ರಶ್ಮಿಕಾ ಮಂದಣ್ಣ 'ಬ್ಯಾಕ್ ಡೈವ್' ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಯಜಮಾನ ಸಿನಿಮಾ ಶತದಿನ ಪೂರೈಸಿದೆ. ವಿಜಯ್ ದೇವರಕೊಂಡ ಜೊತೆ ನಟಿಸಿರುವ ಡಿಯರ್ ಕಾಮ್ರೇಡ್ ಜುಲೈ 26 ರಂದು ತೆರೆಗೆ ಬರ್ತಿದೆ. ಧ್ರುವ ಸರ್ಜಾ ಜೊತೆ ಪೊಗರು, ನಾನಿ ಜೊತೆ ಭೀಷ್ಮ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಈ ಮಧ್ಯೆ ಪ್ರಿನ್ಸ್ ಮಹೇಶ್ ಬಾಬು ಜೊತೆ 'ಸರಿಲೇರು ನೀಕೆವರು' ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಅಲ್ಲು ಅರ್ಜುನ್ ಅವರ 20ನೇ ಸಿನಿಮಾ ಮತ್ತು ತಮಿಳಿನಲ್ಲಿ ಕಾರ್ತಿ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇಷ್ಟೆಲ್ಲಾ ಬ್ಯುಸಿಯಿರುವ ರಶ್ಮಿಕಾ ಮಂದಣ್ಣ ಈಗ ಸಾಹಸಕ್ಕೆ ಮುಂದಾಗಿದ್ದಾರೆ. ಬಬ್ಲಿ ಹುಡುಗಿ, ಕಾಲೇಜ್ ಹುಡುಗಿ, ಪಕ್ಕದ್ಮನೆ ಹುಡುಗಿ, ಕ್ಲಾಸ್ ಹುಡುಗಿ ಅಂತಹ ಪಾತ್ರಗಳಲ್ಲಿ ನಟಿಸಿದ್ದ ರಶ್ಮಿಕಾ ಈಗ ಸಾಹಸಮಯ ಪಾತ್ರದಲ್ಲಿ ನಟಿಸುವ ತಯಾರಿ ನಡೆಸುತ್ತಿದ್ದಾರೆ.

ಇದಕ್ಕಾಗಿ ಭರ್ಜರಿ ಸಾಹಸಗಳನ್ನ ಮಾಡ್ತಿದ್ದಾರೆ. ಹೌದು, ಫಿಟ್ನೆಸ್ ಕಾಯ್ದುಕೊಳ್ಳುತ್ತಿರುವ ರಶ್ಮಿಕಾ, ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಿದ್ದಾರೆ. ಅದರಲ್ಲೂ ಬ್ಯಾಕ್ ಡೈವ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಶ್ಮಿಕಾ ಸ್ಟಂಟ್ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ರಶ್ಮಿಕಾ ಅವರ ಈ ಸಾಹಸಮಯ ವಿಡಿಯೋ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಾವ ಚಿತ್ರಕ್ಕಾಗಿ ಹೀಗೆ ರೆಡಿಯಾಗ್ತಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಸಿನಿಮಾಗಾಗಿ ಇಷ್ಟೊಂದು ಶ್ರಮವಹಿಸುತ್ತಿರುವುದು ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದೆ.


Click it and Unblock the Notifications