ಧ್ರುವ ಸರ್ಜಾಗೆ ಪೊಗರಿಳಿಸಲಿದ್ದಾರೆ ಕನ್ನಡದ ಇಬ್ಬರು ನಾಯಕಿಯರು

By Pavithra

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ನಾಲ್ಕನೇ ಸಿನಿಮಾ 'ಪೊಗರು' ಚಿತ್ರಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 14 ರಂದು ರಾಜಾಜಿನಗರದ ಗಣಪತಿ ದೇವಸ್ಠಾನದಲ್ಲಿ ಚಿತ್ರದ ಮಹೂರ್ತ ನೆರವೇರಲಿದೆ. ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಲು ಆಗಮಿಸಲಿದ್ದಾರೆ.

ನಂದಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾವನ್ನ ಗಂಗಾಧರ್ ನಿರ್ಮಾಣ ಮಾಡುತ್ತಿದ್ದಾರೆ. ಅಂದ್ಹಾಗೆ, 'ಪೊಗರು' ಸಿನಿಮಾದಲ್ಲಿ ಧ್ರುವ ಜೊತೆಯಲ್ಲಿ ಡ್ಯುಯೆಟ್ ಹಾಡಲು ಕನ್ನಡದ ಇಬ್ಬರು ನಾಯಕಿಯರು ಆಯ್ಕೆ ಆಗಿದ್ದಾರೆ.

Rashmika Mandanna and Shanvi will be heroines for pogaru

ಇಷ್ಟು ದಿನಗಳ ಕಾಲ ಧ್ರುವ ಸರ್ಜಾ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಅಥವಾ ಲತಾ ಹೆಗಡೆ ಇಬ್ಬರಲ್ಲಿ ಒಬ್ಬರು ಆಯ್ಕೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದ್ರೀಗ, ನಿರ್ದೇಶಕ ನಂದಕಿಶೋರ್ ಸಿನಿಮಾಗೆ ಇಬ್ಬರು ನಾಯಕಿಯರನ್ನ ಬುಕ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರು 'ಪೊಗರು' ಚಿತ್ರಕ್ಕೆ ಆಯ್ಕೆ ಆಗಿದ್ದು ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡುವುದಷ್ಟೇ ಬಾಕಿ ಇದೆ. ನಾಳೆ ಮುಹೂರ್ತ ಮುಗಿಸಿದ ನಂತರ ನಂದಕಿಶೋರ್ ಮತ್ತು ತಂಡ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಶುರು ಮಾಡಲಿದೆ.

Rashmika Mandanna and Shanvi will be heroines for pogaru

ಸಾಮಾನ್ಯವಾಗಿ ನಂದಕಿಶೋರ್ ಡೈರೆಕ್ಟ್ ಮಾಡುವ ಚಿತ್ರಗಳಲ್ಲಿ ಅದ್ದೂರಿ ತಾರಾಗಣವಿರುತ್ತೆ. ಅದೇ ರೀತಿಯಲ್ಲಿ ಪೊಗರು ಸಿನಿಮಾದಲ್ಲಿಯೂ ಜಗಪತಿ ಬಾಬು, ಪ್ರಕಾಶ್ ರಾಜ್, ಸಾಧುಕೋಕಿಲ ಮತ್ತು ಚಿಕ್ಕಣ್ಣ ಅಭಿನಯಿಸಲಿದ್ದಾರೆ. ಒಟ್ಟಾರೆ ಧ್ರುವ ಅಭಿನಯದ ಈ ಹಿಂದಿನ ಮೂರು ಚಿತ್ರಗಳಲ್ಲಿ ಕನ್ನಡದ ನಾಯಕಿಯರೇ ಹೀರೋಯಿನ್ ಆಗಿ ಮಿಂಚಿದ್ರು. ಈಗಲೂ ಕೂಡ ರಶ್ಮಿಕಾ ಹಾಗೂ ಶಾನ್ವಿ ಅವರನ್ನ ಆಯ್ಕೆ ಮಾಡಿರೋದು ಕನ್ನಡ ಸಿನಿಮಾ ಅಭಿಮಾನಿಗಳಿಗೆ ಖುಷಿ ತಂದಿದೆ.

More from Filmibeat

English summary
The heroine's choice for the fourth cinema of dhruva sarja. In the film of Poogu Rashmika Mandanna and Shanvi Srivastava will be heroines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X