ವರ್ಷದ ಸಂಭ್ರಮಕ್ಕೆ ಸಾನ್ವಿಗೆ ಬಂತು ಕರ್ಣನಿಂದ ಪ್ರೇಮಪತ್ರ
ಕರ್ಣ-ಸಾನ್ವಿ ತೆರೆ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ಜೋಡಿಯಾಗಲೂ ಅಣಿ ಆಗುತ್ತಿರುವವರು. ನಾವು ಹೇಳುತ್ತಿರುವುದು ನಟ ರಕ್ಷಿತ್ ಶೆಟ್ಟಿ ಹಾಗೂ ರಷ್ಮಿಕಾ ಮಂದಣ್ಣ ಅವರ ಬಗ್ಗೆ. ಪ್ರೇಮಿಗಳಾಗಿದ್ದ ಇವರಿಬ್ಬರು ಅಧಿಕೃತವಾಗಿ ಮದುವೆ ಆಗುತ್ತಿದ್ದಾರೆ ಎನ್ನುವುದನ್ನು ಎಲ್ಲರಿಗೂ ತಿಳಿಸಿ ಇಂದಿಗೆ ಒಂದು ವರ್ಷ ಕಳೆದಿದೆ.
ರಕ್ಷಿತ್ ಶೆಟ್ಟಿ ಹಾಗೂ ರಷ್ಮಿಕಾ ಮಂದಣ್ಣ ನಿಶ್ಚಿತಾರ್ಥ ಆಗಿ ಇಂದಿಗೆ ಒಂದು ವರ್ಷ. ಇದೇ ಸಂಭ್ರಮದಲ್ಲಿ ನಟ ರಕ್ಷಿತ್ ತನ್ನ ಪ್ರೇಯಸಿಗೆ ಸಣ್ಣದೊಂದು ಪ್ರೇಮ ಪತ್ರ ಬರೆದಿದ್ದಾರೆ. ಆನ್ ಸ್ಕ್ರೀನ್ ನಲ್ಲಿ ಇಂಪ್ರೆಸ್ ಮಾಡಿದ್ದ ಈ ಕ್ಯೂಟ್ ಜೋಡಿ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೂ ಕಾಲಿಡಲಿದೆ.
ನಿಶ್ವಿತಾರ್ಥದ ಮೊದಲ ವಾರ್ಷಿಕೋತ್ಸವಕ್ಕೆ ರಕ್ಷಿತ್ ಬರೆದ ಪತ್ರದಲ್ಲಿದೆ ಏನಿದೆ? ಎದೆಯಾಳದಲ್ಲಿ ಬಚ್ಚಿಟ್ಟ ತನ್ನ ಪ್ರೀತಿಯನ್ನು ಕರ್ಣ ಹೇಳಿಕೊಂಡ ಬಗೆ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ನಿಶ್ವಿತಾರ್ಥದ ವಾರ್ಷಿಕೋತ್ಸವ
ನಟ ರಕ್ಷಿತ್ ಶೆಟ್ಟಿ ಹಾಗೂ ರಷ್ಮಿಕಾ ಮಂದಣ್ಣ ಇಬ್ಬರಿಗೂ ನಿಶ್ಚಿತಾರ್ಥವಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಜುಲೈ 3 ರಂದು ಎರಡು ಮನೆಯವರು ಸಮ್ಮುಖದಲ್ಲಿ ಅಧಿಕೃತವಾಗಿ ಜೋಡಿಗಳಾಗಿ ಉಂಗುರ ಬದಲಾಯಿಸಿಕೊಂಡಿದ್ದರು.

ಪ್ರೀತಿಯ ಪತ್ರ ಬರೆದ ರಕ್ಷಿತ್ ಶೆಟ್ಟಿ
ನಿಶ್ಚಿತಾರ್ಥವಾಗಿ ಒಂದು ವರ್ಷ ಕಳೆದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ಸಣ್ಣದೊಂದು ಪತ್ರ ಬರೆದಿದ್ದಾರೆ. "ಆಗಲೇ ಒಂದು ವರ್ಷ ಕಳೆದು ಹೋಯ್ತಾ? ನನಗೆ ಇವೆಲ್ಲವೂ ನಿನ್ನೆಯಷ್ಟೇ ಆದ ರೀತಿ ಎನ್ನಿಸುತ್ತಿದೆ. ನಾನು ಇನ್ನು ನಿನ್ನ ಸುಂದರವಾದ ಔಟ್ ಫಿಟ್ ಗೆ ಮ್ಯಾಚ್ ಆಗುವಂತ ಟೈ ಹುಡುಕುವ ಪ್ರಯತ್ನದಲ್ಲೇ ಇದ್ದೇನೆ ಎಂದೆನಿಸುತ್ತಿದೆ. ಆದರೆ ಇಂದು ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋ ನೋಡುತ್ತಿದ್ದೇವೆ".
ನೀನು ಕೊಟ್ಟ ಪ್ರೀತಿ ಅಪಾರ
'ನೀನು ಕೊಟ್ಟ ಪ್ರೀತಿ ಅಪಾರ. ನಿನ್ನ ಜೊತೆ ಕಳೆದ ಪ್ರತಿ ಕ್ಷಣದಲ್ಲಿಯೂ ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ನಿನ್ನಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ನೀನು ನನ್ನ ಜೀವನದಲ್ಲಿ ಸಿಕ್ಕಿರುವ ಅತ್ಯಮೂಲ್ಯವಾದ ವಸ್ತು. ಪ್ರತಿ ದಿನ ಪ್ರತಿ ಕ್ಷಣ ನಿನ್ನನ್ನು ಪ್ರೀತಿ ಮಾಡುತ್ತೇನೆ'. ಎಂದು ರಕ್ಷಿತ್ ಬರೆದಿದ್ದಾರೆ.

ಮದುವೆಗಾಗಿ ಕಾದಿರುವ ಅಭಿಮಾನಿಗಳು
ನಿಶ್ಚಿತಾರ್ಥ ಮಾಡಿಕೊಂಡು ಸಂಭ್ರಮದಲ್ಲಿರುವ ರಕ್ಷಿತ್ ಹಾಗೂ ರಷ್ಮಿಕಾ ಮಂದಣ್ಣ ಸದ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇತ್ತ ಅಭಿಮಾನಿಗಳು ಇಬ್ಬರ ಮದುವೆ ಯಾವಾಗ ಎನ್ನುವ ಕುತೂಹಲದಲ್ಲಿದ್ದಾರೆ.


Click it and Unblock the Notifications











