For Quick Alerts
  ALLOW NOTIFICATIONS  
  For Daily Alerts

  ದರ್ಶನ್, ಪುನೀತ್ ಅಭಿಮಾನಿಗಳಂತೆ ರಶ್ಮಿಕಾ ಫ್ಯಾನ್ಸ್ ಶುರು ಮಾಡಿದ್ರು

  |

  ಸಾಮಾನ್ಯವಾಗಿ ಸ್ಟಾರ್ ನಟರ ಬರ್ತಡೇ ಅಂದ್ರೆ ಹಬ್ಬದಂತೆ ಆಚರಿಸಲು ಅವರ ಅಭಿಮಾನಿಗಳು ತಿಂಗಳುಗಳಿಂದ ತಯಾರಾಗ್ತಾರೆ. ಯಾವ ಕಾರ್ಯಕ್ರಮ ಮಾಡ್ಬೇಕು, ಏನು ವಿಶೇಷತೆ ಇರ್ಬೇಕು, ಹೇಗೆ ಸೆಲೆಬ್ರೇಟ್ ಮಾಡ್ಬೇಕು ಎಂದು ಹಲವು ದಿನ ಲೆಕ್ಕಾಚಾರ ಮಾಡಿ ಸಜ್ಜಾಗ್ತಾರೆ.

  ಅದರಲ್ಲೂ ದರ್ಶನ್ ಅಥವಾ ಪುನೀತ್ ರಾಜ್ ಕುಮಾರ್, ಸುದೀಪ್ ಅವರ ಹುಟ್ಟುಹಬ್ಬಗಳಂದ್ರೆ ಆರೇಳು ತಿಂಗಳಿನಿಂದಲೇ ಸಂಭ್ರಮ ಶುರು ಮಾಡ್ತಾರೆ ಅವರ ಫ್ಯಾನ್ಸ್. ಕೊನೆಯ 150 ದಿನ, 100 ದಿನ, 50 ದಿನ, ಕೊನೆಯ 30 ದಿನ, 10 ದಿನ ಹೀಗೆ ಕೌಂಡೌನ್ ಮಾಡ್ತಾ ಬರ್ತಾರೆ.

  ರಶ್ಮಿಕಾ ಮಂದಣ್ಣ ಚಿತ್ರಗಳಂದ್ರೆ ಯೂಟ್ಯೂಬ್ ಗೆ ಒಂಥರಾ ಇಷ್ಟ

  ಈ ರೀತಿ ಟ್ರೆಂಡ್ ಹೀರೋಯಿನ್ ಗಳಿಗೆ ಸಿಗೋದು ಬಹಳ ಅಪರೂಪ. ಇದೀಗ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಹುಟ್ಟುಹಬ್ಬವನ್ನ ಆಚರಿಸಲು ಈಗಿನಿಂದಲೇ ಫಿಲ್ಡ್ ಗೆ ಇಳಿದಿದ್ದಾರೆ. ಅಂದ್ರೆ, ಕೌಂಡೌನ್ ಗೆ ಚಾಲನೆ ನೀಡಿದ್ದಾರೆ.

  ಹೌದು, ಏಪ್ರಿಲ್ 5ನೇ ತಾರೀಖು ರಶ್ಮಿಕಾ ಹುಟ್ಟುಹಬ್ಬವಿದ್ದು, ಇನ್ನು 50 ದಿನ ಬಾಕಿಯರುವಾಗಲೇ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ #50DaysForRashmikaBday ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡ್ತಿದ್ದಾರೆ.

  ರಶ್ಮಿಕಾಗೆ ಪತ್ರ ಬರೆದ 8ರ ಪೋರ, ಈ ಬಾಲಕನ ಆಸೆ ಏನು ಗೊತ್ತಾ?

  ಸದ್ಯ ಯಜಮಾನ ಸಿನಿಮಾದ ಬಿಡುಗಡೆಗೆ ಕಾಯ್ತಿರುವ ರಶ್ಮಿಕಾ ಮಂದಣ್ಣ ಆ ಕಡೆ ಧ್ರುವ ಸರ್ಜಾ ಜೊತೆ ಪೊಗರು ಸಿನಿಮಾ ಮಾಡ್ತಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ 'ಡಿಯರ್ ಕಾರ್ಮೆಡ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Rashmika mandanna will celebrate her birthday on april 5th. but, fans are already starts celebration in twitter

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X