ಕರಣ್ ಬರ್ತ್‌ಡೇ ಪಾರ್ಟಿ: ಥೈ ಸ್ಲಿಟ್ ಡ್ರೆಸ್‌ನಿಂದ ಪೇಚಿಗೆ ಸಿಲುಕಿದ ರಶ್ಮಿಕಾ ಮಂದಣ್ಣ!

ಬಾಲಿವುಡ್ ಶೋ ಮ್ಯಾನ್ ನಿರ್ಮಾಪಕ ಕರಣ್ ಜೋಹರ್ ಹುಟ್ಟು ಹಬ್ಬ ಅದ್ದೂರಿಯಾಗಿ ನೆರವೇರಿದೆ. ಕರಣ್ ಜೋಹರ್ 50ನೇ ವರ್ಷದ ಹುಟ್ಟು ಹಬ್ಬ ಆದ ಕಾರಣ ಅದ್ಧೂರಿಯಾಗಿಯೇ ಸಂಭ್ರಮಾಚರಣೆ ನೆರವೇರಿದೆ.

ಕರಣ್ ಜೋಹರ್ ಬಾಲಿವುಡ್‌ ಸಿನಿಮಾರಂಗವನ್ನು ಹೊತ್ತು ಕೊಂಡಿರುವ ಆಧಾರ ಸ್ತಂಭಗಳಲ್ಲಿ ಒಬ್ಬರು. ಹಾಗಾಗಿ ಕರಣ್ ಹುಟ್ಟು ಹಬ್ಬ ಅಂದರೆ ಅಲ್ಲಿ ಬಾಲಿವುಡ್‌ನ ದೊಡ್ಡ, ದೊಡ್ಡ ಸ್ಟಾರ್‌ಗಳು ಇದ್ದೇ ಇರುತ್ತಾರೆ.

ಅಂತೆಯೇ ಬಾಲಿವುಡ್ ಜೊತೆಗೆ ಈ ಬಾರಿಗೆ ಸೌತ್‌ನ ಕೆಲವು ಕಲಾವಿದರು ಕರಣ್ ಜೋಹರ್ ಹುಟ್ಟಿ ಹಬ್ಬದಲ್ಲಿ ಭಾಗಿ ಆಗಿದ್ದರು. ಅದರಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಆದರೆ ಸ್ಟೈಲಿಶ್ ಬಟ್ಟೆ ತೊಟ್ಟಿದ್ದ ರಶ್ಮಿಕಾ ಮಂದಣ್ಣ ಪೇಚಿಗೆ ಸಿಲುಕಿದ್ದರು.

Recommended Video

ತನ್ನ ವಿಚಿತ್ರ ಬಟ್ಟೆಯಿಂದಲೇ ಪೇಚಿಗೆ ಸಿಲುಕಿದ ನ್ಯಾಷನಲ್ ಕ್ರಶ್ | #RashmikaMandanna #KaranJohar

ಕರಣ್ ಜೋಹರ್ ಪಾರ್ಟಿಯಲ್ಲಿ ರಶ್ಮಿಕಾ ಭಾಗಿ!

ಕರಣ್ ಜೋಹರ್ ಪಾರ್ಟಿಯಲ್ಲಿ ರಶ್ಮಿಕಾ ಭಾಗಿ!

ಕರಣ್ ಜೋಹರ್ ಹುಟ್ಟು ಹಬ್ಬದ ಆಚರಣೆಯಲ್ಲಿ ಸದಾ ಬಾಲಿವುಡ್‌ನ ಬಿಗ್ ಸ್ಟಾರ್‌ಗಳು ಹಾಜರಿ ಹಾಕುತ್ತಾರೆ. ಆದರೆ ಈ ಬಾರಿ ಸೌತ್ ಕಲಾವಿದರು ಭಾಗಿ ಆಗಿರುವುದು ಮಾತ್ರ ವಿಶೇಷವಾಗಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಇಷ್ಟು ಬೇಗ ರಶ್ಮಿಕಾ ಮಂದಣ್ಣ ಬಾಲಿವುಡ್ ಮಂದಿಯಲ್ಲಿ ಒಂದಾಗಿರುದು ಖುಷಿಯ ವಿಚಾರವೇ. ಸ್ಟೈಲಿಶ್ ಆಗಿ ಕರಣ್ ಬರ್ತ್ ಡೇ ಬರ್ತ್ ಡೇ ಪಾರ್ಟಿಯಲ್ಲಿ ರಶ್ಮಿಕಾ ಮಿಂಚಿದ್ದಾರೆ.

ಥೈ ಸ್ಲಿಟ್ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ!

ಥೈ ಸ್ಲಿಟ್ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ!

ಆದರೆ ರಶ್ಮಿಕಾಗಿಂತಲೂ, ರಶ್ಮಿಕಾ ತೊಟ್ಟ ಉಡುಪಿನ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ರಶ್ಮಿಕಾ ತಾನು ತೊಟ್ಟ ಬಟ್ಟೆಯಿಂದ ಮುಜುಗರಕ್ಕೆ ಒಳಗಾಗಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ರಶ್ಮಿಕಾ ಕಪ್ಪು ಬಣ್ಣದ ಥೈ ಸ್ಲಿಟ್ ಡ್ರೆಸ್ ತೊಟ್ಟಿದ್ದರು. ಅಂದರೆ ಡ್ರೆಸ್ ಕಾಲಿನ ತನಕ ಉದ್ದಾ ಇದ್ದು, ಒಂದು ಕಾಲಿನ ತೊಡೆ ಕಾಣುವ ಹಾಗೆ ವಿನ್ಯಾಸ ಗೊಂಡಿದ್ದರೆ ಅದನ್ನು ಥೈ ಸ್ಲಿಟ್ ಡ್ರೆಸ್ ಎಂದು ಕರೆಯಲಾಗುತ್ತದೆ. ಈ ರೀತಿ ಉಡುಪು ತೊಟ್ಟಿದ್ದರು ರಶ್ಮಿಕಾ. ಆದರೆ ಈ ಡ್ರೆಸ್ ಕೊಂಚ ಹೆಚ್ಚೆ ಓಪನ್ ಇದ್ದ ಕಾರಣ ರಶ್ಮಿಕಾ ಆಗಾಗ ಬಟ್ಟೆಯನ್ನು ಸರಿ ಮಾಡಿಕೊಳ್ಳುತ್ತಾ ಇದ್ದರು. ಇದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸ್ಟೈಲಿಶ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!

ಸ್ಟೈಲಿಶ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುವುದು ಹೊಸದೇನಲ್ಲ, ಏನೇ ಮಾಡಿದ್ರು ಒಂದಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಾರೆ. ಇದನ್ನು ಪಕ್ಕಕ್ಕೆ ಇಟ್ಟು ನೋಡಿದರೆ. ಕರಣ್ ಬರ್ತ್ ಡೇ ಪಾರ್ಟಿಯಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ, ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ.

ರಶ್ಮಿಕಾ ಸಿನಿಮಾಗೆ ಕರಣ್ ಬಂಡವಾಳ?

ರಶ್ಮಿಕಾ ಸಿನಿಮಾಗೆ ಕರಣ್ ಬಂಡವಾಳ?

ಕನ್ನಡದ ಮೂಲಕ ತಮ್ಮ ಸಿನಿಮಾ ಜರ್ನಿ ಆರಂಭ ಮಾಡಿದ ನಟಿ ರಶ್ಮಿಕಾ ಮಂದಣ್ಣ ಸೌತ್ ಚಿತ್ರಗಳನ್ನು ಒಂದು ಸುತ್ತಿ ಹಾಕಿ, ಈಗ ಬಾಲಿವುಡ್‌ನಲ್ಲಿ ಬ್ಯುಸಿ ಆಗುತ್ತಾ ಇದ್ದಾರೆ. ಹಿಂದಿಯಲ್ಲೂ ಈಗಾಗಲೇ 2 ಸಿನಿಮಾಗಳನ್ನು ಮಾಡಿ ಮುಗಿಸಿದ್ದಾರೆ. ಇನ್ನೇನಿದ್ದರು ಹೊಸ ಸಿನಿಮಾ ಪ್ರಕಟ ಮಾಡವುದು ಮಾತ್ರ ಬಾಕಿ ಇದೆ. ರಶ್ಮಿಕಾ ಮುಂದಿನ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಾ ಇದೆ.

More from Filmibeat

English summary
Rashmika Mandanna Embarrassed by Wearing Thigh Slit dress At Karan Johar Birthday Party,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X