ಶಶಿಕುಮಾರ್ ಮಗನ ಸಾಹಸಕ್ಕೆ ರಶ್ಮಿಕಾ ಮಂದಣ್ಣ ಶುಭಾಶಯ
ಸುಪ್ರೀಂ ಹೀರೋ ಆಗಿ ಮಿಂಚಿದ್ದ ಶಶಿಕುಮಾರ್, ಕನ್ನಡ ಚಿತ್ರರಂಗದಿಂದ ಕೆಲಕಾಲ ದೂರವಾಗಿದ್ದರು. ಆದರೆ ಮರಳಿ ಬಂದಿರುವ ಅವರು, ಈಗ ಪುತ್ರನನ್ನೂ ಕರೆತಂದಿದ್ದಾರೆ.
ಹೌದು, ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಟನೆಯ ಹೊಸ ಸಿನಿಮಾ ರೆಡಿಯಾಗಿದೆ. ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಹೆಸರು 'ಸೀತಾಯಣ'.
ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ನವೆಂಬರ್ 25 ರಂದು ನಟಿ ರಶ್ಮಿಕಾ ಮಂದಣ್ಣ ಅವರು ಸೀತಾಯಣ ಸಿನಿಮಾದ ಸುಂದರವಾದ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಕನ್ನಡದಲ್ಲಿ ಕವಿರಾಜ್ ಬರೆದಿರುವ 'ಸಂಜೆ ಗಗನ' ಸೇರಿದಂತೆ ತೆಲುಗು-ತಮಿಳಿನ ಹಾಡುಗಳನ್ನು ಒಟ್ಟಿಗೆ ತಮ್ಮ ಟ್ವಿಟ್ಟರ್ ಖಾತೆಯಿಂದ ರಶ್ಮಿಕಾ ಮಂದಣ್ಣ ಬಿಡುಗಡೆ ಮಾಡಿದ್ದಾರೆ.
'ಈ ಹಾಡು ನನಗೆ ಬಹಳ ಇಷ್ಟವಾಯಿತು' ಎಂದಿರುವ ರಶ್ಮಿಕಾ, ಅಕ್ಷಿತ್ ಶಶಿಕುಮಾರ್ ಸೇರಿದಂತೆ ಸೀತಾಯಣ ಸಿನಿಮಾದ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಶಶಿಕುಮಾರ್ ಮಗನ ಸಿನಿಮಾಕ್ಕೆ ಶಿವರಾಜ್ ಕುಮಾರ್ ಸಹ ಶುಭಾಶಯ ತಿಳಿಸಿದ್ದರು. ತೆಲುಗಿನ ನಟ ರವಿತೇಜ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ಕೆಲವೇ ದಿನಗಳಲ್ಲಿ ಸಿನಿಮಾ ಮೂರೂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











