'ಯಜಮಾನ'ನ ಜೊತೆ ಮಿಂಚುತ್ತಿದೆ ಯುವರಾಣಿ ರಶ್ಮಿಕಾ ಕಟೌಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಇಂದು ಜಗತ್ತಿನಾದ್ಯಂತ ತೆರೆಕಂಡಿದೆ. ದರ್ಶನ್ ಸಿನಿಮಾ ಅಂದ್ಮೇಲೆ ಥಿಯೇಟರ್ ಬಳಿ ಸಂಭ್ರಮ ಜೋರಾಗಿಯೇ ಇರುತ್ತೆ.

60, 70, 80 ಅಡಿ ಎತ್ತರ ಕಟೌಟ್ ಗಳು ಚಿತ್ರಮಂದಿರದ ಎದುರು ರಾರಾಜಿಸುತ್ತಿದೆ. ವಿಶೇಷ ಅಂದ್ರೆ ಕೆಲವು ಥಿಯೇಟರ್ ಬಳಿ ದರ್ಶನ್ ಜೊತೆಗೆ ಅವರ ಮಗ ವಿನಿಶ್ ಕಟೌಟ್ ಗಳನ್ನ ಕೂಡ ಹಾಕಲಾಗಿದೆ.

ಇದೆಲ್ಲಾ ಡಿ ಬಾಸ್ ಸಿನಿಮಾ ಅಂದ್ಮೇಲೆ ಸಾಮಾನ್ಯ. ಆದ್ರೆ, ಇದೇ ಮೊದಲ ಬಾರಿಗೆ ಸ್ಟಾರ್ ನಟರ ಚಿತ್ರ ರಿಲೀಸ್ ವೇಳೆ ಆ ಚಿತ್ರದ ನಾಯಕಿಯ ಕಟೌಟ್ ನಿಲ್ಲಿಸಲಾಗಿದೆ. ಹೌದು, ಯಜಮಾನ ಸಿನಿಮಾದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ ಕಟೌಟ್ ಕೂಡ ಚಿತ್ರಮಂದಿರದ ಎದುರು ನಿಲ್ಲಿಸಲಾಗಿದೆ.

ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯಾವ ಥಿಯೇಟರ್ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಬಟ್, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸ್ಟಾರ್ ನಟರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ನಟಿಗೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಕಟೌಟ್ ಹಾಕಲಾಗಿದೆ ಎಂಬುದು ವಿಶೇಷ.

Rashmika mandanna cutout in front of yajamana theater

ಇದಕ್ಕೂ ಮುಂಚೆ ರಾಗಿಣಿ ದ್ವಿವೇದಿ, ಮಾಲಾಶ್ರೀ, ಪ್ರಿಯಾಂಕಾ ಉಪೇಂದ್ರ ಅಂತಹ ನಟಿಯರ ಕಟೌಟ್ ಗಳನ್ನ ಚಿತ್ರಮಂದಿರದ ಬಳಿ ನೋಡಿದ್ವಿ. ಬಟ್, ಅದೆಲ್ಲ ಮಹಿಳಾ ಪ್ರಧಾನ ಸಿನಿಮಾಗಳಾಗಿದ್ದು, ಆ ಚಿತ್ರಕ್ಕೆ ಆ ನಟಿಯರೇ ಪಾತ್ರವೇ ಮುಖ್ಯವಾಗಿತ್ತು.

ಬಟ್, ಯಜಮಾನ ಚಿತ್ರದಲ್ಲಿ ದರ್ಶನ ಹೀರೋ. ದೇವರಾಜ್, ಧನಂಜಯ್, ರವಿಶಂಕರ್ ಅಂತಹ ನಟರಿದ್ದಾರೆ. ಆದ್ರೆ, ರಶ್ಮಿಕಾ ಮಂದಣ್ಣ ಅಭಿಮಾನಿಗಳು ತಮ್ಮ ನಟಿಗೆ ಈ ರೀತಿಯಾಗಿ ಸ್ವಾಗತ ನೀಡಿರುವುದು ನಿಜಕ್ಕೂ ಹೊಸ ಬೆಳವಣಿಗೆ.

More from Filmibeat

English summary
Challenging star darshan starrer yajamana movie has released all over world today. Fans have been erected rashmika cutout in front of theater.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X