»   » ಒಂದೇ ಒಂದು ಮಾತಿಗೆ ರಶ್ಮಿಕಾ ಮಂದಣ್ಣಗೆ ಇಂತಹ ಶಿಕ್ಷೆನಾ!?

ಒಂದೇ ಒಂದು ಮಾತಿಗೆ ರಶ್ಮಿಕಾ ಮಂದಣ್ಣಗೆ ಇಂತಹ ಶಿಕ್ಷೆನಾ!?

Posted By:
Subscribe to Filmibeat Kannada

ನಟಿ ರಶ್ಮಿಕಾ ಮಂದಣ್ಣ ಮತ್ತು ರಾಕಿಂಗ್ ಸ್ಟಾರ್ ಯಶ್ ವಿವಾದ ಈಗ ಬಿಸಿ ಬಿಸಿ ಚರ್ಚೆ ಆಗಿದೆ. ರಶ್ಮಿಕಾ ಆಡಿದ ಒಂದೇ ಒಂದು ಮಾತು ದೊಡ್ಡ ವಿವಾದ ಸೃಷ್ಟಿ ಮಾಡಿದೆ. ಅದೇನೇ ಇದ್ದರೂ ಮಾಡಿದುಣ್ಣೋ ಮಹಾರಾಯ ಎನ್ನುವ ತರ ಆಗಿದೆ ರಶ್ಮಿಕಾ ಮಂದಣ್ಣ ಪರಿಸ್ಥಿತಿ.

ರಶ್ಮಿಕಾ ವಿಚಾರದಲ್ಲಿ ಅಭಿಮಾನಿಗಳಿಗೆ ಯಶ್ ಕೊಟ್ಟ ಸಂದೇಶ

ಒಂದು ಕಡೆ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾಗೆ ಬೆಂಡೆತ್ತುತ್ತಿದ್ದಾರೆ. ಸ್ವತಃ ಯಶ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದೆಲ್ಲದರ ನಡುವೆ ರಶ್ಮಿಕಾ ಮಾಡಿಕೊಂಡ ಎಡವಟ್ಟಿನಿಂದ ಅವರಿಗೆ ದೊಡ್ಡ ಲಾಸ್ ಆಗಿದೆ. ಮುಂದೆ ಓದಿ...

ರಶ್ಮಿಕಾ ರೇಟಿಂಗ್ ಇಳಿಕೆ

ಯಶ್ ಜೊತೆ ವಿವಾದ ಆಗಿ ದೊಡ್ಡ ಸುದ್ದಿ ಮಾಡಿದ ಬಳಿಕ ರಶ್ಮಿಕಾ ಮಂದಣ್ಣ ಅವರ ಫೇಸ್ ಬುಕ್ ರೇಟಿಂಗ್ ಇಳಿಕೆ ಆಗಿದೆ.

ಒಂದು ಸ್ಟಾರ್ ಕೊಡುತ್ತಿರುವ ಫ್ಯಾನ್ಸ್

ರಶ್ಮಿಕಾ ಅವರ ಫೇಸ್ ಬುಕ್ ಪೇಜ್ ಗೆ ಈಗ ಅನೇಕರು ಐದು ಸ್ಟಾರ್ ಗಳಿಗೆ ಬರೀ ಒಂದು ಸ್ಟಾರ್ ಕೊಡುತ್ತಿದ್ದಾರೆ. ಇದರಿಂದ ರಶ್ಮಿಕಾ ಫೇಸ್ ಬುಕ್ ರೇಟಿಂಗ್ ಕುಸಿದಿದೆ.

ರಾಕಿಂಗ್ ಸ್ಟಾರ್ ಯಶ್ 'ಶೋ ಆಫ್' ಅಲ್ಲಾ, 'ಶೋ ಮ್ಯಾನ್'.!

270ಕ್ಕೂ ಹೆಚ್ಚು ಜನ

ಸುಮಾರು 270ಕ್ಕೂ ಹೆಚ್ಚು ಜನ ರಶ್ಮಿಕಾ ಮಂದಣ್ಣ ಫೇಸ್ ಬುಕ್ ಪೇಜ್ ಗೆ ಒಂದು ಸ್ಟಾರ್ ಕೊಟ್ಟಿದ್ದಾರೆ. ಹಿಂದೆ ರಶ್ಮಿಕಾ ಅವರಿಗೆ ಸಾಕಷ್ಟು ಜನ ಐದಕ್ಕೆ 4.8, 4.9, 5.0 ರೇಟಿಂಗ್ ಗಳನ್ನು ಕೊಡುತ್ತಿದ್ದರು.

ರಶ್ಮಿಕಾ ಮಂದಣ್ಣ ಮಾತಿಗೆ ಕೆಂಡ ಕಾರುತ್ತಿರುವ ಯಶ್ ಅಣ್ತಮ್ಮಂದಿರು

ಸದ್ಯದ ರೇಟಿಂಗ್

ರಶ್ಮಿಕಾ ಫೇಸ್ ಬುಕ್ ಪೇಜ್ ನ ಒಟ್ಟಾರೆ ರೇಟಿಂಗ್ ಹಿಂದೆ 4.7 ಇತ್ತು. ಆದರೆ ಈಗ ಅದು 2.6ಗೆ ಕುಸಿದಿದೆ.

ರಶ್ಮಿಕಾ ಬಗ್ಗೆ ಟ್ರೋಲ್

ಯಶ್ ಅಭಿಮಾನಿಗಳು ನಿನ್ನೆಯಿಂದ ಸಿಕ್ಕಾಪಟ್ಟೆ ಟ್ರೋಲ್ ಮಾಡುವವ ಮೂಲಕ ರಶ್ಮಿಕಾ ಅವರ ಕಾಲು ಎಳೆಯುತ್ತಿದ್ದಾರೆ. ಯಶ್ ಅವರಿಗೆ ಕ್ಷಮೆ ಕೇಳಬೇಕು ಎಂಬುದು ಅವರ ಫ್ಯಾನ್ಸ್ ಗಳ ಕೂಗು.

'ಕಿರಿಕ್' ಹುಡುಗಿ ಸಾನ್ವಿಯ ಫ್ಯಾಷನ್ ಲೋಕದ ಅದ್ಭುತ ಕ್ಷಣಗಳಿವು

English summary
Kannada Actress Rashmika Mandanna Facebook page rating goes down after she commented on Yash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada