ರಶ್ಮಿಕಾ ಮಂದಣ್ಣ ಹುಟ್ಟುವ ಎರಡು ದಿನ ಮುನ್ನ ಅಪ್ಪನಿಗೆ ಬಿದ್ದಿತ್ತೊಂದು ಕನಸು

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಮೊದಲೆಲ್ಲಾ ತಮ್ಮ ಸಿನಿಮಾಗಳು, ಗೆಳೆಯರ ಬಗ್ಗೆ ಪೋಸ್ಟ್ ಹಾಕುತ್ತಿದ್ದ ರಶ್ಮಿಕಾ ಇತ್ತೀಚೆಗೆ ಕುಟುಂಬದವರ ಬಗ್ಗೆಯೂ ಸಾಕಷ್ಟು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

Recommended Video

ಚಿರು ಸರ್ಜಾ ಜೊತೆ ಫೋಟೋದಲ್ಲಿ ಯಾವಾಗ್ಲೂ ಇರುತ್ತಿದ್ದ ಇವರು ಯಾರು ಗೊತ್ತಾ? | Suraj Sarja | Chiranjeevi Sarja

ನಟಿ ರಶ್ಮಿಕಾ ಮಂದಣ್ಣ ತಮ್ಮ ತಂದೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಂದೆಯ ಚಿತ್ರವನ್ನು ಹಾಕಿರುವ ರಶ್ಮಿಕಾ ಮಂದಣ್ಣ ಅಪ್ಪನ ಪರಿಚಯವನ್ನು ತಮ್ಮ ಅಭಿಮಾನಿಗಳಿಗೆ ಮಾಡಿಸಿದ್ದಾರೆ.

ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಳ್ಳುವ ಜೊತೆಗೆ ಅಪ್ಪ ಎಂ.ಎ.ಮಂದಣ್ಣ ಬಗ್ಗೆ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ತಂದೆಗೆ ಬಿದ್ದ ಕನಸು

ರಶ್ಮಿಕಾ ತಂದೆಗೆ ಬಿದ್ದ ಕನಸು

ರಶ್ಮಿಕಾ ಮಂದಣ್ಣ ಅವರ ಅಪ್ಪನಿಗೆ ಒಂದು ಕನಸು ಬಿತ್ತಂತೆ. ಕನಸಲ್ಲಿ ಉದ್ದ ಕೂದಲಿನ, ಅಗಲ ಕಣ್ಣಿನ ಹೆಣ್ಣು ಮಗುವೊಂದು ಅಪ್ಪನ ಹೊಟ್ಟೆಯ ಮೇಲೆ ಆಟವಾಡುತ್ತಿತ್ತಂತೆ. ಈ ಕನಸು ಬಿದ್ದ ಎರಡು ದಿನಕ್ಕೆ ರಶ್ಮಿಕಾ ಮಂದಣ್ಣ ಜನಿಸಿದರಂತೆ ಈ ಸುಂದರ ಕತೆಯನ್ನು ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾದಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪನನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ವರ್ಷ ಬೇಕಾಯಿತು

ಅಪ್ಪನನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ವರ್ಷ ಬೇಕಾಯಿತು

ಅಪ್ಪನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು ನನಗೆ ಎಂದಿರುವ ರಶ್ಮಿಕಾ, ಅಪ್ಪ ಕೆಲವು ಭಾರಿ ಶಿಸ್ತಿನಿಂದ ವರ್ತಿಸುತ್ತಾರೆ. ಅವರು ಭಾವುಕತನ ಪ್ರದರ್ಶಿಸುವುದಿಲ್ಲ, ಆದರೆ ಅವರು ಸದಾ ನಿಮ್ಮ ಬೆನ್ನೆಲುಬಾಗಿರುತ್ತಾರೆ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ರಶ್ಮಿಕಾ.

ನಾನೀಗ ಅಪ್ಪನ ಬ್ಯುಸಿನೆಸ್ ಪಾರ್ಟನರ್

ನಾನೀಗ ಅಪ್ಪನ ಬ್ಯುಸಿನೆಸ್ ಪಾರ್ಟನರ್

'ನಾನು ಚಿಕ್ಕವಳಾಗಿದ್ದಾಗ ಅಪ್ಪ ಸದಾ ಬ್ಯುಸಿನೆಸ್‌ನಲ್ಲಿ ಬ್ಯುಸಿಯಾಗಿರುತ್ತಿದ್ದರು, ನಂತರ ನಾನು ಶಿಕ್ಷಣಕ್ಕಾಗಿ ಹಾಸ್ಟೆಲ್‌ಗೆ ಸೇರಿಕೊಂಡೆ, ನಂತರ ಸಿನಿಮಾ, ಈಗ ನಾನು ಅಪ್ಪನ ಬ್ಯುಸಿನೆಸ್ ಪಾರ್ಟನರ್. ಇಷ್ಟೆಲ್ಲಾ ವರ್ಷಗಳಲ್ಲಿ ಅಪ್ಪ ನನ್ನ ಬೆನ್ನೆಲುಬಾಗಿದ್ದರು. ನಾನು ಅವರ ಬೆನ್ನೆಲುಬು ಎಂದಿದ್ದಾರೆ ರಶ್ಮಿಕಾ.

ವಿರಾಜಪೇಟೆ ನಿವಾಸದಲ್ಲಿ ಕುಟುಂಬದೊಂದಿಗೆ

ವಿರಾಜಪೇಟೆ ನಿವಾಸದಲ್ಲಿ ಕುಟುಂಬದೊಂದಿಗೆ

ಲಾಕ್‌ಡೌನ್ ಸಮಯವನ್ನು ರಶ್ಮಿಕಾ ಅವರು ತಮ್ಮ ವಿರಾಜಪೇಟೆ ನಿವಾಸದಲ್ಲಿಯೇ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ತೆಲಂಗಾಣದಲ್ಲೂ ಅವಕಾಶ ನೀಡಲಾಗಿದೆ. ಆದರೆ ಇನ್ನೂ ಯಾವುದೇ ಚಿತ್ರೀಕರಣಕ್ಕೆ ತೆರಳಿಲ್ಲ ರಶ್ಮಿಕಾ.

More from Filmibeat

English summary
Rashmika Mandanna posted emotional post about her father. She said it take years to understand my dad's love.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X