ಫುಡ್ ಡೆಲಿವರಿ ಹುಡುಗಿಯಾಗಿ ಕೆಲಸ ಮಾಡಿದ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ನಟನೆ ಮೂಲಕ ಉತ್ತುಂಗುದಲ್ಲಿ ಇರುವ ನಟಿ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಸಾಕಷ್ಟು ಬ್ಯುಸಿಯಾಗಿರುವ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಹೆಸರು ಹೆಚ್ಚು ಹೆಸರುವಾಸಿ ಯಾಗಿದೆ.

ಹೀಗಾಗಿ ರಶ್ಮಿಕಾ ಮಂದಣ್ಣ ಸಿನಿಮಾ ನಟನೆ ಜೊತೆ ಜೊತೆಗೆ ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆಯುತ್ತಿದ್ದಾರೆ. ರಶ್ಮಿಕಾ ಹೆಸರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಹಿನ್ನೆಲೆ ರಶ್ಮಿಕಾ ಅವರನ್ನು ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು , ದೊಡ್ಡ ದೊಡ್ಡ ಕಂಪೆನಿಗಳು ರಶ್ಮಿಕಾ ಹೆಸರನ್ನು ಬಳಸಿಕೊಂಡು ತಮ್ಮ ಬ್ರ್ಯಾಂಡನ್ನು ವೃದ್ಧಿ ಪಡಿಸಲು ಮುಂದಾಗಿವೆ.

ಹೀಗಾಗಿ ಸದ್ಯ ರಶ್ಮಿಕಾ ಮಂದಣ್ಣ ಸಿನಿಮಾದ ಜೊತೆ ಜೊತೆಗೆ ಅದೆಷ್ಟೋ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳೊದು ಅಲ್ಲದೇ ಸಾಕಷ್ಟು ಉತ್ಮನ್ನಗಳಿಗೂ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಇತ್ತೀಚೆಗೆ ಪ್ರತಿಷ್ಠಿತ ಕಂಪೆನಿ ಮೆಕ್ ಡೋನಾಲ್ಡ್ ಕಂಪನಿಗೂ ಕೂಡ ರಶ್ಮಿಕಾ ಅಂಬಾಸಿಡರ್ ಆಗಿದ್ದು ಎಲ್ಲರಿಗೂ ತಿಳಿದಿದೆ. ಅಮೇರಿಕಾ ಮೂಲದ ಈ ಕಂಪೆನಿ ರಶ್ಮಿಕಾ ಅವರನ್ನು ಬಳಸಿಕೊಂಡು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದು, ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿವೆ. ಅದೇನೂ ಅಂತ ಮುಂದೆ ಓದಿ.

ವಿವಿಧ ಪ್ರಯೋಗಗಳಿಗೆ ಮೂಂದಾಗುತ್ತಿದ್ದಾರೆ ರಶ್ಮಿಕಾ

ವಿವಿಧ ಪ್ರಯೋಗಗಳಿಗೆ ಮೂಂದಾಗುತ್ತಿದ್ದಾರೆ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಇತ್ತೀಚೆಗಷ್ಟೆ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಪುಷ್ಪ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳು ರಶ್ಮಿಕಾ ಕೈಯಲ್ಲಿ ಇರೋದು ಗೊತ್ತೆ ಇದೆ.ಸಿನಿಮಾದಿಂದ ಫ್ರೀ ಸಿಕ್ಕ ಸಮಯದಲ್ಲಿ ಜಾಹೀರಾತು ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇತ್ತೀಚೆಗೆ ಫ್ರೀ ಮಾಡಿಕೊಂಡು ಮೆಕ್ ಡೋನಾಲ್ಡ್ ಬೈಕ್ ಏರಿ, ಅವರದ್ದೆ ಗಾಡಿ ಹತ್ತಿ ಫುಡ್ ಡೆಲಿವರಿ ಹುಡುಗಿಯ ಅವತಾರ ಎತ್ತಿದ್ದಾರೆ. ಅಲ್ಲದೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಊಟ ಆರ್ಡರ್ ಮಾಡಿದವರಿಗೆ ರಶ್ಮಿಕಾ ಆಶ್ಚರ್ಯ ಮೂಡಿಸಿದ್ದಾರೆ.

ಗ್ರಾಹಕರಿಗೆ ತಿಳಿಯದಂತೆ ಊಟ ನೀಡಿದ ರಶ್ಮಿಕಾ

ಗ್ರಾಹಕರಿಗೆ ತಿಳಿಯದಂತೆ ಊಟ ನೀಡಿದ ರಶ್ಮಿಕಾ

ಹೌದು. ಇದು ಮೆಕ್ ಡೊನಾಲ್ಡ್‌ನ ಪ್ರಚಾರದ ಒಂದು ಭಾಗವಾಗಿತ್ತು. ಮೆಕ್ ಡೊನಾಲ್ಡ್‌ನಲ್ಲಿ ದಿ ರಶ್ಮಿಕಾ ಮೀಲ್ ಅಂತಲೇ ಹೆಸರಿರುವ ಊಟ ದೊರಕುತ್ತಿದ್ದು, ಅದನ್ನು ಹೇಗೆ ತಿನ್ನೋದು ಅಂತಲೂ ಈ ಹಿಂದೆ ರಶ್ಮಿಕಾ ಜಾಹೀರಾತು ಮೂಲಕ ತಿಳಿಸಿದ್ದರು. ಈಗ ಮೆಕ್ ಡೊನಾಲ್ಡ್‌ ಗಾಡಿ ಹತ್ತು ಮುಖವನ್ನು ಮಾಸ್ಕ್‌ನಲ್ಲಿ ಮುಚ್ಚಿ ದಿ ರಶ್ಮಿಕಾ ಮೀಲ್ ಅನ್ನು ಆರ್ಡರ್ ಮಾಡಿದ್ದವರಿಗೆ ಸ್ವತಃ ರಶ್ಮಿಕಾ ಅವರೇ ಫುಡ್ ಡೆಲಿವರಿ ಮಾಡಿ ಗ್ರಾಹಕರಿಗೆ ಖುಷಿ ನೀಡಿದ್ದಾರೆ.

ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಮ್ಯಾಕ್ ಡೋನಾಲ್ಡ್ ಡೆಲಿವರಿ ಗರ್ಲ್ ಆಗಿ ಮಾರ್ಪಟ್ಟಿದ್ದರು. ಮ್ಯಾಕ್ ಡೋನಾಲ್ಡ್ ಕಂಪನಿಯ ಬಟ್ಟೆಯಿಂದ ಹಿಡಿದು, 2 ವೀಲರ್ ವಾಹನ, ಹೆಲ್ಮೆಟ್ ಧರಿಸಿ ಫುಡ್ ಡೆಲಿವರಿ ಮಾಡಿದ್ದಾರೆ. ಈ ಪ್ರತಿ ಕ್ಷಣವನ್ನು ಹಿಡನ್ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಇದು ಮೆಕ್ ಡೋನಾಲ್ಡ್ ಅವರ ಮತ್ತೊಂದು ಜಾಹಿರಾತಿನ ಪ್ರಯೋಗವಾಗಿದ್ದು, ರಶ್ಮಿಕಾ ಅಭಿಮಾನಿಗಳಿಗೆ ಹಿಡಿಸಿದೆ. ಸ್ವತಃ ಈ ವೀಡಿಯೋವನ್ನು ಮೆಕ್ ಡೋನಾಲ್ಡ್ ತನ್ನ ಇನ್‌ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು, ರಶ್ಮಿಕಾ ಕೂಡ ಅದನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ದಿ ರಶ್ಮಿಕಾ ಮೀಲ್ ಬಗ್ಗೆ ರಶ್ಮಿಕಾ ಗ್ರಾಹಕರಲ್ಲಿ ಪ್ರಶ್ನೆ

ದಿ ರಶ್ಮಿಕಾ ಮೀಲ್ ಬಗ್ಗೆ ರಶ್ಮಿಕಾ ಗ್ರಾಹಕರಲ್ಲಿ ಪ್ರಶ್ನೆ

ಇನ್ನು ನಟಿ ರಶ್ಮಿಕಾ ಮಂದಣ್ಣ ಒಂದು ಮನೆಗೆ ತೆರಳಿ ಫುಡ್ ನೀಡುವ ಸಂದರ್ಭದಲ್ಲಿ ನೀವು ರಶ್ಮಿಕಾ ಮಂದಣ್ಣ ಅಲ್ಲವಾ ಎಂದು ಗ್ರಾಹಕರು ಕೇಳುವ ಮೂಲಕ ರಶ್ಮಿಕಾರನ್ನು ಕಂಡು ಹಿಡಿದ್ದಿದ್ದಾರೆ. ತದನಂತರ ಆ ಮನೆಯವರು ಸಾಕಷ್ಟು ಆಶ್ಚರ್ಯ ಭರಿತರಾಗಿದ್ದು, ರಶ್ಮಿಕಾ ಬಳಿ ಫೋಟೊ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ. ಅವರೊಂದಿಗೆ ರಶ್ಮಿಕಾ ಮಂದಣ್ಣ ಕೂಡ ಮಾತನಾಡಿದ್ದು, ದಿ ರಶ್ಮಿಕಾ ಮೀಲ್ ಬಗ್ಗೆ ಪ್ರಶ್ನೆಗಳನ್ನು ಮಾಡಿದ್ದಾರೆ.

ಇದೊಂತರಾ ಫನ್ ಆಗಿತ್ತು ಎಂದ ರಶ್ಮಿಕಾ ಮಂದಣ್ಣ !

ಇದೊಂತರಾ ಫನ್ ಆಗಿತ್ತು ಎಂದ ರಶ್ಮಿಕಾ ಮಂದಣ್ಣ !

ಒಂದಷ್ಟು ಸಮಯ ಅಲ್ಲೆ ಕಳೆದಿರುವ ರಶ್ಮಿಕಾ, ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ನನ್ನ ಮೀಲ್ ಅನ್ನು ಹೀಗೆ ಅಚ್ಚರಿ ಆಗಿ ತೆಗೆದುಕೊಂಡು ಹೋಗಿರುವುದಕ್ಕೆ ನನಗೆ ಖುಷಿಯಾಗಿದೆ. ಇದು ಒಂಥರಾ ಫನ್ ಆಗಿತ್ತು, ಗ್ರಾಹಕರಿಂದ ಈ ರೀತಿಯ ಪ್ರತಿಕ್ರಿಯೇ ನಾನು ಎದುರು ನೋಡಿರಲಿಲ್ಲಾ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ. ಈ ರೀತಿಯ ಮೆಕ್ ಡೋನಾಲ್ಡ್ ಪ್ರಚಾರ ಒಂದು ರೀತಿಯಾಗಿ ವಿಭಿನ್ನವಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ನಮ್ಮ ಮನೆಗೆ ರಶ್ಮಿಕಾ ಬರಬಾರದಿತ್ತಾ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Rashmika Mandanna delivered McDonald’s 'The Rashmika Meals' to customer. Customers get surprise
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X