ತೆಲುಗು ನಟ ವಿಜಯ್ ದೇವರಕೊಂಡ ಜೊತೆ 'ಕಿರಿಕ್' ಮಾಡಿಕೊಂಡ ರಶ್ಮಿಕಾ.!
Recommended Video

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳ ಜೊತೆ ತೆಲುಗು ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ತೆಲುಗಿನ 'ಚಲೋ' ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಹೆಜ್ಜೆಯಿಟ್ಟ ರಶ್ಮಿಕಾಗೆ ಒಳ್ಳೆಯ ಒಪನಿಂಗ್ ಸಿಕ್ಕಿತ್ತು.
ಆ ಚಿತ್ರದ ಯಶಸ್ಸಿನ ಜೊತೆಯಲ್ಲಿ ಮತ್ತೆರೆಡು ಪ್ರಾಜೆಕ್ಟ್ ಗಳಿಗೂ ರಶ್ಮಿಕಾ ಆಯ್ಕೆಯಾಗಿದ್ದರು. ಇದರಲ್ಲಿ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ ದೇವರಕೊಂಡ ಅಭಿನಯದ 'ಗೀತಾ ಗೋವಿಂದಂ' ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ.
ಇಷ್ಟು ದಿನ ವಿಜಯ ದೇವರಕೊಂಡ ಜೊತೆಯಲ್ಲಿ ತುಂಬಾ ಆತ್ಮೀಯವಾಗಿದ್ದ ರಶ್ಮಿಕಾ ಮಂದಣ್ಣ ಈಗ ಅವರ ಜೊತೆ 'ಕಿರಿಕ್' ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು, ದಕ್ಷಿಣ ಭಾರತದ 65ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ. ಅಷ್ಟಕ್ಕೂ, ರಶ್ಮಿಕಾ ಮತ್ತು ವಿಜಯ ದೇವರಕೊಂಡ ನಡುವಿನ ಈ 'ಕಿರಿಕ್' ಗೆ ಏನು.? ಕಾರಣವೇನು.? ಮುಂದೆ ಓದಿ.....

ಸೌತ್ ಫಿಲ್ಮ್ ಫೇರ್ ಪಡೆದ ನಟ
ತೆಲುಗು ನಟ ವಿಜಯ ದೇವರಕೊಂಡ ಕಳೆದ ವರ್ಷ ಬಿಡುಗಡೆಯಾಗಿದ್ದ 'ಅರ್ಜುನ್ ರೆಡ್ಡಿ' ಚಿತ್ರದ ಅಭಿನಯಕ್ಕಾಗಿ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಅವಾರ್ಡ್ ಪಡೆದುಕೊಂಡರು. ಈ ಸಂತಸದ ವಿಚಾರಕ್ಕೆ ರಶ್ಮಿಕಾ, ವಿಜಯ ದೇವರಕೊಂಡಗೆ ಶುಭಕೋರಿದ್ರು. ಈ ಟ್ವೀಟ್ ಬೇಸರಕ್ಕೆ ಕಾರಣವಾಯ್ತ.?
ರಶ್ಮಿಕಾ ಕಾಲೆಳೆದ ನಟ
''ಫಿಲ್ ಫೇರ್ ಬೆಸ್ಟ್ ಆಕ್ಟರ್ ಅಂತೆ ಹೌದಾ...ಕಂಗ್ರಾಟ್ಸ್'' ಎಂದು ನಟಿ ರಶ್ಮಿಕಾ ಮಂದಣ್ಣ ವಿಜಯ ದೇವರಕೊಂಡಗೆ ಶುಭಕೋರಿದ್ರು. ಇದಕ್ಕೆ ಉತ್ತರಿಸಿದ್ದ ದೇವರಕೊಂಡ ''ಗೀತಾ ಮೇಡಂ, ನಿಮ್ಮ ಜೊತೆ ಸಮಯ ಕಳೆದಿದ್ದೇ ನನಗೆ ದೊಡ್ಡ ಅವಾರ್ಡ್, ಇದೆಲ್ಲ ಬರುತ್ತೆ, ಹೋಗುತ್ತೆ ಬಿಡಿ'' ಎಂದು ಪ್ರತಿಕ್ರಿಯಿಸಿದ್ದರು.
ದೇವರಕೊಂಡಗೆ ಕಾಲೆಳೆದ ರಶ್ಮಿಕಾ
''ನೋಡು ಗೋವಿಂದ, ಈ ಓವರ್ ಆಕ್ಟಿಂಗ್ ನ್ನ ಕಮ್ಮಿ ಮಾಡಿಕೊ ಅಂದಿದ್ದು. ಈ ಅವಾರ್ಡ್ ಪ್ರಭಾಸ್ ಗೋ ಅಥವಾ ತಾರಕ್ ಅವರಿಗೆ ಬಂದಿದ್ದರೇ ಈ ಜಗಳ ಇರ್ತಿರಲಿಲ್ಲ'' ಎಂದು ಮತ್ತೆ ದೇವರಕೊಂಡ ಅವರಿಗೆ ತಿರುಗೇಟು ನೀಡಿದರು.

ಮತ್ತೆ ಮತ್ತೆ ಟಾರ್ಗೆಟ್ ಮಾಡಿದ ನಟ
''ಈ ಅವಾರ್ಡ್ ಏನಿದೆ ಮೇಡಂ, ನಿಮ್ಮಂತವರು ನನ್ನ ಪ್ರೀತಿಸಿದ್ದು ಸಾಕು..ಗೀತಾ ಮೇಡಂ'' ಎಂದು ವಿಜಯ ದೇವರಕೊಂಡ ರಶ್ಮಿಕಾಗೆ ಮತ್ತೆ ಟ್ವೀಟ್ ಮಾಡಿದರು. ಇದಕ್ಕೆ ಮತ್ತೆ ಟ್ವೀಟ್ ಮಾಡಿದ ರಶ್ಮಿಕಾ ''ನಮ್ಮಂತವರಾ.? 'ಅವರು' ಯಾಕೆ.? ಆ ಬಹುವಚನ ಯಾಕೆ.? ನಿನ್ನ ಬಗ್ಗೆ ಗೊತ್ತು ಬಿಡು, ಒಬ್ಬರು ಸಾಕಾಗಲ್ಲ, ಯಾರನ್ನ ಬಿಡಲ್ಲ ಅಲ್ವಾ.!'' ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ನಟ ''ಮೇಡಂ ನನ್ನ ಉದ್ದೇಶ ಇದಲ್ಲ, 23ನೇ ತಾರೀಖು ನನ್ನನ್ನು ಭೇಟಿ ಮಾಡಿ, ವಿಷ್ಯ ಹೇಳುತ್ತೇನೆ'' ಎಂದಿದ್ದರು.

ಪೋಸ್ಟರ್ ಗೆ ಕಾಮೆಂಟ್ ಹಾಕಿದ ದೇವರಕೊಂಡ
ಈ ನಡುವೆ ರಶ್ಮಿಕಾ ಹಾಗೂ ವಿಜಯದೇವರಕೊಂಡ ಅಭಿನಯದ 'ಗೀತಾಗೋವಿಂದಂ' ಚಿತ್ರದ ಪೊಸ್ಟರ್ ಬಿಡುಗಡೆಯಾಗಿದೆ. ಇದರಲ್ಲಿ ದೇವರಕೊಂಡ ಅವರು ರಶ್ಮಿಕಾ ಅವರನ್ನ ಎತ್ತುಕೊಂಡಿರುವ ಫೋಸ್ ಇದೆ. ಈ ಪೋಸ್ಟರ್ ಹಂಚಿಕೊಂಡಿರುವ ವಿಜಯ್ ''ನಿಮ್ಮ ಬಾರದಿಂದ ನನ್ನ ಸೊಂಟ ನೋವುತ್ತಿದೆ'' ಎಂದಿದ್ದಾರೆ. ಇದನ್ನ ಪ್ರಶ್ನಿಸಿದ ರಶ್ಮಿಕಾ ''ನನ್ನ ತೂಕದಿಂದ ನಿನ್ನ ಕಣ್ಣು, ಸೊಂಟ, ಆರೋಗ್ಯ ಕೆಟ್ಟಿದೆ ಅಂತಿದ್ದೀಯಾ.? ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ದೇವರಕೊಂಡ ''ನನಗೆ ಒಂದೆರೆಡು ದಿನ ಸಮಯ ಕೊಡಿ, ನನ್ನ ಪರಿಸ್ಥಿತಿ ಎಲ್ಲರಿಗೂ ಗೊತ್ತಾಗುವ ಹಾಗೆ ಮಾಡುತ್ತೇನೆ'' ಎಂದು ಕೇಳಿಕೊಂಡಿದ್ದಾರೆ.

ಇದೆಲ್ಲ ತಮಾಷೆಗಾಗಿ....
ರಶ್ಮಿಕಾ ಮತ್ತು ವಿಜಯ ದೇವರಕೊಂಡ ನಡುವಿನ ಇಷ್ಟೆಲ್ಲಾ ಸಂಭಾಷಣೆ ನೋಡಿದ್ರೆ, ಇವರಿಬ್ಬರ ಮಧ್ಯೆ ಜಗಳ ಮತ್ತು ಮುನಿಸ ಉಂಟಾಗಿರಬಹುದು ಎಂದು ಊಹಿಸಬಹುದು. ಆದ್ರೆ, ಇದು ಗಂಭೀರವಲ್ಲ, ಪಕ್ಕಾ ಪ್ರೀ-ಪ್ಲ್ಯಾನ್ ಎಂಬುದು ಮೇಲ್ನೊಟಕ್ಕೆ ಗೊತ್ತಾಗುತ್ತಿದೆ. ಇಬ್ಬರು ಸೇರಿ ''ಗೀತಾ ಗೋವಿಂದಂ' ಚಿತ್ರದ ಪ್ರಚಾರಕ್ಕಾಗಿ ಹೀಗೆ ಮಾಡ್ತಿದ್ದಾರೆ. ಸುಮ್ ಸುಮ್ಮನೇ ಟ್ವಿಟ್ಟರ್ ನಲ್ಲಿ ಚರ್ಚೆ ಮಾಡಿದ್ದಾರೆ. ಎಲ್ಲರ ಗಮನ ಸೆಳೆಯುವ ಉದ್ದೇಶದಿಂದ ಟಿಬೇಟ್ ಮಾಡಿದ್ದಾರೆ.


Click it and Unblock the Notifications











