»   » ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ!

ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ!

Posted By:
Subscribe to Filmibeat Kannada
Rashmika Mandanna to act in Allu Arjun movie | Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ದೊಡ್ಡ ಹೆಸರು ಮಾಡಿದ್ದ ರಶ್ಮಿಕಾ ಕನ್ನಡದಲ್ಲಿ ಸ್ಟಾರ್ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದರು. ಅದೇ ರೀತಿ ಈಗ ಟಾಲಿವುಡ್ ಚಿತ್ರರಂಗದಲ್ಲಿಯೂ ರಶ್ಮಿಕಾ ಮಿಂಚುವುದಕ್ಕೆ ಸಜ್ಜಾಗಿದ್ದಾರೆ.

'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಸಿನಿಮಾಗೆ ನಾಯಕ ಸಿಕ್ಕಾಯ್ತು!

ರಶ್ಮಿಕಾ ಮಂದಣ್ಣ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌ ಜೊತೆ ಸಿನಿಮಾ ಮಾಡುವ ಸುದ್ದಿ ಈ ಹಿಂದೆ ಇತ್ತು. ಆದರೆ ಈಗ ಅಲ್ಲು ಅರ್ಜುನ್ ಅವರ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ನಟ ವಿಜಯ್‌ ದೇವರಕೊಂಡ ಜತೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ.

Rashmika Mandanna all set for Telugu debut with Vijay Devarakonda film

ಈ ಚಿತ್ರವನ್ನು ಪರಶುರಾಮ್‌ ಎಂಬುವರು ನಿರ್ದೇಶಿಸುತ್ತಿದ್ದು, ಅಲ್ಲು ಅರ್ಜುನ್ ಚಿತ್ರಕ್ಕೆ ಬಂಡವಾಳ ಹಾಕಿಲಿದ್ದಾರೆ. ಅಂದಹಾಗೆ, ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ರಶ್ಮಿಕಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಕನ್ಫರ್ಮ್ ಮಾಡಿದ್ದಾರೆ. ಜೊತೆಗೆ ಟ್ವೀಟ್ ಮಾಡುವ ಮೂಲಕ ಅಲ್ಲು ಅರ್ಜುನ್ ಮತ್ತು ಅವರ ತಂದೆ ಅಲ್ಲು ಅರವಿಂದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

English summary
Actress Rashmika Mandanna all set for Telugu debut with Vijay Devarakonda film. the movie is producing by Allu Arjun.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada