ಕನ್ನಡದ ಕುವರಿ ರಶ್ಮಿಕಾಗೆ ಟಾಲಿವುಡ್ ನಲ್ಲಿಂದು ಸಂಭ್ರಮದ ದಿನ

ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರ ತೆಲುಗು ಅಭಿಮಾನಿಗಳು ಇಂದು (ಏಪ್ರಿಲ್ 11) ಫುಲ್ ಖುಷಿಯಾಗಿದ್ದಾರೆ. ಕಾರಣ ರಶ್ಮಿಕಾ ಟಾಲಿವುಡ್ ಇಂಡಸ್ಟ್ರಿಗೆ ಪರಿಚಯವಾಗಿ ಎರಡು ವರ್ಷ ಆಯಿತು. ಈ ವಿಶೇಷ ದಿನವನ್ನ ಸಂಭ್ರಮಿಸುತ್ತಿದ್ದಾರೆ ಕೊಡುಗಿನ ಕುವರಿಯ ಟಾಲಿವುಡ್ ಅಭಿಮಾನಿಗಳು.

2016ರಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ, ಗಣೇಶ್ ಅವರ ಚಮಕ್ ಮತ್ತು ಪುನೀತ್ ಅವರ ಅಂಜನಿಪುತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದರು. ಈ ಮಧ್ಯೆ 2017 ಏಪ್ರಿಲ್ 11 ರಂದು ಚಲೋ ಚಿತ್ರದ ಮೂಲಕ ತೆಲುಗು ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟರು ಕಿರಿಕ್ ಚೆಲುವೆ.

ನಾಗಶೌರ್ಯ ನಾಯಕನಾಗಿದ್ದ ಈ ಚಿತ್ರದಲ್ಲಿ ರಶ್ಮಿಕಾ ಕಾಲೇಜ್ ಹುಡುಗಿ ಪಾತ್ರದಲ್ಲಿ ನಟಿಸಿದ್ದರು. ವೆಂಕಿ ಕುಡುಮುಲಾ ಈ ಚಿತ್ರವನ್ನ ನಿರ್ದೇಶನ ಮಾಡಿದ್ರು. ಕನ್ನಡದ ಹುಡುಗಿಗೆ ಭರ್ಜರಿ ಸ್ವಾಗತ ನೀಡಿದ ಟಾಲಿವುಡ್ ಮಂದಿ, ತೆಲುಗು ಹುಡುಗಿನೇ ಎನ್ನುವಷ್ಟು ಅಪ್ಪಿಕೊಂಡರು.

Rashmika mandanna 2 years completes in telugu

ಅದರ ಪರಿಣಾಮ ಚಲೋ ನಂತರ ಗೀತಾ ಗೋವಿಂದಂ, ದೇವದಾಸ್, ಡಿಯರ್ ಕಾಮ್ರೇಡ್, ಈಗ ಅಲ್ಲು ಅರ್ಜುನ್ ಹಾಗೂ ನಾನಿ ಜೊತೆನೂ ಸಿನಿಮಾ ಮಾಡುವಂತಾಗಿದೆ.

ಕನ್ನಡಕ್ಕಿಂತ ಹೆಚ್ಚು ತೆಲುಗಿನಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ಈ ಎರಡು ವರ್ಷದಲ್ಲಿ ಐದು ತೆಲುಗು ಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾಗೆ ತೆಲುಗಿನಲ್ಲಿ ಹೆಚ್ಚು ಕ್ರೇಜ್ ಇದೆ ಮತ್ತು ಅಭಿಮಾನಿ ಬಳಗವೂ ಹೊಂದಿದ್ದಾರೆ.

More from Filmibeat

English summary
The debut movie in Telugu for Rashmika mandanna was launched 2 years ago exactly on this day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X