ಮತ್ತೊಂದು ದುಬಾರಿ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ: ಗೋವಾ, ಮುಂಬೈನಲ್ಲೂ ಇದೆ ಮನೆ!

ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಪ್‌ ನಟಿಯರಲ್ಲಿ ಒಬ್ಬರು. ಪುಷ್ಪ ಸಿನಿಮಾದ ಬಳಿಕ ನಟಿ ರಶ್ಮಿಕಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ರಸ್ಮಿಕಾ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕನ್ನಡದಿಂದ ಸಿನಿಮಾ ಜರ್ನಿ ಶುರುಮಾಡಿದ ನಟಿ ರಶ್ಮಿಕಾ, ಇಂದು ತಮಿಳು, ತೆಲುಗು, ಹಿಂದಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲೂ ಕೂಡ ರಶ್ಮಿಕಾ ಅವರಿಗೆ ಬೇಡಿಕೆ ಹೆಚ್ಚಾಗಿದೆ.

Recommended Video

ಗೋವಾ ನಂತರ ಹೈದ್ರಾಬಾದ್ ನಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ

ಸದ್ಯ ರಶ್ಮಿಕಾ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಮುಂದೆ ಪುಷ್ಪ 2 ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ರಶ್ಮಿಕಾ ಹೈದ್ರಾಬಾದ್‌ನಲ್ಲಿಯೇ ವಾಸ ಮಾಡುವ ಸೂಚನೆ ಸಿಕ್ಕಿದೆ. ಈಗ ಈ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ನಟಿ ರಶ್ಮಿಕಾ ಹೊಸ ಮನೆಯ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಲಿದೆ.

ರಶ್ಮಿಕಾ ಮಂದಣ್ಣ ಇತ್ತೀಚೇಗೆ ತಮ್ಮ ಸಂಭಾವನೆಯ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿ ಆಗಿದ್ದರು. ಪುಷ್ಪ ಸಿನಿಮಾದ ಬಳಿಕ ರಶ್ಮಿಕಾ ಅವರು ತಮ್ಮ ಸಂಭಾವನೆಯನ್ನು 3 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಈಗ ಹೊಸ ಮನೆ ಖರೀದಿಸಿ ಸುದ್ದಿ ಆಗಿದ್ದಾರೆ.

ಹೈದ್ರಾಬಾದ್‌ನಲ್ಲಿ ದುಬಾರಿ ಮನೆ!

ಹೈದ್ರಾಬಾದ್‌ನಲ್ಲಿ ದುಬಾರಿ ಮನೆ!

ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾಗಳ ಶೂಟಿಂಗ್‌ಗಾಗಿ ಹೈದ್ರಾಬಾದ್‌ನಲ್ಲೇ ಹೆಚ್ಚು ಸಮಯ ಕಳೆಯ ಬೇಕಾಗಿದೆ. ಹಾಗಾಗಿ ರಶ್ಮಿಕಾ ಅಂದು ಹೊಸ ಮನೆಯನ್ನು ಖರೀದಿ ಮಾಡಿದ್ದಾರಂತೆ. ಹೋಟೆಲ್‌ಗಳಲ್ಲಿ ಇರುವುದಕ್ಕಿಂತಲೂ ಮನೆ ಇದ್ದರೆ, ಉತ್ತಮ ಎಂದು ಹೈದ್ರಾಬಾದ್‌ನಲ್ಲಿ ರಶ್ಮಿಕಾ ಅವರು ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಅವರು ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದು ಸಾಕ್ಷಿ ಆಗಿದೆ. ಮನೆಯ ವಸ್ತುಗಳನ್ನು ಪ್ಯಾಕ್ ಮಾಡುವುದು ಕಷ್ಟದ ಕೆಲಸ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದರು.

ಹಾಲಿ ಡೇ ವೆಕೇಷನ್‌ಗಾಗಿ ಗೋವಾದಲ್ಲೂ ಇದೆ ರಶ್ಮಿಕಾ ಮನೆ!

ಹಾಲಿ ಡೇ ವೆಕೇಷನ್‌ಗಾಗಿ ಗೋವಾದಲ್ಲೂ ಇದೆ ರಶ್ಮಿಕಾ ಮನೆ!

ರಶ್ಮಿಕಾ ಮಂದಣ್ಣ ಗೋವಾದಲ್ಲಿ ಸುಂದರ ಮನೆಯನ್ನು ಖರೀದಿಸಿದ್ದಾರೆ. ಈ ಬಗ್ಗೆ ಅವರೇ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಗೋವಾದಲ್ಲಿ ಮನೆ ಕೊಂಡುಕೊಂಡಿದ್ದರ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮನೆಯ ಹೊರಾಂಗಣದ ಫೋಟೋ ಶೇರ್​ ಮಾಡಿಕೊಂಡಿದ್ದರು. ಗೋವಾದಲ್ಲಿ ಸಮಯ ಕಳೆಯಬೇಕು ಎಂದಾಗ ರಶ್ಮಿಕಾ ಆ ಮನೆಗೆ ಹೋಗಿ ಅಲ್ಲೇ ಉಳಿದು ಕೊಳ್ಳುತ್ತಾರಂತೆ.

ಬಾಲಿವುಡ್‌ ಚಿತ್ರಕ್ಕಾಗಿ ಮುಂಬೈನಲ್ಲೂ ಮನೆ ಮಾಡಿರುವ ರಶ್ಮಿಕಾ!

ಬಾಲಿವುಡ್‌ ಚಿತ್ರಕ್ಕಾಗಿ ಮುಂಬೈನಲ್ಲೂ ಮನೆ ಮಾಡಿರುವ ರಶ್ಮಿಕಾ!

ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ. ರಶ್ಮಿಕಾ ಅವರು ಬಾಲಿವುಡ್‌ನ ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ 'ಮಿಷನ್ ಮಜ್ನು' ಮತ್ತು ಅಮಿತಾಬ್ ಬಚ್ಚನ್ ಜೊತೆಗೆ ಗುಡ್‌ ಬೈ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಗಳ ಕೆಲಸಗಳಿಗಾಗಿ ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲೂ ಕೂಡ ಹೊಸ ಮನೆ ಖರೀದಿ ಮಾಡಿದ್ದಾರೆ ಎಂದು ವರದಿ ಆಗಿದೆ.

ಮತ್ತೆ ಕನ್ನಡ ಸಿನಿಮಾ ಮಾಡ್ತಾರ ರಶ್ಮಿಕಾ ಮಂದಣ್ಣ!

ಮತ್ತೆ ಕನ್ನಡ ಸಿನಿಮಾ ಮಾಡ್ತಾರ ರಶ್ಮಿಕಾ ಮಂದಣ್ಣ!

ರಶ್ಮಿಕಾಳ ಈ ನಡೆ ನೋಡಿದ್ರೆ ಆಕೆ ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದು ಅನುಮಾನವೇ. ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡುವ ಬಗ್ಗೆಯೂ ರಶ್ಮಿಕಾ ಎಲ್ಲೂ ಹೇಳಿಕೊಂಡಿಲ್ಲ. ಸದ್ಯ ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಆಗಲಿದ್ದಾರೆ. ಈ ಚಿತ್ರದ ಬಳಿಕ ಮತ್ತೆ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ?, ಯಾವ ಭಾಷೆಯ ಸಿನಿಮಾ ಮಾಡಲಿದ್ದಾರೆ, ಯಾವ ಸ್ಟಾರ್ ನಟನ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೋಡಬೇಕು.

More from Filmibeat

English summary
Rashmika Mandanna Bought New Costly House In Hyderabad, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X