ದೇವರಕೊಂಡ ಜೊತೆ ಸಿನಿಮಾ ಮಾಡ್ಬೇಡ ಎಂದು ಮನೆಯವರೇ ನಿರಾಕರಿಸಿದ್ದರು: ರಶ್ಮಿಕಾ
Recommended Video
ಸೌತ್ ಇಂಡಸ್ಟ್ರಿಯಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ. 'ಗೀತಾ ಗೋವಿಂದಂ' ಚಿತ್ರದಲ್ಲಿ ಮೊದಲ ಸಲ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ಕೆಮಿಸ್ಟ್ರಿ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ಇವರಿಬ್ಬರ ಜೋಡಿ ನೋಡಿದ ಚಿತ್ರರಸಿಕರು ಫುಲ್ ಫಿದಾ ಆಗಿದ್ದರು. ಗೀತಾ ಮತ್ತು ಗೋವಿಂದಂ ಪೇರ್ ಸಖತ್ ಆಗಿದೆ. ನಿಜ ಜೀವನದಲ್ಲೂ ಇವರಿಬ್ಬರು ಒಂದಾದ್ರೆ ಸೂಪರ್ ಎಂದು ಹೇಳುವಷ್ಟು ಖುಷಿಯಾಗಿದ್ದರು.
'ಗೀತಾ ಗೋವಿಂದಂ' ಕ್ಲೈಮ್ಯಾಕ್ಸ್ ನಲ್ಲಿ ವಿಜಯ್ ಮತ್ತು ರಶ್ಮಿಕಾ ನಡುವೆ ಲಿಕ್ ಲಾಕ್ ಸೀನ್ ಇತ್ತು. ಇದು ಬಾರಿ ಸದ್ದು ಮಾಡಿತ್ತು. ಅಷ್ಟರಲ್ಲೇ ರಶ್ಮಿಕಾ ಖಾಸಗಿ ಜೀವನದಲ್ಲಿ ಬೇರೆಯದ್ದೇ ಘಟನೆ ನಡೆದು ಹೋಗಿತ್ತು. ಕನ್ನಡದ ನಟ ರಕ್ಷಿತ್ ಶೆಟ್ಟಿ ಜೊತೆಗಿನ ಆಗಿದ್ದ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದಕ್ಕೆ ವಿಜಯ್ ದೇವರಕೊಂಡ ಕಾರಣ, ಅವರ ಜೊತೆಗೆ ಹೆಚ್ಚು ಒಡನಾಟ ಹೊಂದಿದ್ದು ಇದಕ್ಕೆ ಪರೋಕ್ಷವಾಗಿ ಕಾರಣವಾಯ್ತು ಎಂದು ಮಾತನಾಡಿಕೊಂಡರು.
ಇದಾದ ಬಳಿಕ ಮತ್ತೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ 'ಡಿಯರ್ ಕಾಮ್ರೇಡ್' ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲೂ ಆ ಕೆಮಿಸ್ಟ್ರಿ ಮುಂದುವರಿದಿದೆ ಎಂಬುದು ಟ್ರೈಲರ್, ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತೆ. ಇದೆಲ್ಲ ನೋಡಿದ ಮೇಲೆ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಬಗ್ಗೆ ಮತ್ತಷ್ಟು ಗಾಸಿಪ್ ಗಳು ಚರ್ಚೆ ಆದವು. ಇಷ್ಟೆಲ್ಲಾ ಆಗುತ್ತೆ ಎಂದು ತಿಳಿದಿದ್ದ ಕೆಲವರು ರಶ್ಮಿಕಾಗೆ ಕಿವಿಮಾತು ಹೇಳಿದ್ದರಂತೆ. ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡ್ಬೇಡ ಎಂದು ಎಚ್ಚರಿಸಿದ್ದರಂತೆ. ಅಷ್ಟಕ್ಕೂ ಯಾರದು? ಮುಂದೆ ಓದಿ....

ವಿಜಯ್ ಜೊತೆ ಇನ್ನೊಂದು ಸಿನಿಮಾ ಬೇಡ
'ಗೀತಾ ಗೋವಿಂದಂ' ಸಿನಿಮಾ ಮಾಡಿ ದೊಡ್ಡ ಸಕ್ಸಸ್ ಕಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಬಗ್ಗೆ ಪರ್ಸನಲ್ ಆಗಿಯೂ ಕೆಲವು ಗಾಸಿಪ್ ಗಳು ಹರಿದಾಡಿದವು. ಈ ಮಧ್ಯೆ ರಶ್ಮಿಕಾ ನಿಶ್ಚಿತಾರ್ಥವೂ ಮುರಿದುಬಿದ್ದಿತ್ತು. ಇದರ ಬಗ್ಗೆ ಮೊದಲೇ ಅರಿತುಕೊಂಡಿದ್ದ ರಶ್ಮಿಕಾ ಕುಟುಂಬಸ್ಥರು ''ವಿಜಯ್ ದೇವರಕೊಂಡ ಜೊತೆ ಇನ್ನೊಂದು ಸಿನಿಮಾ ಬೇಡ'' ಎಂದು ಕಿವಿಮಾತು ಹೇಳಿದ್ದರಂತೆ.

ನಾನು ಮಾಡಬೇಕು ಎಂದು ನಿರ್ಧರಿಸಿದೆ
''ಅಮ್ಮ, ಅಪ್ಪ ನನ್ನ ಕುಟುಂಬದವರು ದೇವರಕೊಂಡ ಜೊತೆ ಇನ್ನೊಂದು ಸಿನಿಮಾ ಯಾಕೆ ಮಾಡ್ತೀಯಾ, ಬೇಡ ಎಂದು ನಿರಾಕರಿಸಿದರು. ಆದರೆ, ಇಲ್ಲ ನಾನು ಈ ಸಿನಿಮಾ ಮಾಡ್ಬೇಕು ಎಂದುಕೊಂಡಿದ್ದೇನೆ. ಇಂತಹ ಸ್ಕ್ರಿಪ್ಟ್ ಕಳೆದುಕೊಳ್ಳುವುದಕ್ಕೆ ನನಗೆ ಇಷ್ಟ ಇಲ್ಲ ಎಂದು ವಾದಿಸಿ ಅವರನ್ನ ಒಪ್ಪಿಸಿ ಈ ಚಿತ್ರ ಆಯ್ಕೆ ಮಾಡಿಕೊಂಡೆ'' ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಯಾರ ಜೊತೆ ನಟಿಸುತ್ತಿದ್ದೇನೆ ಎನ್ನುವುದು ಮುಖ್ಯವಲ್ಲ
''ಯಾರ ಜೊತೆ ಮಾಡುತ್ತಿದ್ದೇನೆ ಎಂದು ಮುಖ್ಯವಲ್ಲ, ಇಂತಹ ಸ್ಕ್ರಿಪ್ಟ್ ಮಾಡಬೇಕು ಎಂಬ ಆಸೆಯಿಂದ ಈ ಚಿತ್ರ ಮಾಡಲು ನಿರ್ಧರಿಸಿದೆ. ಹೀಗೆ, ಪ್ರತಿಯೊಂದು ವಿಚಾರದಲ್ಲೂ ನಾನು ಫೈಟ್ ಮಾಡಿಕೊಂಡು ಬರುತ್ತಿದ್ದೇನೆ'' ಎಂದು ರಶ್ಮಿಕಾ ಮಂದಣ್ಣ ಭಾವುಕರಾದರು. ವೈಜಾಕ್ ನಲ್ಲಿ ನಡೆದ ಡಿಯರ್ ಕಾಮ್ರೇಡ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಈ ವಿಷ್ಯವನ್ನ ಹೇಳಿಕೊಂಡರು.

ರಶ್ಮಿಕಾಗೆ ಚಾಲೆಂಜ್ ಆದ ದೇವರಕೊಂಡ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಸಿನಿಮಾ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರು ಮತ್ತೆ ಈ ಜೋಡಿಯನ್ನ ಒಟ್ಟಿಗೆ ನೋಡುವ ಆಸೆ ಹಂಚಿಕೊಳ್ಳುತ್ತಾರೆ. ಆದರೆ, ಅದನ್ನ ಹೊರತು ಪಡಿಸಿ ವಿಜಯ್ ದೇವರಕೊಂಡ ಜೊತೆಗಿನ ಸ್ನೇಹ ಮತ್ತು ಆತ್ಮೀಯತೆಯನ್ನ ಅಭಿಮಾನಿಗಳು ಹಾಗೂ ಸಾಮಾನ್ಯ ಜನರ ಕೆಲವು ಪ್ರಶ್ನೆಗಳನ್ನ ಕೂಡ ಎದುರಿಸಬೇಕಾಗಿದೆ. ಹೋದಲ್ಲಿ ಬಂದಲ್ಲಿ ಇಂತಹ ಪ್ರಶ್ನೆಗಳು, ಸೋಶಿಯಲ್ ಮೀಡಿಯಾದಲ್ಲಿ ಇಂತಹ ಪ್ರಶ್ನೆಗಳು ಬರುತ್ತಿರುತ್ತೆ. ಅದನ್ನೆಲ್ಲಾ ಸವಾಲ್ ಆಗಿ ಸ್ವೀಕರಿಸಬೇಕಾಗುತ್ತೆ. ಬಹುಶಃ ರಶ್ಮಿಕಾ ಕೂಡ ಅದನ್ನೆ ಮಾಡುತ್ತಿದ್ದಾರೆ ಅನ್ಸುತ್ತೆ.


Click it and Unblock the Notifications











