'ಯಾವ ರೀತಿಯ ಪಾತ್ರ ಮತ್ತು ಸಿನಿಮಾ ಮಾಡಬೇಕು' ಎಂದ ರಶ್ಮಿಕಾಗೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ನಟಿ. ಸದ್ಯ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಸ್ಟಾರ್ ನಟರ ಜೊತೆ ಸಿನಿಮಾ ಮಾಡುತ್ತ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗ್ಲಾಮರ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಶ್ಮಿಕಾ ಮುಂದಿನ ದಿನಗಳಲ್ಲಿ ಯಾವ ರೀತಿಯ ಪಾತ್ರಗಳನ್ನು ಮಾಡಬೇಕು ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ರಶ್ಮಿಕಾ, ಅಭಿಮಾನಿಗಳ ಜೊತೆ ಆಗಾಗ ಮಾತುಕತೆ ನಡೆಸುತ್ತಿರುತ್ತಾರೆ. ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪಾತ್ರಗಳ ಆಯ್ಕೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಗಳಿಂದನೂ ಆಗಾಗ ಸಲಹೆ ಪಡೆಯುವ ರಶ್ಮಿಕಾ ಇತ್ತೀಚಿಗೆ ಹೆಸರು ಬದಲಾಯಿಸುವ ವಿಚಾರವಾಗಿ ಅಭಿಮಾನಿಗಳನ್ನು ಕೇಳಿದ್ದರು. ಸದ್ಯ ಪಾತ್ರಗಳ ಆಯ್ಕೆ ಬಗ್ಗೆ ಕೇಳಿರುವ ರಶ್ಮಿಕಾಗೆ ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ..ಮುಂದೆ ಓದಿ...

ಟ್ವಿಟ್ಟರ್ ನಲ್ಲಿ ರಶ್ಮಿಕಾ ಪ್ರಶ್ನೆ

ಟ್ವಿಟ್ಟರ್ ನಲ್ಲಿ ರಶ್ಮಿಕಾ ಪ್ರಶ್ನೆ

ನಟಿ ರಶ್ಮಿಕಾ ಸದ್ಯ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. "ಭವಿಷ್ಯದಲ್ಲಿ ನನ್ನನ್ನು ಯಾವ ರೀತಿಯ ಪಾತ್ರ ಮತ್ತು ಸಿನಿಮಾಗಳಲ್ಲಿ ನೋಡಲು ಬಯಸುತ್ತೀರೀ? ನನಗೆ ಒಂದು ರೆಫರೆನ್ಸ್ ಕೊಡಿ" ಎಂದು ಹೇಳಿದ್ದಾರೆ.

ಅಭಿಮಾನಿಗಳ ಪತಿಕ್ರಿಯೆ

ಅಭಿಮಾನಿಗಳ ಪತಿಕ್ರಿಯೆ

ರಶ್ಮಿಕಾ ಪ್ರಶ್ನೆ ಮಾಡುತ್ತಿದ್ದಂತೆ ಸಾವಿರಾರು ಮಂದಿ ಉತ್ತರ ನೀಡಿದ್ದಾರೆ. ಹೆಚ್ಚಾಗಿ ಅನೇಕರು ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡಿ ಎಂದು ಹೇಳುತ್ತಿದ್ದಾರೆ. ಇನ್ನೂ ಡಿಯರ್ ಕಾಮ್ರೇಡ್ ಸಿನಿಮಾದ ಲಿಲ್ಲಿ ಪಾತ್ರದ ಹಾಗೆ ನಿಮ್ಮನ್ನು ನೋಡಲು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಕೆಲವರು ತಮಿಳು ಹುಡುಗಿಯ ಹಾಗೆ ಕಾಣುತ್ತಿರೀ ಹಾಗಾಗಿ ಸಂಪ್ರದಾಯಸ್ತ ತಮಿಳು ಕುಟುಂಬದ ಹುಡುಗಿಯಾಗಿ ನೋಡಲು ಇಷ್ಟ ಎಂದರೆ, ಅಲಿಯಾ ಭಟ್ ಅಭಿನಯ ರಾಝಿ ಸಿನಿಮಾದ ಪಾತ್ರದ ಹಾಗೆ, ಅನುಷ್ಕಾ ಶೆಟ್ಟಿ ನಿಭಾಯಿಸಿದ್ದ ದೇವಸೇನಾ ಪಾತ್ರದ ಹಾಗೆ, ಹೀಗೆ ಸಾಕಷ್ಟು ರೀತಿಯ ಪಾತ್ರಗಳನ್ನು ರಶ್ಮಿಕಾಗೆ ರೆಫರ್ ಮಾಡುತ್ತಿದ್ದಾರೆ.

ಯಾವ ಹೆಸರು ನನಗೆ ಸೂಕ್ತ ಎಂದಿದ್ದ ರಶ್ಮಿಕಾ

ಯಾವ ಹೆಸರು ನನಗೆ ಸೂಕ್ತ ಎಂದಿದ್ದ ರಶ್ಮಿಕಾ

'ಒಂದೊಮ್ಮೆ ನಾನು ಹೆಸರು ಬದಲಾಯಿಸಿಕೊಳ್ಳಬೇಕು ಎಂದಾದರೆ ಯಾವ ಹೆಸರು ಸೂಕ್ತ? ಎಂದು ಪ್ರಶ್ನಿಸಿದ್ದಾರೆ. ಈ ಬಾರಿಯಾದರೂ ತುಸು ಸೌಮ್ಯದಿಂದ ವರ್ತಿಸಿ ಎಂದು ಟ್ರೋಲ್ ಗಳಿಗೆ ಮನವಿಯನ್ನೂ ಮಾಡಿದ್ದಾರೆ ರಶ್ಮಿಕಾ. ರಶ್ಮಿಕಾಗೆ ಅಭಿಮಾನಿಗಳು ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದಾರೆ. ಜೊತೆಗೆ ನೆಗೆಟಿವ್ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ವೀಟ್ ಆಗಿರುವ ರಶ್ಮಿಕಾ

ಸಾಮಾಜಿಕ ಜಾಲತಾಣದಲ್ಲಿ ಆಕ್ವೀಟ್ ಆಗಿರುವ ರಶ್ಮಿಕಾ

ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಜೊತೆಗೆ ಅಭಿಮಾನಿಗಳ ಜೊತೆ ಸಂವಾದ ಮಾಡುತ್ತಿದ್ದಾರೆ. ಸಿನಿಮಾಗಳ ಬಗ್ಗೆ ಅಪ್ ಡೇಟ್ ನೀಡುತ್ತಾ ಯಾವಾಗಲು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುತ್ತಾರೆ.

More from Filmibeat

English summary
Rashmika mandanna asked to fans what kind of roles and movies are should do.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X