For Quick Alerts
  ALLOW NOTIFICATIONS  
  For Daily Alerts

  ಗೋವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಶ್ಮಿಕಾ ಮಂದಣ್ಣ

  |

  ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಟ್ರೋಲ್ ವಿಚಾರಕ್ಕೆ ಸದ್ದು ಸುದ್ದಿಯಲ್ಲಿದ್ದರು. ಆದರೀಗ ರಶ್ಮಿಕಾ ಕಡೆಯಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಈ ಬಾರಿಯ ಗೋವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಶ್ಮಿಕಾ ಭಾಗಿಯಾಗಿ ವಿಶೇಷ ಭಾಷಣ ಮಾಡಲಿದ್ದಾರಂತೆ.

  ಇದೇ ತಿಂಗಳು ಅಂದರೆ ನವೆಂಬರ್ 20 ರಿಂದ 28ರ ವರೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಇಲ್ಲಿ ಕನ್ನಡದ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ನಿತ್ಯಾ ಮೆನನ್ ಭಾಗಿಯಾಗಿ 'ಟ್ರೆಂಡ್ ಸೆಟ್ಟರ್ಸ್' ವಿಚಾರವಾಗಿ ಮಾತನಾಡಲಿದ್ದಾರೆ. ಅವರ ಜರ್ನಿ ಮತ್ತು ಸಿನಿಮಾ ರಂಗದಲ್ಲಿ ಬೆಳೆದು ಬಂದ ರೀತಿಯ ಬಗ್ಗೆ ಎಲ್ಲರ ಜೊತೆ ಹಂಚಿಕೊಳ್ಳಲಿದ್ದಾರೆ.

  ಕಾರ್ತಿಕ್ ಗೌಡ ಹೇಳಿದ್ದೇ ಒಂದು, ಜನ ಕೇಳಿದ್ದೇ ಮತ್ತೊಂದುಕಾರ್ತಿಕ್ ಗೌಡ ಹೇಳಿದ್ದೇ ಒಂದು, ಜನ ಕೇಳಿದ್ದೇ ಮತ್ತೊಂದು

  ರಶ್ಮಿಕಾ ಮತ್ತು ನಿತ್ಯಾ ಮೆನನ್ ಜೊತೆಗೆ ರಾಕುಲ್ ಪ್ರಿತ್ ಸಿಂಗ್ ಮತ್ತು ವಿಜಯ್ ದೇವರಕೊಂಡ ಸಹ ಭಾಗಿಯಾಗಲಿದ್ದಾರೆ. ಈ ನಾಲ್ಕು ನಟರು ದಕ್ಷಿಣ ಭಾರತದ ಯುವ ಜನತೆಯನ್ನು ಪ್ರತಿನಿಧಿಸಲಿದ್ದಾರೆ. ನವೆಂಬರ್ 28ರಂದು 'ಟ್ರೆಂಡ್ ಸೆಟ್ಟರ್ಸ್' ವಿಚಾರವಾಗಿ ಇವರು ಮಾತನಾಡಲಿದ್ದಾರೆ.

  ಇನ್ನು ನವೆಂಬರ್ 28ಕ್ಕೆ ಗೋವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ ಬೀಳಲಿದೆ. ಹಾಗಾಗಿ ಈ ನಾಲ್ಕು ಜನ ಕಲಾವಿದರು ಕ್ಲೋಸಿಂಗ್ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

  ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಗೋವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ 20ರಂದು ಉದ್ಘಾಟನೆಯಾಗಲಿದೆ. ಉದ್ಘಾಟನೆ ಸಮಾರಂಭದಲ್ಲಿ ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಭಾಗಿಯಾಗಲಿದ್ದಾರೆ.

  English summary
  Kannada actress Rashmika Mandanna and Nithya Menenwill attend Goa International Film Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X