ಮದುವೆ ಬಳಿಕ ತಾಯಿ ಮನೆಗೆ ರಶ್ಮಿಕಾ; ತಂದೆಯಿಂದ ಕೊಟ್ಯಂತರ ಬೆಲೆಬಾಳುವ ಬಂಗಲೆ ಉಡುಗೊರೆ

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆಯಾಗಿ ತಿಂಗಳು ಕಳೆದಿದೆ. ಉದಯ್‌ಪುರದಲ್ಲಿ ತೆಲಂಗಾಣ, ಕೊಡವ ಶೈಲಿಯಲ್ಲಿ ಮದುವೆ, ವಿಜಯ್ ಹುಟ್ಟೂರಿನಲ್ಲಿ ಸಂಭ್ರಮಾಚರಣೆ, ಹೈದರಬಾದ್‌ನಲ್ಲಿ ರಿಸೆಪ್ಷನ್, ಥಾಯ್ಲೆಂಡ್‌ನಲ್ಲಿ ಬಡ್ಡಿಮೂನ್ ಎಲ್ಲಾ ಮುಗಿಸಿ 'ರಣಬಾಲಿ' ಸಿನಿಮಾ ಚಿತ್ರೀಕರಣದಲ್ಲಿ ಕೂಡ ದಂಪತಿ ಭಾಗವಹಿಸಿದ್ದರು. ಮದುವೆ ಬಳಿಕ ಮೊದಲಬಾರಿಗೆ ಹುಟ್ಟೂರಿಗೆ ರಶ್ಮಿಕಾ ಬಂದಿದ್ದಾರೆ.

ನಿನ್ನೆ(ಏಪ್ರಿಲ್ 5)ಯಷ್ಟೆ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೇ ಸಂಭ್ರಮದಲ್ಲಿ ತಾಯಿ ಮನೆಗೆ ಪತಿ ಸಮೇತ ಬಂದಿದ್ದಾರೆ. ಇನ್ನು ಮಗಳಿಗೆ ತಂದೆ ಮದನ್ ಕೋಟ್ಯಂತರ ಬೆಲೆ ಬಾಳುವ ಉಡುಗೊರೆ ಕೊಟ್ಟಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಡಿಕೇರಿಯ ಕಕ್ಕಬ್ಬೆ ಗ್ರಾಮದಲ್ಲಿರುವ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ದಂಪತಿ ಭೇಟಿ ನೀಡಿದ್ದರು. ಮಗಳ ಮದುವೆ, ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಆಪ್ತರಿಗೆ ಔತಣಕೂಟ ಸಹ ಏರ್ಪಡಿಸಲಾಗಿತ್ತು.

Rashmika Mandanna Celebrates Birthday in Kodagu with Vijay Gifted Bungalow by Parents

ಜನಸಾಮಾನ್ಯರಂತೆ ಹೋಗಿ ವಿಜಯ್, ರಶ್ಮಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಜನ ದಂಪತಿಯನ್ನು ನೋಡಿ ಹುಬ್ಬೇರಿಸಿದ್ದಾರೆ. ಮದುವೆ ಉಡುಗೊರೆಯಾಗಿ ರಶ್ಮಿಕಾಗೆ ತಂದೆ ಮದನ್ ಮಂದಣ್ಣ ತಮ್ಮ 'ಸೆರಿನಿಟಿ' ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೆ ವಿರಾಜಪೇಟೆಯ ಚೆಂಚೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ನಿವಾಸಿ ಮದನ್ ಮಂದಣ್ಣ. ಮಾಜಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರು ಹೌದು. ತಮ್ಮ ಹಾಗೂ ಪತ್ನಿ ಸುಮನ್ ಮಂದಣ್ಣ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1 ಹಾಗೂ 142/2 ಐಷಾರಾಮಿ (ಸೆರಿನಿಟಿ) ಬಂಗಲೆಯನ್ನು ರಶ್ಮಿಕಾ ಹೆಸರಿಗೆ ಖಾತೆ ಬದಲಾಯಿಸಿ ಕೊಟ್ಟಿದ್ದಾರೆ. ವಿರಾಜಪೇಟೆ ಉಪನೋಂದಣಿ ಕಚೇರಿಯಲ್ಲಿ ಮಗಳ ಜೊತೆ ಪೋಷಕರು ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗ್ತಿದೆ.

ತಾವು ವಾಸವಿದ್ದ ಐಷಾರಾಮಿ ಮನೆಯನ್ನೇ ಮಗಳಿಗೆ ದಂಪತಿ ಉಡುಗೊರೆಯಾಗಿ ನೀಡಿದ್ದಾರೆ. ಪ್ರಕೃತಿ ಮಡಿಲಿನಲ್ಲಿರುವ ದೊಡ್ಡ ಬಂಗಲೆ ಗಮನ ಸೆಳೆಯುತ್ತದೆ. ಆಸ್ತಿ ವರ್ಗಾವಣೆಗೆ ಸಂಬಂಧಿಸಿ ಕಾನೂನು ಪ್ರಕ್ರಿಯೆ ಮುಗಿದಿದ್ದು ಅಧಿಕೃತವಾಗಿ 'ಸೆರೆನಿಟಿ' ಬಂಗಲೆ ಈಗ ರಶ್ಮಿಕಾ ಹೆಸರಿನಲ್ಲಿದೆ. ಅಂದಹಾಗೆ ಮದನ್ ಹಾಗೂ ಸುಮನ್ ದಂಪತಿಗೆ ಮತ್ತೊಬ್ಬಳು ಮಗಳು ಇದ್ದಾಳೆ.

ಕೆಲ ವರ್ಷಗಳಿಂದ ವಿಜಯ್ ಹಾಗೂ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದರು. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬರ್ತಿದ್ದರು. ಆದರೆ ಪರೋಕ್ಷವಾಗಿ ಸುಳಿವು ಕೊಡುತ್ತಲೇ ಇದ್ದರು. ಕಳೆದ ವರ್ಷ ಗುಟ್ಟಾಗಿ ಇಬ್ಬರ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಫೆಬ್ರವರಿ 26ಕ್ಕೆ ಮದುವೆ ಎಂದು ಗುಲ್ಲಾಗಿತ್ತು. ಆದರೂ ತುಟಿ ಬಿಚ್ಚದೇ ಜೋಡಿ ಸುಮ್ಮನಿತ್ತು. ತೆರೆಮರೆಯಲ್ಲಿ ಮದುವೆ ತಯಾರಿ ನಡೆದಿತ್ತು. ಅಂತಿಮವಾಗಿ ಮದುವೆಗೆ ಎರಡು ದಿನ ಬಾಕಿ ಇದ್ದಾಗ ಈ ವಿಚಾರವನ್ನು ಜೋಡಿ ಹಂಚಿಕೊಂಡಿತ್ತು.

'ಗೀತಾಗೋವಿಂದಂ' ಚಿತ್ರದಲ್ಲಿ ಜೋಡಿ ಮೊದಲ ಬಾರಿಗೆ ನಟಿಸಿದ್ದರು. ಬಳಿಕ 'ಡಿಯರ್ ಕಾಮ್ರೆಡ್' ಚಿತ್ರಕ್ಕಾಗಿ ಜೊತೆಯಾಗಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಲವ್ ಆಗಿತ್ತು. ಮೊದಲು ರಶ್ಮಿಕಾ ಪ್ರಪೋಸ್ ಮಾಡಿದ್ದರು ಎನ್ನಲಾಗ್ತಿದೆ. ಆ ಬಳಿಕ ವಿಜಯ್ ಕುಟುಂಬಕ್ಕೂ ಕೊಡಗಿನ ಚೆಲುವೆ ಹತ್ತಿರವಾಗಿದ್ದರು. ಆಗಾಗ್ಗೆ ಅವರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ರು, ಅಲ್ಲೇ ಹಬ್ಬಗಳನ್ನು ಆಚರಿಸುತ್ತಿದ್ದರು. ಅಂತಿಮವಾಗಿ ಮದುವೆ ಬಂಧದ ಮೂಲಕ ಇಬ್ಬರೂ ತಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.

ಈಗಾಗಲೇ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಜೋಡಿಯನ್ನು ಮತ್ತೆ ತೆರೆಮೇಲೆ ಜೊತೆಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ರಣಬಾಲಿ' ಎಂಬ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ವರ್ಷವೇ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ರಶ್ಮಿಕಾ ನಟನೆಯ 'ಕಾಕ್‌ಟೇಲ್- 2' ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X