For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾಗೆ ಪತ್ರ ಬರೆದ 8ರ ಪೋರ, ಈ ಬಾಲಕನ ಆಸೆ ಏನು ಗೊತ್ತಾ?

  |
  ರಶ್ಮಿಕಾಗೆ ಬಂತೊಂದು ವಿಭಿನ್ನವಾದ ಪತ್ರ | FILMIBEAT KANNADA

  ರಶ್ಮಿಕಾ ಮಂದಣ್ಣ ಫ್ಯಾನ್ಸ್ ಬಳಗ ದಿನದಿಂದ ಹೆಚ್ಚುತ್ತಿದೆ. ತೆಲುಗಿನಲ್ಲಿ ಗೀತಾ ಗೋವಿಂದಂ ಸಿನಿಮಾ ಮಾಡಿದ ಬಳಿಕ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಗಳನ್ನ ಹಿಂದಿಕ್ಕಿ ಹೆಚ್ಚು ಸದ್ದು ಮಾಡ್ತಿದ್ದಾರೆ.

  ಪುಟ್ಟ ಬಾಲಕರಿಂದ ಹಿಡಿದು ಹಿರಿಯರವರೆಗೂ ರಶ್ಮಿಕಾ ಅವರನ್ನ ಇಷ್ಟ ಪಡುವ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇದೀಗ, 8 ವರ್ಷದ ಬಾಲಕನೊಬ್ಬ ರಶ್ಮಿಕಾಗೆ ಪತ್ರ ಬರೆದಿದ್ದು, ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಭಿಮಾನಿಗಳನ್ನ ಬೈದ ವ್ಯಕ್ತಿ ವಿರುದ್ಧ ರಶ್ಮಿಕಾ ಮಂದಣ್ಣ ಸಿಡಿಮಿಡಿ

  ರಶ್ಮಿಕಾ ಅಂದ್ರೆ ನನಗೆ ತುಂಬಾ ಇಷ್ಟ. ಒಮ್ಮೆ ಭೇಟಿಯಾದಾಗ ಅವರನ್ನ ಪ್ರೀತಿಯಿಂದ ತಬ್ಬಿಕೊಳ್ಳಬೇಕು ಎಂದು ಆ ಬಾಲಕ ಆಸೆಪಟ್ಟಿದ್ದಾನೆ. ಈ ಪತ್ರದಲ್ಲಿ ಪೂರ್ತಿ ಏನು ಬರೆಯಲಾಗಿದೆ ಎಂದು ನೋಡುವುದಾರೇ ''ನೀವು ತುಂಬಾ ಮಸುಂದರವಾದ ಮಹಿಳೆ. ನಿಮ್ಮ ನಟನೆ ನನಗಿಷ್ಟು. ನಿಮ್ಮ ಮುಖವೂ ಸುಂದರವಾಗಿದೆ. ನಿಮ್ಮ ಸಿನಿಮಾಗಳು ಮತ್ತು ಹಾಡುಗಳೆಂದರೆ ತುಂಬಾ ಇಷ್ಟ''.

  ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡ ಚಿತ್ರರಂಗ ಅಪ್ಸೆಟ್: ಯಾರ್ರೀ ಹೇಳಿದ್ದು? ಸಾಕ್ಷಿ ಕೊಡಿ!

  ''ನೀವು ನಟಿಸಿರುವ ಗೀತಾ ಗೋವಿಂದಂ ಸಿನಿಮಾ ನೋಡಿದೆ. ಮಹಿಳೆಯರನ್ನ ಹೇಗೆ ಗೌರವಿಸಬೇಕು ಎನ್ನುವುದನ್ನ ಈ ಚಿತ್ರ ನೋಡಿ ಕಲಿತುಕೊಂಡೆ. ನೀವು ಮಾತನಾಡುವ ಶೈಲಿ ಹಾಗೂ ನಟನೆ ನನಗೆ ಹೆಚ್ಚು ಇಷ್ಟ. ನೀವು ನಟಿಸಿರುವ ಸಿನಿಮಾಗಳ ಹಾಡು ಕೇಳಲು ಹೆಚ್ಚು ಸಂತಸವಾಗುತ್ತದೆ. ಭವಿಷ್ಯದಲ್ಲಿ ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕರೇ ಪ್ರೀತಿಯಿಂದ ನಿಮ್ಮನ್ನು ತಬ್ಬಿಕೊಳ್ಳಬೇಕು'' ಎಂದು ಬರೆದಿದ್ದಾನೆ.

  ಸದ್ಯ ಕನ್ನಡದಲ್ಲಿ ದರ್ಶನ್ ಜೊತೆ ಅಭಿನಯಿಸಿರುವ ಯಜಮಾನ ಸಿನಿಮಾ ತೆರೆಕಾಣಬೇಕಿದೆ. ಆ ಕಡೆ ತೆಲುಗಿನಲ್ಲಿ ಡಿಯರ್ ಕಾರ್ಮೆಡ್ ಸಿನಿಮಾದ ಶೂಟಿಂಗ್ ಮಾಡ್ತಿದ್ದಾರೆ.

  English summary
  8 year old fan wanted to hug actress rashmika mandanna and he expressed his wish in his letter which he wrote to her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X