Rashmika Mandanna Birthday: ರಶ್ಮಿಕಾಗೆ ಹುಟ್ಟುಹಬ್ಬ,ಹೇಗಿರುತ್ತೆ ಸಂಭ್ರಮ?

ನಟಿ ರಶ್ಮಿಕಾ ಮಂದಣ್ಣ ಯಾವ ಸ್ಟಾರ್ ಹೀರೊಗಳಿಗೂ ಕಡಿಮೆ ಇಲ್ಲ. ಸದ್ಯ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಸೂಪರ್ ಸ್ಟಾರ್ ಆಗಿ ಮಿಂಚುತ್ತಾ ಇದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸೌತ್ ಚಿತ್ರರಂಗ ಸೇರಿದಂತೆ ಬಾಲಿವುಡ್‌ನಲ್ಲಿ ಹೆಸರು ವಾಸಿ. 'ಪುಷ್ಪ' ಚಿತ್ರದ ಬಳಿಕ ಅಂತೂ ರಶ್ಮಿಕಾಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಇಂದು (ಏಪ್ರಿಲ್ 5) ರಶ್ಮಿಕಾಗೆ ಹುಟ್ಟುಹಬ್ಬ. ಈ ಬೆಡಗಿಗೆ ಶುಭಾಶಯದ ಮಹಾಪೂರವೇ ಹರಿದು ಬರ್ತಿದೆ.‌ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಅಭಿಮಾನಿಗಳು ಆಕೆಗೆ ಶುಭಾಶಯ ಕೋರುತ್ತಾ ಇದ್ದಾರೆ. ಇನ್ನು ಒಂದು ದಿನ ಮೊದಲೇ ರಶ್ಮಿಕಾ ಕಾಮನ್ ಡಿಪಿ ರಿಲೀಸ್ ಆಗಿದೆ. ರಶ್ಮಿಕಾ ಹೊಸ ಲುಕ್ ಈ ಡಿಪಿ ಪೋಸ್ಟರ್‌ನಲ್ಲಿ ರಿವೀಲ್ ಆಗಿದೆ. ಹೂವುಗಳ ಪೇಂಟಿಂಗ್ ನಡುವೆ ರಶ್ಮಿಕಾ ಮಂದಣ್ಣ ಇರುವ ಹಾಗೆ ರಶ್ಮಿಕಾ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಮ್ಮಲ್ಲಿ ನಟರನ್ನು ಹೆಚ್ಚಾಗಿ ಮೆರೆಸುವ ಪದ್ದತಿ ಇದೆ. ಹಾಗಾಗಿಯೇ ಸ್ಟಾರ್ ಹೀರೊಗಳ ಹುಟ್ಟುಹಬ್ಬ ಬಂತು ಅಂದರೆ ಸಾಕು, ಸಾಕಷ್ಟು ವಿಶೇಷತೆಗಳು ಇರುತ್ತವೆ. ಅದರಲ್ಲೂ ಅವರ ಅಭಿಮಾನಿಗಳು ಒಂದು ತಿಂಗಳು, ವಾರಕ್ಕೂ ಮೊದಲೇ ಅಬ್ಬರ ಶುರು ಮಾಡಿ ಬಿಟ್ಟಿರುತ್ತಾರೆ. ಕಾಮನ್ ಡಿಪಿ ರಿಲೀಸ್ ಮಾಡಿ ದಾಖಲೆಗೆ ಮುಂದಾಗುತ್ತಾರೆ. ಈ ಸಾಲಿನಲ್ಲಿ ನಟಿ ರಶ್ಮಿಕಾ ಕೂಡ ಇದ್ದಾರೆ. ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಬಳಗದಿಂದ ಕಾಮನ್ ಡಿಪಿ ರಿಲೀಸ್ ಆಗಿದೆ.

Rashmika Mandanna Birthday Special, How Rashmika Celebrate Her Birthday

ರಶ್ಮಿಕಾ ಕನ್ನಡದಿಂದ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದಾರೆ. ಆದರೆ ಈಗ ನ್ಯಾಷನಲ್ ಕ್ರಶ್ ಎನಿಸಿಕೊಂಡು, ತೆಲುಗು ಮತ್ತು ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ತೆಲುಗು ಮತ್ತು ಹಿಂದಿ‌ ಚಿತ್ರಗಳು ಮಾತ್ರ ಇವೆ. ಕನ್ನಡದ ಚಿತ್ರಗಳನ್ನು ಸದ್ಯಕ್ಕೆ ರಶ್ಮಿಕಾ ಒಪ್ಪಿಕೊಂಡಿಲ್ಲ.

Rashmika Mandanna Birthday Special, How Rashmika Celebrate Her Birthday

ತೆಲುಗಿನಲ್ಲಿ ಮುಂದೆ 'ಪುಷ್ಪ 2' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಜೊತೆಗೆ ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇನ್ನುಳಿದಂತೆ ಕರಣ್ ಜೋಹರ್ ಪ್ರೊಡಕ್ಷನ್ ನಲ್ಲೂ ರಶ್ಮಿಕಾ ಸಿನಿಮಾ ಮಾಡಲಿದ್ದಾರೆ ಎನ್ನುವ ಗುಸು, ಗುಸು ಕೇಳಿ ಬರುತ್ತಿದೆ.

More from Filmibeat

English summary
Rashmika Mandanna Birthday Special, Know How Rashmika Celebrate Her Birthday,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X