»   » ಕೊನೆಗೂ ಕ್ಷಮೆ ಕೇಳಿದ ರಶ್ಮಿಕಾ: ವಿವಾದದ ಅಸಲಿ ಕಾರಣ ಬಹಿರಂಗ

ಕೊನೆಗೂ ಕ್ಷಮೆ ಕೇಳಿದ ರಶ್ಮಿಕಾ: ವಿವಾದದ ಅಸಲಿ ಕಾರಣ ಬಹಿರಂಗ

Posted By:
Subscribe to Filmibeat Kannada

ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರವರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ರಶ್ಮಿಕಾ ವಿಚಾರದಲ್ಲಿ ಅಭಿಮಾನಿಗಳಿಗೆ ಯಶ್ ಕೊಟ್ಟ ಸಂದೇಶ

ಸಂದರ್ಶನವೊಂದರಲ್ಲಿ ಯಶ್ ಬಗ್ಗೆ ರಶ್ಮಿಕಾ 'ಮಿಸ್ಟರ್ ಶೋ ಆಫ್' ಅಂತ ಹೇಳಿಕೆ ನೀಡಿದ್ದು ನಿಜ. ಆದರೆ ಆದರ ಹಿಂದಿನ ಅಸಲಿ ವಿಚಾರವನ್ನು ಈಗ ರಶ್ಮಿಕಾ ಬಿಚ್ಚಿಟ್ಟಿದ್ದಾರೆ. ನಿಮ್ಮ ಭಾವನೆಗಳಗೆ ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಅಂತ ಹೇಳಿರುವ ರಶ್ಮಿಕಾ ವಿವಾದದ ಕಾರಣ ಮತ್ತು ಯಶ್ ಬಗ್ಗೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

7 ತಿಂಗಳ ಹಿಂದೆ

''ಈ ಕಾರ್ಯಕ್ರಮದ ಚಿತ್ರೀಕರಣ ನಡೆದದ್ದು ಏಳು ತಿಂಗಳ ಹಿಂದೆ. 'ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆಯ ಟೈಮ್ ನಲ್ಲಿ ಈ ಸಂದರ್ಶನ ಪ್ರಸಾರ ಆಗಿತ್ತು. ಆದರೆ ಇತ್ತೀಚಿಗೆ ಅದನ್ನು ಮತ್ತೆ ಪ್ರಸಾರ ಮಾಡಲಾಗಿತ್ತು'' - ರಶ್ಮಿಕಾ ಮಂದಣ್ಣ, ನಟಿ

ಎಲ್ಲವನ್ನೂ ಕಡೆಗಣಿಸಲಾಗಿದೆ

''ವಾಸ್ತವವಾಗಿ, ನಾನು ಯಶ್ ಸರ್ ಬಗ್ಗೆ ಅನೇಕ ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದೇನೆ. ಅವರ ಪ್ರತಿಭೆ ನನಗೂ ಸೇರಿದಂತೆ ಎಲ್ಲರಿಗೂ ಸ್ಫೂರ್ತಿ ನೀಡುವಂಥದ್ದು ಎಂದು ಭಾವಿಸಿದ್ದೇನೆ. ಆದರೆ ಮಾಧ್ಯಮವು ಎಲ್ಲವನ್ನೂ ಕಡೆಗಣಿಸಿ ಆ ಒಂದೇ ಒಂದು ಮಾತನ್ನು ಆಯ್ಕೆ ಮಾಡಿದೆ'' - ರಶ್ಮಿಕಾ ಮಂದಣ್ಣ, ನಟಿ

ರಾಕಿಂಗ್ ಸ್ಟಾರ್ ಯಶ್ 'ಶೋ ಆಫ್' ಅಲ್ಲಾ, 'ಶೋ ಮ್ಯಾನ್'.!

ತಮಾಷೆಯ ಭಾಗ

''ನನ್ನದು ಒಂದು ಹೇಳಿಕೆಯಲ್ಲ. ಅದು Rapid Fire ಆಟವಾಗಿತ್ತು ಅಷ್ಟೇ. ಅದೇ ಕಾರ್ಯಕ್ರಮದಲ್ಲಿ ನಾನು 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಹೆಚ್ಚು ಖುಷಿ ಪಟ್ಟ ಸಿನಿಮಾ ಅಂತ ಹೇಳಿದ್ದೆ. ಆದರೆ, ಅದನ್ನು ಬಿಟ್ಟು ಕಾರ್ಯಕ್ರಮದ ಒಂದು ತಮಾಷೆಯ ಭಾಗವನ್ನು ಮಾತ್ರ ಪರಿಗಣಿಸಲಾಗಿದೆ'' - ರಶ್ಮಿಕಾ ಮಂದಣ್ಣ, ನಟಿ

ರಶ್ಮಿಕಾ ಮಂದಣ್ಣ ಮಾತಿಗೆ ಕೆಂಡ ಕಾರುತ್ತಿರುವ ಯಶ್ ಅಣ್ತಮ್ಮಂದಿರು

ಹಿಂದಿನ ಸಂದರ್ಶನ ನೋಡಿ

''ಈ ಹಿಂದಿನ ಕೆಲ ಸಂದರ್ಶನ ಮತ್ತು ನನ್ನ ಫೇಸ್ ಬುಕ್ ಲೈವ್ ನೋಡಿ. ಅದರಲ್ಲಿ ಎಷ್ಟೊ ಬಾರಿ ನಾನು ಯಶ್ ಸರ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದೇನೆ. ಅವರ ಜೊತೆ ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ್ದೇನೆ''- ರಶ್ಮಿಕಾ ಮಂದಣ್ಣ, ನಟಿ

ಮಾಧ್ಯಮದ ಬಗ್ಗೆ

'' ನಾನು ಉದ್ಯಮಕ್ಕೆ ಪ್ರವೇಶಿಸಿದಾಗ ಮಾಧ್ಯಮವು ಹೆಚ್ಚು ಬೆಂಬಲವನ್ನು ನೀಡಿದೆ. ಅದೇ ಮಾಧ್ಯಮಗಳು ಈ ವಿವಾದವನ್ನು ಹೆಚ್ಚು ಮಾಡಬಾರದು ಎಂದು ಹೇಳುತ್ತೇನೆ'' - ರಶ್ಮಿಕಾ ಮಂದಣ್ಣ, ನಟಿ

ಒಂದೇ ಒಂದು ಮಾತಿಗೆ ರಶ್ಮಿಕಾ ಮಂದಣ್ಣಗೆ ಇಂತಹ ಶಿಕ್ಷೆನಾ!?

ನೋವಾಗಿದ್ದರೇ ಕ್ಷಮಿಸಿ

''ನಿಮ್ಮ ಭಾವನೆಗಳನ್ನು ನಾನು ನೋಯಿಸಿದರೆ ಕ್ಷಮಿಸಿ. ಈ ಘಟನೆಯಿಂದ ನಾನು ತುಂಬಾ ಅಸಮಾಧಾನ ಮತ್ತು ಗೊಂದಲಕ್ಕೀಡಾಗಿದ್ದೇನೆ. ನಿಮ್ಮ ಆಶೀರ್ವಾದ ಸದಾ ಇರಲಿ.'' - ರಶ್ಮಿಕಾ ಮಂದಣ್ಣ, ನಟಿ

'ಡವ್ ರಾಣಿ' ರಶ್ಮಿಕಾ ವಿರುದ್ಧ ಸಿಟ್ಟಿಗೆದ್ದ ಟ್ರೋಲ್ ಹುಡುಗರು

English summary
Kannada Actress Rashmika Mandanna has taken her Facebook account to give Clarification About statement on Yash

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada