»   » ಹೊಸ ಕಾರ್ ಒಡತಿಯಾದ ರಕ್ಷಿತ್ ಮನದೊಡತಿ ರಶ್ಮಿಕಾ

ಹೊಸ ಕಾರ್ ಒಡತಿಯಾದ ರಕ್ಷಿತ್ ಮನದೊಡತಿ ರಶ್ಮಿಕಾ

Written By:
Subscribe to Filmibeat Kannada
ಕಿರಿಕ್ ಪಾರ್ಟಿ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ ಈಗ ಆಡಿ ಕಾರ್ ಓನರ್ | Filmibeat Kannada

ನಟಿ ರಶ್ಮಿಕಾ ಮಂದಣ್ಣ ಇಂದು ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಅವರ ಆ ಖುಷಿಗೆ 'ಚಮಕ್' ಸಿನಿಮಾ ಒಂದು ಕಾರಣ ಆಗಿದೆ. ಆದರೆ ಅದರೊಂದಿಗೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ ರಶ್ಮಿಕಾ ಮಂದಣ್ಣ ಇಂದು ಹೊಸ ಕಾರ್ ಖರೀದಿ ಮಾಡಿದ್ದಾರೆ.

'ಚಮಕ್' ಸಿನಿಮಾ ಇಂದು ರಾಜ್ಯಾದಂತ್ಯ ರಿಲೀಸ್ ಆಗಿ ಎಲ್ಲರಿಂದ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿದೆ. ಇದರ ಜೊತೆಗೆ ಇದೇ ದಿನ ರಶ್ಮಿಕಾ ಹೊಸ ಕಾರ್ ಒಡತಿ ಆಗಿದ್ದಾರೆ. ಹೊಸ ಕಾರ್ ಖರೀದಿ ಮಾಡಿರುವ ರಶ್ಮಿಕಾ ತಮ್ಮ ಭಾವಿ ಪತಿ ನಟ ರಕ್ಷಿತ್ ಶೆಟ್ಟಿ ರೊಂದಿಗೆ ಫಸ್ಟ್ ರೈಟ್ ಹೋಗಿದ್ದಾರೆ. ಅಂದಹಾಗೆ, ರಶ್ಮಿಕಾ ಮಂದಣ್ಣ ಅವರ ಹೊಸ ಕಾರ್ ಯಾವುದು ಎಂಬ ಒಂದಷ್ಟು ಮಾಹಿತಿ ಮುಂದಿದೆ ಓದಿ...

ಆಡಿ (Audi) ಕಾರ್ ಓಡತಿ

'ಕಿರಿಕ್ ಪಾರ್ಟಿ' ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಈಗ ಆಡಿ (Audi) ಕಾರ್ ಓನರ್ ಆಗಿದ್ದಾರೆ. ಕೆಂಪು ಬಣ್ಣದ ಕಾರ್ ಅನ್ನು ಸಾನ್ವಿ ಖರೀದಿ ಮಾಡಿದ್ದಾರೆ.

ರಕ್ಷಿತ್ ಮತ್ತು ರಶ್ಮಿಕಾ

ಕಾರ್ ಖರೀದಿ ಮಾಡಿರುವ ಖುಷಿಯಲ್ಲಿರುವ ರಶ್ಮಿಕಾ, ರಕ್ಷಿತ್ ಜೊತೆ ತಮ್ಮ ಹೊಸ ಕಾರ್ ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ರಕ್ಷಿತ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫಸ್ಟ್ ರೈಡ್

ತಮ್ಮ ಕನಸಿನ ಕಾರ್ ತೆಗೆದುಕೊಂಡಿರುವ ರಶ್ಮಿಕಾ ಮೊದಲ ಪ್ರಯಾಣವನ್ನು ಅವರ ಭಾವಿ ಪತಿ ರಕ್ಷಿತ್ ಶೆಟ್ಟಿ ಜೊತೆ ಮಾಡಿದ್ದಾರೆ.

'ಚಮಕ್' ಸಿನಿಮಾ ರಿಲೀಸ್

'ಚಮಕ್' ಚಿತ್ರ ಇಂದು ರಿಲೀಸ್ ಆಗಿದ್ದು, ರಕ್ಷಿತ್ ಮತ್ತು ರಶ್ಮಿಕಾ ಒಟ್ಟಿಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಅಭಿನಯ ನೋಡಿ ಖುಷಿಯಾದ ರಕ್ಷಿತ್ ಚಿತ್ರಮಂದಿರದಲ್ಲಿ ಅವರನ್ನು ತಬ್ಬಿಕೊಂಡರು.

ಯಶ್ ನಂತರ ದುಬಾರಿ ಕಾರು ಖರೀದಿಸಿದ ನಟಿ ಹರಿಪ್ರಿಯಾ

ಡಿಸೆಂಬರ್ ರಶ್ಮಿಕಾ ಪಾಲಿಗೆ ಲಕ್ಕಿ

ಡಿಸೆಂಬರ್ ರಶ್ಮಿಕಾ ಪಾಲಿಗೆ ತುಂಬ ಲಕ್ಕಿ ಅನಿಸುತ್ತದೆ. ಅವರ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ' ಕಳೆದ ವರ್ಷ ಡಿಸೆಂಬರ್ ನಲ್ಲಿ ರಿಲೀಸ್ ಆಗಿತ್ತು. ಈ ವರ್ಷ 'ಅಂಜನಿಪುತ್ರ' ಮತ್ತು 'ಚಮಕ್' ಚಿತ್ರಗಳು ತೆರೆಗೆ ಬಂದಿದೆ. ಜೊತೆಗೆ ಇದೇ ತಿಂಗಳು ಕಿರಿಕ್ ಬೆಡಗಿ ಹೊಸ ಕಾರ್ ಖರೀದಿ ಮಾಡಿದ್ದಾರೆ.

ಮೂರು ಕಾರು ಖರೀದಿಸಿದ ನಟ ಯಶ್, ಪ್ರೀತಿಯಲ್ಲಿ ಎಲ್ಲರಿಗೂ ಸಮಪಾಲು

English summary
Kannada actress Rashmika Mandanna bought a new Audi car. Rashmika's first raid with Rakshit Shetty in Audi car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X