ಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಸಿನಿಮಾಗಳು ಹೆಚ್ಚುತ್ತಿದ್ದಂತೆ ಅಭಿಮಾನಿ ಬಳಗವೂ ದೊಡ್ಡದಾಗಿ ಬೆಳೆದಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸುತ್ತಿರುವ ರಶ್ಮಿಕಾಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರ ಪರಿಣಾಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿಯೂ ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಸದ್ಯ, ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 19.2 ಮಿಲಿಯನ್ ಏರಿಕೆಯಾಗಿದೆ. ಈ ಮೂಲಕ ಸೌತ್ ಇಂಡಸ್ಟ್ರಿಯ ಸ್ಟಾರ್ ನಟಿಯರನ್ನು ರಶ್ಮಿಕಾ ಹಿಂದಿಕ್ಕಿದ್ದಾರೆ.

ಸಮಂತಾ ಅಕ್ಕಿನೇನು, ಕಿಯಾರಾ ಅಡ್ವಾಣಿ, ಕಾಜಲ್ ಅಗರ್‌ವಾಲ್ ಅಂತಹ ಸ್ಟಾರ್ ಹೀರೋಯಿನ್‌ಗಳನ್ನೇ ಇನ್ಸ್ಟಾ ಫಾಲೋವರ್ಸ್ ಸಂಖ್ಯೆಯಲ್ಲಿ ಹಿಂದಿಕ್ಕಿ ಸಾಗುತ್ತಿದ್ದಾರೆ. ಸದ್ಯದಲ್ಲೇ ರಶ್ಮಿಕಾ ಫಾಲೋವರ್ಸ್ ಸಂಖ್ಯೆ 20 ಮಿಲಿಯನ್ ದಾಟುವ ಸಾಧ್ಯತೆ ದಟ್ಟವಾಗಿದೆ.

rashmika-mandanna-beats-vijay-devarakonda-and-samantha

'ಫ್ಯಾಮಿಲಿ ಮ್ಯಾನ್ 2' ಸಕ್ಸಸ್‌ನಲ್ಲಿರುವ ಸಮಂತಾ ಅಕ್ಕಿನೇನಿಗೆ ಇನ್ಸ್ಟಾಗ್ರಾಂನಲ್ಲಿ 17.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. 'ಭರತ್ ಅನೇ ನೇನು' ಸಿನಿಮಾ ಮೂಲಕ ಸಕ್ಸಸ್ ಕಂಡ ಕಿಯಾರಾ ಅಡ್ವಾಣಿ 17.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಇದೇ ವರ್ಷ ವೈವಾಹಿಕ ಬದುಕು ಆರಂಭಿಸಿದ ಕಾಜಲ್ ಅಗರ್‌ವಾಲ್ 19 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

19 ಮಿಲಿಯನ್ ಫಾಲೋವರ್ಸ್ ಆದ ದಿನ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿ ಪೋಸ್ಟ್ ಹಾಕಿದ್ದರು. ''ಓ ಮೈ ಗಾಡ್, 19 ಮಿಲಿಯನ್. ಈಗಷ್ಟೇ ನೋಡಿದೆ. ನನ್ನದು 19 ಮಿಲಿಯನ್ ಕುಟುಂಬ. ಥ್ಯಾಂಕ್ ಯೂ ಸೋ ಮಚ್'' ಎಂದು ಖುಷಿ ವ್ಯಕ್ತಪಡಿಸಿದ್ದರು.

ಅಮಿತಾಭ್ ಬಚ್ಚನ್ ನಟಿಸುತ್ತಿರುವ 'ಗುಡ್ ಬೈ' ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರ ಜೊತೆ 'ಮಿಷನ್ ಮಜ್ನು' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಂಡಿರುವ 'ಪುಷ್ಪ' ಸಿನಿಮಾ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ.

More from Filmibeat

English summary
Indian Actress Rashmika Mandanna has now 19.2 million Instagram followers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X