ಜುಲೈ 11ಕ್ಕೆ ಬಿಗ್ ಸರ್ಪ್ರೈಸ್ ಕೊಡಲಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ
ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಇಬ್ಬರು ಬಿಗ್ ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ. ಇದೆ ತಿಂಗಳು 11ಕ್ಕೆ ಅದರಲ್ಲು ವಿಶೇಷವಾಗಿ ರಾತ್ರಿ 11 ಗಂಟೆ 11 ನಿಮಿಷಕ್ಕೆ ಈ ಸ್ಟಾರ್ ಜೋಡಿ ಕಡೆಯಿಂದ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಒಂದು ಕಾದಿದೆ. ಇಬ್ಬರು ಒಟ್ಟಿಗೆ ಸೇರಿ ಗಿಫ್ಟ್ ನೀಡುತ್ತಿದ್ದಾರೆ ಅಂದ್ರೆ ಏನಿರಬಹುದು ಎನ್ನುವ ಕುತೂಹಲ ಹೆಚ್ಚಾಗುತ್ತಿದಿಯಾ.
ಹೆಚ್ಚು ತಲೆಕೆಸಿಕೊಳ್ಳಬೇಡಿ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಜೋಡಿ ಗಿಫ್ಟ್ ಕೊಡುತ್ತಿದೆ ಅಂದ್ರೆ ಅದೂ 'ಡಿಯರ್ ಕಾಮ್ರೇಡ್' ಚಿತ್ರದ ಟ್ರೈಲರ್. ಹೌದು, ರಶ್ಮಿಕಾ ಮತ್ತು ವಿಜಯ್ ಅಭಿನಯದ ಬಹು ನಿರೀಕ್ಷೆಯ 'ಡಿಯರ್ ಕಾಮ್ರೆಡ್' ಚಿತ್ರದ ಟ್ರೈಲರ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ.
ಇದೇ ತಿಂಗಳು 11ಕ್ಕೆ ರಾತ್ರಿ 11 ಗಂಟೆ 11 ನಿಮಿಷಕ್ಕೆ ಬಹು ನಿರೀಕ್ಷೆಯ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ವಿಶೇಷ ಅಂದ್ರೆ ತೆಲುಗು ಮಾತ್ರವಲ್ಲದೆ ಐದು ಭಾಷೆಯಲ್ಲಿ 'ಡಿಯರ್ ಕಾಮ್ರೇಡ್' ಟ್ರೈಲರ್ ತೆರೆಗೆ ಬರುತ್ತಿದೆ. ಈಗಾಗಲೆ ಟೀಸರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ 'ಡಿಯರ್ ಕಾಮ್ರೇಡ್' ಟ್ರೈಲರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಈಗಾಗಲೆ ರಿಲೀಸ್ ಆಗಿರುವ ಪುಟ್ಟ ಟೀಸರ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಲಿಪ್ ಲಾಕ್ ದೃಶ್ಯದ ಮೂಲಕ ಭಾರಿ ಚಿತ್ರಾಭಿಮಾನಿಗಳ ಗಮನ ಸೆಳೆದಿದ್ದ 'ಡಿಯರ್ ಕಾಮ್ರೇಡ್' ಟ್ರೈಲರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಪುಟ್ಟ ಟೀಸರ್ ನಲ್ಲಿಯೆ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ಇಬ್ಬರು ಟ್ರೈಲರ್ ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಜುಲೈ 11ಕ್ಕೆ ಗೊತ್ತಾಗಲಿದೆ.


Click it and Unblock the Notifications











