಿಮಾ ಆಸಕ್ತಿಯ ಮಂದಿಗೆ ರಶ್ಮಿಕಾ ಮಂದಣ್ಣ ಒಂದೊಳ್ಳೆ ಆಫರ್ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್ ನಲ್ಲಿ ವಿಡಿಯೋ ಹಾಕಿರುವ ರಶ್ಮಿಕಾ ಮಂದಣ್ಣ, ನಿರ್ದೇಶಕರಾಗಲು ಬಯಸುವವರ, ಕತೆಗಾರರಾಗಲು ಬಯಸುವವರಿಗೆ ಆಹ್ವಾನ ನೀಡಿದ್ದಾರೆ.
ಹೌದು, ಒಂದೊಮ್ಮೆ ನಿಮಗೆ ಸಿನಿಮಾ ನಿರ್ದೇಶಕರಾಗಲು, ಕತೆಗಾರರು ಇಷ್ಟವಿದ್ದಲ್ಲಿ ನಿಮ್ಮ ಕತೆಗಳನ್ನು, ಐಡಿಯಾಗಳನ್ನು ರಶ್ಮಿಕಾ ಜೊತೆಗೆ ಹಂಚಿಕೊಳ್ಳಿ, ಆ ಐಡಿಯಾಗಳನ್ನು ರಶ್ಮಿಕಾ ಮತ್ತು ತಂಡ ಪರಿಶೀಲಿಸಿ ನಿಮಗೆ ಪ್ರತಿಕ್ರಿಯೆ ನೀಡುತ್ತದೆ. ರಶ್ಮಿಕಾ ಮಂದಣ್ಣ ನಿಮ್ಮ ಸಿನಿಮಾ ಪ್ರೀತಿಗೆ ನೀರೆರೆಯುತ್ತಾರೆ.

ಸಣ್ಣ ತಂಡದೊಂದಿಗೆ ಹೊಸ ಪ್ರಯತ್ನ ಆರಂಭಿಸಿರುವ ರಶ್ಮಿಕಾ
ಆದರೆ ರಶ್ಮಿಕಾ ಹೇಳಿರುವ ಪ್ರಕಾರ, ಅವರ ತಂಡ ಸ್ವಲ್ಪ ಚಿಕ್ಕದಂತೆ ಹಾಗಾಗಿ ಬಂದ ಮೇಲ್‌ಗಳನ್ನು ನೋಡಿ ಪ್ರತಿಕ್ರಿಯೆ ನೀಡಲು ಸ್ವಲ್ಪ ತಡವಾಗಬಹುದು ಆದರೆ ತಾಳ್ಮೆ ಇರಲಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಅವರೂ ಇದೇ ಮಾದರಿಯ ಆಫರ್ ನೀಡಿದ್ದಾರೆ
ರಕ್ಷಿತ್-ರಿಷಬ್ ಸಹ ಕತೆಗಾರರ ಹುಡುಕಾಟದಲ್ಲಿದ್ದಾರೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ತಂಡ ಸಹ ಚಿತ್ರಕತೆ ಬರೆಹರಾಗಗರು, ಕತೆ ಬರೆಹಗಾರರನ್ನು ಹುಡುಕುವ ಕಾರ್ಯದಲ್ಲಿ ತಲ್ಲಿನವಾಗಿದೆ. ಅವರೂ ಸಹ ಇದೇ ಮಾದರಿಯ ಆಫರ್‌ಗಳನ್ನು ನೀಡಿ ಬರಹಗಾರರನ್ನು ಉತ್ತೇಜಿಸುತ್ತಿದ್ದಾರೆ.

ಕತೆಗಳ ಹುಡುಕಾಟದಲ್ಲಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಕತೆಗಳ ಹುಡುಕಾಟಕ್ಕೆ ಇಳಿದಿರುವುದು ಸ್ವಲ್ಪ ಆಶ್ಚರ್ಯವನ್ನೂ ತರಿಸಿದೆ. ರಶ್ಮಿಕಾ ತಮ್ಮದೇ ಪ್ರೊಡಕ್ಷನ್ ಸಂಸ್ಥೆಯನ್ನು ಹುಟ್ಟುಹಾಕುವ ಯತ್ನವನ್ನೇದಾರೂ ಮಾಡುತ್ತಿದ್ದಾರಾ ಎಂಬ ಗೊಂದಲ ಅಭಿಮಾನಿಗಳಲ್ಲಿ ಎದ್ದಿದೆ.

ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ತೆಲುಗು ಸಿನಿರಂಗದಲ್ಲಿ ಬಹು ಬ್ಯುಸಿ ಆಗಿದ್ದಾರೆ. ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಅವರು ನೀಡುತ್ತಿದ್ದಾರೆ. ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಸರಿಲೇರು ನೀಕೆವ್ವರು ಮತ್ತು ದ್ರೋಣ ಒಳ್ಳೆಯ ಹಿಟ್ ಎನಿಸಿಕೊಂಡಿವೆ.


Click it and Unblock the Notifications











