For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳನ್ನ ಬೈದ ವ್ಯಕ್ತಿ ವಿರುದ್ಧ ರಶ್ಮಿಕಾ ಮಂದಣ್ಣ ಸಿಡಿಮಿಡಿ

  |

  'ಕಿರಿಕ್ ಪಾರ್ಟಿ' ಚಿತ್ರದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ ನಟಿ ರಶ್ಮಿಕಾ ಮಂದಣ್ಣ. ಮೊದಲ ಸಕ್ಸಸ್ ಹಿಂದೆಯೇ ಪುನೀತ್ ರಾಜ್ ಕುಮಾರ್, ಗಣೇಶ್, ಈಗ ದರ್ಶನ್ ಜೊತೆ ನಟಿಸುವ ಮೂಲಕ ತನ್ನ ಅಭಿಮಾನಿ ಬಳಗವನ್ನ ಹೆಚ್ಚಿಸಿಕೊಂಡಿದ್ದಾರೆ.

  ಈ ನಡುವೆ ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡ ಕಿರಿಕ್ ಚೆಲುವೆ ಸೌತ್ ಇಂಡಿಯಾದ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ರಶ್ಮಿಕಾ ಸ್ಮೈಲ್, ರಶ್ಮಿಕಾ ನಟನೆ, ರಶ್ಮಿಕಾ ಮುದ್ದಾದ ಮಾತುಗಳಿಗೆ ಫ್ಯಾನ್ಸ್ ಇದ್ದಾರೆ. ಇಷ್ಟೆಲ್ಲಾ ಅಭಿಮಾನವನ್ನ ಸಂಪಾದಿಸಿರುವ ನಟಿ, ತಮ್ಮ ಅಭಿಮಾನಿಗಳ ಬಗ್ಗೆ ಯಾರಾದರೂ ಏನಾದರೂ ಅಂದ್ರೆ ಸುಮ್ಮನಿರ್ತಾರಾ?

  ತೆಲುಗು ನಂತರ ಈಗ ತಮಿಳು ಸೂಪರ್ ಸ್ಟಾರ್ ಜೊತೆ ರಶ್ಮಿಕಾ.!

  ಈಗೊಂದು ಘಟನೆ ನಡೆದಿದೆ. ರಶ್ಮಿಕಾ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್ ಗೆ ಒಬ್ಬ ವ್ಯಕ್ತಿ ಕಾಲೆಳೆದು ಕಾಮೆಂಟ್ ಮಾಡಿದ್ದಾರೆ. ಇದನ್ನ ನೋಡಿದ ರಶ್ಮಿಕಾ, ತಮ್ಮ ಅಭಿಮಾನಿಗಳ ಪರವಾಗಿ ನಿಂತು ಆ ವ್ಯಕ್ತಿಗೆ ಮಂಗಳಾರತಿ ಮಾಡಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಫ್ಯಾನ್ಸ್ ಹಾಕಿದ್ದ ಪೋಸ್ಟ್ ಏನು? ಮುಂದೆ ಓದಿ.....

  ಕ್ವೀನ್ ಆಫ್ ಯೂಟ್ಯೂಬ್

  ಕ್ವೀನ್ ಆಫ್ ಯೂಟ್ಯೂಬ್

  ರಶ್ಮಿಕಾ ಮಂದಣ್ಣ ಅವರು ಎರಡು ಕನ್ನಡ ಹಾಡುಗಳು 50 ಮಿಲಿಯನ್ ಕಂಡಿದೆ. ಕನ್ನಡ ನಟಿಯೊಬ್ಬರ ಎರಡು ಹಾಡು 50 ಮಿಲಿಯನ್ ವೀಕ್ಷಣೆ ಕಂಡಿರುವ ಹೆಗ್ಗಳಿಕೆಗೆ ರಶ್ಮಿಕಾ ಪಾತ್ರವಾಗಿದ್ದಾರೆ. ಜೊತೆಗೆ ರಶ್ಮಿಕಾ ಅವರ ಎರಡು ತೆಲುಗು ಹಾಡು 100 ಮಿಲಿಯನ್ ಕಂಡಿದೆ. ಹಾಗಾಗಿ, ರಶ್ಮಿಕಾ ಯೂಟ್ಯೂಬ್ ನ ರಾಣಿ ಎಂದು ಪೋಸ್ಟ್ ಮಾಡಿದ್ದರು.

  'ಪೊಗರು' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ.?

  ಕಾಲೆಳೆದ ಆ ವ್ಯಕ್ತಿ

  ಕಾಲೆಳೆದ ಆ ವ್ಯಕ್ತಿ

  ರಶ್ಮಿಕಾ ಮಂದಣ್ಣ ಕರ್ನಾಟಕ ಫ್ಯಾನ್ಸ್ ಕ್ಲಬ್ ಹಾಕಿದ್ದ ಈ ಪೋಸ್ಟ್ ಗೆ ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದು, ''ಹಲೋ ಬಾಸ್, ಆಕೆ ನಿಮ್ಮ ಫ್ಯಾನ್ಸ್ ಪೇಜ್ ಗೆ ಮಾತ್ರ ಕ್ವೀನ್, ಹೊರಗಡೆ ಯಾರೂ ಕೇರ್ ಮಾಡಲ್ಲ. ಯೂಟ್ಯೂಬ್ ಅವರೇ ಇದನ್ನ ನೋಡಿದ್ರೆ ನಗ್ತಾರೆ, ಹೋಗಿ ಏನಾದರೂ ಕೆಲಸ ಮಾಡಿ, ಯಾಕೆ ಸುಮ್ಮನೆ ಟೈಂ ವೇಸ್ಟ್ ಮಾಡ್ತಿದ್ದೀರಾ'' ಎಂದಿದ್ದಾನೆ.

  ರಶ್ಮಿಕಾ ಬಗ್ಗೆ ತೆಲುಗು ದೇಶದಿಂದ ಬಂತು ಎರಡು ಸುದ್ದಿ.! ನಿಜಾನಾ, ಸುಳ್ಳಾ..?

  ಎಲ್ಲದಕ್ಕೂ ಲಿಮಿಟ್ ಇದೆ

  ಎಲ್ಲದಕ್ಕೂ ಲಿಮಿಟ್ ಇದೆ

  ಈ ಮೆಸೆಜ್ ನೋಡಿ ಕಾಮೆಂಟ್ ಮಾಡಿದ ರಶ್ಮಿಕಾ ''ಎಲ್ಲದಕ್ಕೂ ಲಿಮಿಟ್ ಇದೆ. ಕಾಮೆಂಟ್ ಮಾಡುವುದು ನಿಮ್ಮ ಹಕ್ಕು. ನನ್ನ ಮೇಲೆ ಕಾಮೆಂಟ್ ಮಾಡಿ, ಅಭಿಮಾನಿಗಳ ಬಗ್ಗೆ ಕಾಮೆಂಟ್ ಮಾಡೋ ಹಕ್ಕು ನಿಮಗಿಲ್ಲ. ಇದು ಕೇವಲ ಆ ವ್ಯಕ್ತಿಗೆ ಮಾತ್ರವಲ್ಲ, ನನ್ನ ಅಭಿಮಾನಿಗಳ ಬಗ್ಗೆ ಯಾರಾದರೂ ನೆಗಿಟೀವ್ ಕಾಮೆಂಟ್ ಮಾಡೋರಿಗೆ ಇದು ಅನ್ವಯ'' ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

  ರಕ್ಷಿತ್ ಶೆಟ್ಟಿಯ ಈ ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ರಶ್ಮಿಕಾ ಮಂದಣ್ಣ.!

  ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ

  ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ

  ನಮ್ಮ ಕೆಲಸ ನಿಮಗೆ ಇಷ್ಟವಾಗಿಲ್ಲ ಅಂದ್ರೆ ನಿಮ್ಮ ಪ್ರತಿಕ್ರಿಯೆಯೂ ನಮಗೆ ಬೇಕಾಗಿಲ್ಲ. ಸುಮ್ಮನೇ ನಿಮ್ಮ ಮತ್ತು ನಮ್ಮ ಸಮಯವನ್ನ ವ್ಯರ್ಥ ಮಾಡಬೇಡಿ'' ಎಂದು ಆ ವ್ಯಕ್ತಿಯ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.

  ಕೆಜಿಎಫ್ ನೋಡಿ ಸೀಟಿನಿಂದ ಜಂಪ್ ಮಾಡಿದ್ರಂತೆ ರಶ್ಮಿಕಾ.!

  100, 50 ಮಿಲಿಯನ್ ಕಂಡ ಹಾಡುಗಳು

  100, 50 ಮಿಲಿಯನ್ ಕಂಡ ಹಾಡುಗಳು

  ಇನ್ನು ರಶ್ಮಿಕಾ ಅವರ ಫ್ಯಾನ್ಸ್ ಕ್ಲಬ್ ಪೋಸ್ಟ್ ಮಾಡಿದಾಗೆ ರಶ್ಮಿಕಾ ಅವರ ಹಾಡುಗಳು 50 ಮತ್ತು 100 ಮಿಲಿಯನ್ ಕ್ರಾಸ್ ಆಗಿದ್ಯಾ ಎಂದು ಚೆಕ್ ಮಾಡಿದಾಗ ಅದು ನಿಜವಾಗಿತ್ತು. ಕಿರಿಕ್ ಪಾರ್ಟಿ ಚಿತ್ರದ 'ಬೆಳಗೆದ್ದು' ಹಾಡು ಹಾಗೂ ಅಂಜನಿಪುತ್ರ ಚಿತ್ರದ 'ಚೆಂದ ಚೆಂದ ನನ್ನ ಹೆಂಡ್ತಿ' ಹಾಡುಗಳು 50 ಮಿಲಿಯನ್ ದಾಟಿದೆ. ತೆಲುಗಿನ ಗೀತಾ ಗೋವಿಂದಂ ಚಿತ್ರದ 'ಇಂಕೇಮ್ ಇಂಕೇಮ್ ಕಾವಲಿ' ಹಾಗೂ ಚಲೋ ಚಿತ್ರದ 'ಚೂಸಿ ಚೂಡಾಂಗನೆ' ಹಾಡು 100 ಮಿಲಿಯನ್ ವೀಕ್ಷಣೆ ಕಂಡಿದೆ.

  ಏನ್ ಅಚ್ಚರಿ ಗುರು: ಸೌತ್ ಸ್ಟಾರ್ ಗಳನ್ನ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ.!

  English summary
  Kannada actress Rashmika mandanna has expressed angry on unknown person, who tweeted against her fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X