For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ ಹೊಸ ಕಾರು ಖರೀದಿಸಿದ ರಶ್ಮಿಕಾ ಮಂದಣ್ಣ

  |

  ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೊಸ ಸಿನಿಮಾಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆದ್ರೀಗ, ಹೊಸ ಕಾರು ಖರೀದಿಸಿ ಹೆಡ್‌ಲೈನ್‌ ಆಗಿದ್ದಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿರುವ ರಶ್ಮಿಕಾ ಈ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಕೋಟಿ ಬೆಲೆಯ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ | Filmibeat Kannada

  ಹೊಸ ಕಾರಿನ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ನಟಿ ''ಸಾಮಾನ್ಯವಾಗಿ ಇಂತಹ ವಿಷಯಗಳನ್ನು ನಾನು ನನ್ನಲ್ಲೇ ಇಟ್ಟುಕೊಳ್ಳುತ್ತೇನೆ, ಆದ್ರೆ, ಈ ಸಲ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆ ಎನಿಸಿತು'' ಎಂದು ಕ್ಯಾಪ್ಷನ್ ಪೋಸ್ಟ್ ಮಾಡಿದ್ದಾರೆ. ಮುಂದೆ ಓದಿ...

  ಯಾವ ಕಾರು, ಅದರ ಬೆಲೆ ಎಷ್ಟು?

  ಯಾವ ಕಾರು, ಅದರ ಬೆಲೆ ಎಷ್ಟು?

  ರಶ್ಮಿಕಾ ಖರೀದಿಸಿರುವ ಕಾರು ರೇಂಜ್ ರೋವರ್ ಸ್ಪೋರ್ಟ್ಸ್. ಮ್ಯಾಟ್ ಬ್ಲಾಕ್ ಕಲರ್. ಇದರ ಬೆಲೆ ಭಾರತದ ಮಾರುಕಟ್ಟೆಯಲ್ಲಿ 85 ಲಕ್ಷದಿಂದ 1 ಕೋಟಿ ಕೋಟಿವರೆಗೂ ಇದೆ.

  ಹೊಸ ಕಾರ್ ಒಡತಿಯಾದ ರಕ್ಷಿತ್ ಮನದೊಡತಿ ರಶ್ಮಿಕಾ

  ನನ್ನ ಜೊತೆಯಿದ್ದ ಎಲ್ಲರಿಗೂ ಧನ್ಯವಾದಗಳು

  ನನ್ನ ಜೊತೆಯಿದ್ದ ಎಲ್ಲರಿಗೂ ಧನ್ಯವಾದಗಳು

  ''ಸಾಮಾನ್ಯವಾಗಿ ಹೆಚ್ಚು ವಿಚಾರಗಳನ್ನು ನಿಮ್ಮೊಂದಿಗೆ ಶೇರ್ ಮಾಡಲ್ಲ. ಆದ್ರೆ, ಈ ವಿಷಯ ನಿಮಗೆ ಹೇಳಬೇಕು ಎನಿಸಿತು. ಏಕಂದ್ರೆ ನನ್ನ ಈ ಪಯಣದಲ್ಲಿ ನೀವು ಜೊತೆಯಾಗಿದ್ರಿ, ನನ್ನ ಜೀವನದ ಭಾಗವಾಗಿದ್ರಿ. ನೀವು ತಿಳಿದುಕೊಳ್ಳಬೇಕು. ಈ ಪ್ರಯಾಣದ ಭಾಗವಾಗಿದ್ದಕ್ಕಾಗಿ ಮತ್ತು ನಿಮ್ಮವಳು ಎನ್ನುವಂತೆ ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು'' ಎಂದು ರಶ್ಮಿಕಾ ತಿಳಿಸಿದ್ದಾರೆ.

  ಮೂರು ವರ್ಷದ ಹಿಂದೆ ಕಾರು ಖರೀದಿಸಿದ್ದರು

  ಮೂರು ವರ್ಷದ ಹಿಂದೆ ಕಾರು ಖರೀದಿಸಿದ್ದರು

  2017ರ ಹೊಸ ವರ್ಷದ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಕಾರು ಖರೀದಿಸಿದ್ದರು. ಕೆಂಪು ಬಣ್ಣದ ಆಡಿ ಕಾರ್ ಖರೀದಿ ಮಾಡಿದ್ದರು. ಅದು ರಶ್ಮಿಕಾ ಮೊದಲ ಕಾರು ಆಗಿತ್ತು. ಕಾರು ಕೊಳ್ಳುವುದು ಆಗ ರಶ್ಮಿಕಾ ಅವರ ಕನಸಾಗಿತ್ತು. 2017ರ ಡಿಸೆಂಬರ್ 29 ರಂದು ಕಾರಿನ ಜೊತೆ ಫೋಟೋ ಹಂಚಿಕೊಂಡಿದ್ದರು. ಆಗ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಆಗಿತ್ತು.

  ನಿಮ್ಮನ್ನು ಅತೀ ಹೆಚ್ಚು ಭಯ ಪಡಿಸಿದ ವಿಚಾರ ಯಾವುದು?; ಅಭಿಮಾನಿ ಪ್ರಶ್ನೆಗೆ ರಶ್ಮಿಕಾ ಉತ್ತರ ಹೀಗಿದೆ

  ಹೈದರಾಬಾದ್‌ಗೆ ಬಂದಿಳಿದ ನಟಿ

  ಹೈದರಾಬಾದ್‌ಗೆ ಬಂದಿಳಿದ ನಟಿ

  ಮನೆ ಬಳಿ ರೇಂಜ್ ರೋವರ್ ಕಾರಿನ ಮುಂದೆ ಫೋಸ್ ಕೊಟ್ಟಿದ ನಟಿ ಸಂಜೆ ವೇಳೆ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ 'ಪುಷ್ಪ' ಸಿನಿಮಾದ ಚಿತ್ರೀಕರಣಕ್ಕೆ ನಟಿ ರಶ್ಮಿಕಾ ಮುತ್ತಿನಗರಿ ತಲುಪಿದ್ದಾರೆ. ರಶ್ಮಿಕಾ ಏರ್‌ಪೋರ್ಟ್‌ ಫೋಟೋಗಳು ಸಹ ವೈರಲ್ ಆಗಿದೆ.

  (ಚಿತ್ರಕೃಪೆ: kamlesh nand)

  ಪೊಗರು, ಸುಲ್ತಾನ ರಿಲೀಸ್‌ಗೆ ರೆಡಿ

  ಪೊಗರು, ಸುಲ್ತಾನ ರಿಲೀಸ್‌ಗೆ ರೆಡಿ

  ರಶ್ಮಿಕಾ ಮಂದಣ್ಣ ಅಭಿನಯದ ಕನ್ನಡ ಸಿನಿಮಾ 'ಪೊಗರು' ಬಿಡುಗಡೆಗೆ ಸಜ್ಜಾಗಿದೆ, ತಮಿಳಿನಲ್ಲಿ ಕಾರ್ತಿ ಜೊತೆ ಕಾಣಿಸಿಕೊಂಡಿರುವ 'ಸುಲ್ತಾನ' ಚಿತ್ರವೂ ರಿಲೀಸ್ ಗೆ ರೆಡಿಯಿದೆ. ಈ ನಡುವೆ ನಟ ಸಿದ್ಧಾರ್ಥ್ ಮಲ್ಹೋತ್ರ ಜೊತೆ ಬಾಲಿವುಡ್‌ ಪ್ರವೇಶ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಜೊತೆಯೂ ಸಿನಿಮಾವೊಂದರಲ್ಲಿ ನಟಿಸಲು ಆಫರ್ ಪಡೆದಿದ್ದಾರೆ ಎನ್ನಲಾಗಿದೆ.

  English summary
  Indian actress Rashmika Mandanna buy new range rover car and shared photos in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X