ಖುಷ್ಬುರಂತೆ ರಶ್ಮಿಕಾಗೂ ದೇವಸ್ಥಾನ ಕಟ್ಟಿಸುತ್ತಾರಾ ಅಭಿಮಾನಿಗಳು?
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು, ಸುದ್ದಿ ಮಾಡುತ್ತಿರುವ ನಟಿ ಅಂದ್ರೆ ರಶ್ಮಿಕಾ ಮಂದಣ್ಣ. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಏನೆ ಹೇಳಿದ್ರು, ಯಾವುದೆ ಸಿನಿಮಾ ಮಾಡಿದ್ರು ಅಲ್ಲೊಂದು ವಿವಾದ ಸೃಷ್ಟಿಯಾಗುತ್ತೆ. ಟಾಲಿವುಡ್ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುತ್ತಿರುವ ರಶ್ಮಿಕಾ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.
ಇದೆ ಯಶಸ್ಸಿನಲ್ಲಿ ರಶ್ಮಿಕಾ ಈಗ ಸಖತ್ ಜೋಷ್ ನಲ್ಲಿ ಮಾತನಾಡುತ್ತಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಿರಿಕ್ ಸುಂದರಿ ಹಿರಿಯ ನಟಿ ಖುಷ್ಟು ಅವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬರಿ ಪ್ರಸ್ತಾಪ ಮಾಡಿದಲ್ಲ ಖುಷ್ಬುಗಾಗಿ ದೇವಸ್ಥಾನ ಕಟ್ಟಿಸಿರುವ ಬಗ್ಗೆಯು ಹೇಳುತ್ತಾ ತನ್ನ ಆಸೆಯನ್ನು ಬಹಿರಂಗ ಪಡಿಸಿದ್ದಾರೆ.

ರಶ್ಮಿಕಾ ಹೇಳಿಕೆ
"ನನ್ನ ತಂದೆ 90ರ ದಶಕದಲ್ಲಿ ನಟಿ ಖುಷ್ಟುಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿರುವ ಬಗ್ಗೆ ಹೇಳುತ್ತಿದ್ದರು. ನನಗೂ ಕೂಡ ಸ್ಮರಣೀಯ ಪ್ರಾಜೆಕ್ಟ್ ಮೂಲಕ ಜನರಲ್ಲಿ ಶಾಶ್ವತವಾಗಿ ನೆಲೆಸಿರಬೇಕು ಎನ್ನುವ ಆಸೆ ಇದೆ" ಎಂದು ಹೇಳಿಕೊಂಡಿದ್ದಾರೆ.

ರಶ್ಮಿಕಾಗಿ ನಿರ್ಮಾಣವಾಗುತ್ತಾ ದೇವಸ್ಥಾನ?
ರಶ್ಮಿಕಾ ಇಲ್ಲಿ ನೇರವಾಗಿ ದೇವಸ್ಥಾನ ನಿರ್ಮಾಸಬೇಕು ಎಂದು ಹೇಳದಿದ್ದರು. ಇದರ ಅರ್ಥ ಅಭಿಮಾನಿಗಳಲ್ಲಿ ರಶ್ಮಿಕಾಗಾಗಿ ದೇವಸ್ಥಾನ ನಿರ್ಮಿಸಿ ಎಂದು ಹೇಳಿದ್ದಂತಿದೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ರಶ್ಮಿಕಾ ತೆಲುಗು ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಗಾಗಿ ಅಭಿಮಾನಿಗಳು ರಶ್ಮಿಕಾಗಾಗಿ, ರಶ್ಮಿಕಾ ಹೆಸರಲ್ಲಿ ಏನಾದ್ರು ನಿರ್ಮಾಣ ಮಾಡಿದ್ರು ಅಚ್ಚರಿ ಇಲ್ಲ.

ಡಿಯರ್ ಕಾಮ್ರೇಡ್ ರಿಲೀಸ್
ಟಾಲಿವುಡ್ ನ ಹಿಟ್ ಜೋಡಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸಿನಿಮಾವಾಗಿತ್ತು. ಆದ್ರೆ ನಿರೀಕ್ಷೆಯ ಮಟ್ಟವನ್ನು ಮುಟ್ಟುವಲ್ಲಿ ಸಿನಿಮಾ ವಿಫಲವಾದ್ರು ರಶ್ಮಿಕಾ ಅಭಿಮಾನಿಗಳ ಮನಗೆದ್ದಿದ್ದಾರೆ.

ರಶ್ಮಿಕಾ ಕನ್ನಡ ವಿವಾದ
ರಶ್ಮಿಕಾ ಮಂದಣ್ಣ ವಿವಾದಗಳ ನಟಿ ಎಂದರು ತಪ್ಪಾಗಲ್ಲ. ಇತ್ತೀಚಿಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ನಟಿ ರಶ್ಮಿಕಾ. ಕನ್ನಡ ಕಷ್ಟ ಎಂದು ಹೇಳಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಪರಭಾಷಿಕರು, ಬೇರೆ ಕಡೆ ನೆಲೆಸಿರುವ ಕನ್ನಡಿಗರು ಯಾರೆ ಕನ್ನಡ ಮಾತನಾಡಿದ್ರು ರಶ್ಮಿಕಾಗೆ ಟ್ಯಾಗ್ ಮಾಡಿ ಆಕೆಯ ಕಾಲೆಳೆಯಲಾಗುತ್ತಿದೆ.


Click it and Unblock the Notifications











